ಬೆಂಗಳೂರು: ಪಿಎನ್ ಎಸ್ ವಿಸ್ತಾರ ಸುದ್ದಿವಾಹಿನಿಗೆ ಬೆಂಗಳೂರಿನ ಬಿಜೆಪಿ ಮುಖಂಡ, ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್. ಆರ್. ರಮೇಶ್ ಶುಭ ಹಾರೈಸಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಕಟ್ಟಡದಲ್ಲಿರುವ ಚಾನೆಲ್ ನ ಕಚೇರಿಗೆ ಆಗಮಿಸಿ ಶುಭ ಕೋರಿದ ಅವರು, ಪಿಎನ್ ಎಸ್ ವಿಸ್ತಾರ ಚಾನೆಲ್ ಮುಂಚೂಣಿ ಸುದ್ದಿವಾಹಿನಿಯಾಗಿ ಪರಿವರ್ತನೆಯಾಗಲಿ ಎಂದು ಹಾರೈಸಿದರು.
ಚಾನೆಲ್ ಹೊಸ ಆಡಳಿತ ಮಂಡಳಿಯೊಂದಿಗೆ ಕಾರ್ಯಾರಂಭ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಚಾನೆಲ್ ನಿಷ್ಪಕ್ಷಪಾತ, ಸಮಾಜಮುಖಿ ಸುದ್ದಿಗಳನ್ನು ಯಾವುದೇ ಪೂರ್ವಾಗ್ರಹಪೀಡಿತವಾಗದೆ ಬಿತ್ತರಿಸಲಿ. ನೈಜ, ಸತ್ಯ ವರದಿಗಳನ್ನು ದಾಖಲೆಗಳ ಸಹಿತ ವೀಕ್ಷಕರಿಗೆ ಮುಟ್ಟಿಸಲಿ ಎಂದರು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ, ಅವರ ಜೀವನಕ್ಕೆ ನೆರವಾಗುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆಯೂ ಅವರು ಕೋರಿದರು.
ಚಾನೆಲ್ ನ ಧ್ಯೇಯೋದ್ದೇಶಗಳನ್ನು ತಿಳಿದುಕೊಂಡ ರಮೇಶ್ ಅವರು ಮೆಚ್ಚುಗೆ ಸೂಚಿಸಿದರು.
ಪಿಎನ್‌ಎಸ್ ವಿಸ್ತಾರ ಮುಂಚೂಣಿ ಸುದ್ದಿವಾಹಿನಿಯಾಗಲಿ: ಬಿಜೆಪಿ ಮುಖಂಡ ಎನ್.ಆರ್. ರಮೇಶ್ ವಿಶ್ವಾಸ

