ಮುಂಬೈ : ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಬಾಲಿವುಡ್‍ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಹಾಗಾಗಿ ಇವರ ಅಭಿಮಾನಿಗಳು ಇವರಿಗೆ ಬಿಗ್ ಬಿ ಎಂದೇ ಕರೆಯುತ್ತಾರೆ. ಅಲ್ಲದೇ ಬಾಲಿವುಡ್ ಜಗತ್ತಿನಲ್ಲಿ ತಮ್ಮ ಸೌಂದರ್ಯದ ಮೂಲಕ ಮೋಡಿ ಮಾಡಿ ದುಬೈನಲ್ಲಿ ದುರಂತವಾಗಿ ಸಾವಿಗೀಡಾದ ನಟಿ ಶ್ರೀದೇವಿ ಅವರು ಅಮಿತಾಭ್ ಬಚ್ಚನ್ (Amitabh Bachchan-Sridevi Movies) ಸೇರಿದಂತೆ ಹಿಂದಿ ಚಿತ್ರರಂಗದಲ್ಲಿ ಅನೇಕ ತಾರೆಗಳೊಂದಿಗೆ ಕೆಲಸ ಮಾಡಿದ್ದಾರೆ. ಬಚ್ಚನ್ ಮತ್ತು ಶ್ರೀದೇವಿ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ನೀವು ಈ ಜೋಡಿಯ ಚಿತ್ರ ನೋಡಲು ಬಯಸಿದ್ದರೆ ಈ ಜೋಡಿ ನಟಿಸಿದ 5 ಚಿತ್ರಗಳ ವಿವರ ಇಲ್ಲಿದೆ.
ಖುದಾ ಗವಾಹ್(Khuda Gawah):
ಅಮಿತಾಭ್ ಬಚ್ಚನ್ ಮತ್ತು ಶ್ರೀದೇವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಖುದಾ ಗವಾ 1992ರಲ್ಲಿ ಬಿಡುಗಡೆಯಾಗಿತ್ತು. ಬಿಗ್ ಬಿ, ಬಾದ್ ಷಾ ಖಾನ್ ಪಾತ್ರವನ್ನು ನಿರ್ವಹಿಸಿದರೆ, ಶ್ರೀದೇವಿ ಬೆನಜೀರ್ ಮತ್ತು ಮೆಹೆಂದಿ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಬಾದ್ ಶಾ ಖಾನ್ ಬೆನಜೀರ್ ಳನ್ನು ಪ್ರೀತಿಸುತ್ತಾನೆ ಮತ್ತು ಅವಳ ತಂದೆಯನ್ನು ಕೊಂದ ಕೊಲೆಗಾರನನ್ನು ಕಂಡುಹಿಡಿಯಲು ಅವನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಹೇಗೆ ಪ್ರಯಾಣಿಸುತ್ತಾನೆ ಎಂಬುದರ ಸುತ್ತ ಈ ಕಥೆ ಸುತ್ತುತ್ತದೆ. ಇದು ಈಗ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಲಭ್ಯವಿದೆ.
ಇಂಗ್ಲಿಷ್ ವಿಂಗ್ಲಿಷ್ (English Vinglish):
ಗೌರಿ ಶಿಂಧೆ ನಿರ್ದೇಶನದ ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ಶ್ರೀದೇವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಶ್ರೀದೇವಿ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಮಾರಾಟ ಮಾಡುವ ಉದ್ಯಮಿ ಶಶಿ ಗೋಡಬೋಲೆ ಪಾತ್ರವನ್ನು ನಿರ್ವಹಿಸಿದ್ದಾರೆ. ಆದಿಲ್ ಹುಸೇನ್ ಅವರ ಪತಿ ಸತೀಶ್ ಗೋಡಬೋಲೆ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಇಂಗ್ಲಿಷ್ ತಿಳಿಯದ ಶಶಿ ಇಂಗ್ಲಿಷ್ ಕಲಿತು ಹೇಗೆ ಮುಂದೆ ಸಾಗುತ್ತಾನೆ ಎಂಬುದನ್ನು ತಿಳಿಸುತ್ತದೆ. ಶಶಿ ಪಾತ್ರದಲ್ಲಿ ಶ್ರೀದೇವಿ ಅಮಿತಾಬ್ ಬಚ್ಚನ್ ಅವರನ್ನು ವಿಮಾನದಲ್ಲಿ ಪ್ರಯಾಣಿಸುವಾಗ ಭೇಟಿಯಾಗುತ್ತಾರೆ. ಈ ಚಿತ್ರವನ್ನು ನೀವು ಝೀ5 ನಲ್ಲಿ ನೋಡಬಹುದು.
ಆಖ್ರಿ ರಾಸ್ತಾ(Aakhree Rasta):
ಕೆ ಭಾಗ್ಯರಾಜ್ ನಿರ್ದೇಶನದ ಆಖ್ರಿ ರಾಸ್ತಾ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಬ್ ಬಚ್ಚನ್ ಅವರು ಈ ಚಿತ್ರದಲ್ಲಿ ಡೇವಿಡ್ ಡಿ ಕೋಸ್ಟಾ ಪಾತ್ರದಲ್ಲಿ ನಟಿಸಿದ್ದಾರೆ ಹಾಗೂ ನಟಿ ಜಯಪ್ರದಾ ಪತ್ನಿ ಮೇರಿ ಡಿ’ಕೋಸ್ಟಾ ಪಾತ್ರವನ್ನು ಮಾಡಿದ್ದಾರೆ. ಪತ್ನಿ ಮೇರಿ ಡಿ’ಕೋಸ್ಟಾ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಡೇವಿಡ್ ಡಿ ಕೋಸ್ಟಾ ಪಾತ್ರದ ಸುತ್ತ ಈ ಕಥೆ ಸುತ್ತುತ್ತದೆ. ಡಿ ಕೋಸ್ಟಾ ಅವರ ಮಗ ಜೇಮ್ಸ್ ಮತ್ತು ಅವರ ಸ್ನೇಹಿತ (ಅನುಪಮ್ ಖೇರ್) ಅವರ ಮಗ, ಸಿಐಡಿ ಇನ್ಸ್ಪೆಕ್ಟರ್ ವಿಜಯ್ ಅವರ ಪಾತ್ರವನ್ನು ಅಮಿತಾಬ್ ಬಚ್ಚನ್ ಅವರೇ ಮಾಡಿದ್ದಾರೆ. ವಿಜಯ್ ಗೆಳತಿ ವಿನಿತಾ ಭಟ್ನಾಗರ್ ಪಾತ್ರದಲ್ಲಿ ಶ್ರೀದೇವಿ ನಟಿಸಿದ್ದಾರೆ. ಈ ಚಿತ್ರವು 1986 ರಲ್ಲಿ ಬಿಡುಗಡೆಯಾಯಿತು. ಇದನ್ನು ಈಗ ಝೀ5ನಲ್ಲಿ ನೋಡಬಹುದು.
ಇನ್ಕ್ವಿಲಾಬ್ (Inquilaab):
ಇದು ಅಮಿತಾಭ್ ಬಚ್ಚನ್ ಮತ್ತು ಶ್ರೀದೇವಿ ಜೋಡಿಯಾಗಿ ನಟಿಸಿದ ಮೊದಲ ಚಿತ್ರವಾಗಿದೆ. ಟಿ ರಾಮರಾವ್ ನಿರ್ದೇಶನದ ಈ ಚಿತ್ರವು 1984ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಬಿಗ್ ಬಿ ಅಮರನಾಥ್ ಪಾತ್ರವನ್ನು ನಿರ್ವಹಿಸಿದರೆ, ಶ್ರೀದೇವಿ ಈ ಚಿತ್ರದಲ್ಲಿ ಆಶಾ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಉತ್ಪಲ್ ದತ್, ಖಾದರ್ ಖಾನ್, ರಂಜೀತ್, ಶಕ್ತಿ ಕಪೂರ್ ಮತ್ತು ನಿರುಪಾ ರಾಯ್ ನಟಿಸಿದ್ದಾರೆ. ಈ ಚಿತ್ರದ ಕಥೆಯು ಬಚ್ಚನ್ ಅವರ ಪಾತ್ರವಾದ ಅಮರನಾಥ್ ಅಲಿಯಾಸ್ ಅಮರ್ ಸುತ್ತ ಸುತ್ತುತ್ತದೆ, ಉತ್ತಮ ಶಿಕ್ಷಣ ಪಡೆದ ಅಮರ್ ಗೆ ರಾಜಕಾರಣಿ ಶಂಕರ್ ನಾರಾಯಣ್ ಪಾತ್ರವನ್ನು ನಿರ್ವಹಿಸುತ್ತಿರುವ ಖಾದರ್ ಖಾನ್, ಪೊಲೀಸ್ ಅಧಿಕಾರಿಯಾಗಲು ತರಬೇತಿ ನೀಡಿ ನಂತರ ತನ್ನ ಅಪರಾಧ ಚಟುವಟಿಕೆಗಳಲ್ಲಿ ಅಮರ್ ನನ್ನು ಬಳಸುತ್ತಾನೆ. ಇದು ಈಗ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಲಭ್ಯವಿದೆ.
ಇದನ್ನೂ ಓದಿ: ಅಮೆಜಾನ್‌ನಲ್ಲಿ 55,000 ರೂ. ಮೊಬೈಲ್ ಫೋನ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಟೀ ಕಪ್!
ಬಾಂಬೆ ಟಾಕೀಸ್ (Bombay Talkies):
ಬಾಂಬೆ ಟಾಕೀಸ್ ಚಿತ್ರ 2013ರಲ್ಲಿ ಬಿಡುಗಡೆಯಾಯಿತು. ಕರಣ್ ಜೋಹರ್, ಅನುರಾಗ್ ಕಶ್ಯಪ್, ದಿಬಾಕರ್ ಬ್ಯಾನರ್ಜಿ ಮತ್ತು ಜೋಯಾ ಅಖ್ತರ್ ಅವರಂತಹ ಚಲನಚಿತ್ರ ಪರಿಣತರು ನಿರ್ದೇಶಿಸಿದ ನಾಲ್ಕು ವಿಭಾಗಗಳನ್ನು ಒಳಗೊಂಡ ಚಿತ್ರವಾಗಿದೆ. ಇದರಲ್ಲಿ ಅಮಿತಾಭ್ ಬಚ್ಚನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. ತನ್ನ ತಂದೆಯ ಕೊನೆಯ ಆಸೆಯನ್ನು ಪೂರೈಸಲು ಅಲಹಾಬಾದ್ ನಿಂದ ಮುಂಬೈಗೆ ಪ್ರಯಾಣಿಸಿದ ವಿಜಯ್ ಪಾತ್ರದಲ್ಲಿ ವಿನೀತ್ ಕುಮಾರ್ ಸಿಂಗ್ ನಟಿಸಿದ್ದಾರೆ. ಶ್ರೀದೇವಿ ಇತರ ಜನಪ್ರಿಯ ನಟರೊಂದಿಗೆ ಬಾಂಬೆ ಟಾಕೀಸ್‌ನ ಅಪ್ನಾ ಬಾಂಬೆ ಟಾಕೀಸ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೀರ್ ಖಾನ್, ಕರಿಷ್ಮಾ ಕಪೂರ್, ಮಾಧುರಿ ದೀಕ್ಷಿತ್, ಅಕ್ಷಯ್ ಕುಮಾರ್, ಜೂಹಿ ಚಾವ್ಲಾ, ಸೈಫ್ ಅಲಿ ಖಾನ್, ಪ್ರಿಯಾಂಕಾ ಚೋಪ್ರಾ, ಫರ್ಹಾನ್ ಅಖ್ತರ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕಪೂರ್ ಮತ್ತು ಇತರರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಈಗ ವೀಕ್ಷಿಸಲು ನೆಟ್‌ಫ್ಲಿಕ್ಸ್‌ನಲ್ಲಿ ಸಿಗಲಿದೆ.