Site icon Vistara News

Shivamogga News: ವಲಯ ಮಟ್ಟದ ಕ್ರೀಡಾಕೂಟ; ರಿಪ್ಪನ್‌ಪೇಟೆ ಗುಡ್ ಶಫರ್ಡ್ ಶಾಲೆಗೆ ಸಮಗ್ರ ಪ್ರಶಸ್ತಿ

Zonal Level Sports Comprehensive Award for Ripponpete Good Shepherd School

ರಿಪ್ಪನ್‌ಪೇಟೆ: ಹೊಸನಗರ (Hosanagara) ತಾಲೂಕಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ (Zonal Level Sports) ರಿಪ್ಪನ್‌ಪೇಟೆ (Ripponpete) ಪಟ್ಟಣದ ಗುಡ್ ಶಫರ್ಡ್ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು (Award) ಪಡೆದುಕೊಂಡಿದ್ದಾರೆ.

ಪಟ್ಟಣದ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಗುಡ್ ಶೆಫರ್ಡ್ ಶಾಲೆಯ ವಿದ್ಯಾರ್ಥಿಗಳು ಬಾಲಕರ ವಿಭಾಗದಲ್ಲಿ ವಾಲಿಬಾಲ್, ರಿಲೇ, 100 ಮೀ ಓಟ, ಗುಂಡು ಎಸೆತ, ಎತ್ತರ ಜಿಗಿತ, ತಟ್ಟೆ ಎಸೆತ, 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿನಿಯರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ತಟ್ಟೆ ಎಸೆತ 200 ಮೀಟರ್ ಓಟ, ರಿಲೇ, 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಳ್ಳುವುದರ ಮೂಲಕ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Vijayanagara News: ಒಂದೇ ದಿನ ಆರು ದೇವಸ್ಥಾನಗಳಲ್ಲಿ ಕಳ್ಳತನ

ಕ್ರೀಡಾಕೂಟದಲ್ಲಿ ಭಾಗಿಯಾಗಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಗುಡ್ ಶೆಫರ್ಡ್ ಆಡಳಿತ ಮಂಡಳಿ ಹಾಗೂ ಪೋಷಕ ಶಿಕ್ಷಕರ ಸಮಿತಿಯ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಗುಡ್ ಶಫರ್ಡ್ ಚರ್ಚ್‌ನ ಧರ್ಮಗುರು ರೆ. ಫಾ. ಬಿನೋಯ್, ಮುಖ್ಯ ಶಿಕ್ಷಕಿ ಜ್ಯೋಸ್ಪಿನ್, ದೈಹಿಕ ಶಿಕ್ಷಕ ಸುರೇಶ್, ಗುಡ್ ಶಫರ್ಡ್ ಪೋಷಕ ಶಿಕ್ಷಕ ಸಮಿತಿಯ ಸಬಾಸ್ಟಿನ್, ಹಸನಬ್ಬ ಬ್ಯಾರಿ, ದಯಾನಂದ, ಶಿಕ್ಷಕರಾದ ರಾಘವೇಂದ್ರ, ಮಂಜುನಾಥ, ಷಣ್ಮುಖ, ಇನ್ನಿತರರಿದ್ದರು.

Exit mobile version