ಮುಂಬೈ : ಜೀವನದಲ್ಲಿ ಪ್ರೀತಿ ಎನ್ನುವುದು ಬಹಳ ಅಮೂಲ್ಯವಾದುದು. ಪ್ರೀತಿಯಿದ್ದರೆ ಮಾತ್ರ ಒಂದು ಸಂಬಂಧ ದೀರ್ಘಕಾಲ ಇರಲು ಸಾಧ್ಯ. ಹಾಗಾಗಿ ಪ್ರೀತಿಯನ್ನು ಸಂಬಂಧದ ಅಡಿಪಾಯ ಎಂದೇ ಕರೆಯಬಹುದು. ಎಲ್ಲದಕ್ಕೂ ಮುಕ್ತಾಯ ಅಂತ ಇರುತ್ತದೆ. ಆದರೆ ಪ್ರೀತಿ ಹಾಗಲ್ಲ. ಅದು ಹೇಗೆ ಹುಟ್ಟುತ್ತದೆ ಎಂದು ತಿಳಿಯುವುದಿಲ್ಲ. ಮತ್ತು ಅದು ಯಾವಾಗ ಮುಕ್ತಾಯವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚು ಸಿನಿಮಾಗಳನ್ನು ಪ್ರೀತಿಯನ್ನು ಆಧಾರವಾಗಿಟ್ಟು ಮಾಡಿರುತ್ತಾರೆ. ಹಾಗಾಗಿ ಪ್ರೀತಿಗಾಗಿ ವಯಸ್ಸು ಮತ್ತು ಸಂಪ್ರದಾಯವನ್ನು ಮೀರುವ 5 ಬಾಲಿವುಡ್ (Bollywood Cinema) ಚಲನಚಿತ್ರಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
1. ಲವ್ ಕಿ ಅರೇಂಜ್ ಮ್ಯಾರೇಜ್ :
ಈ ಚಿತ್ರದಲ್ಲಿ ಎರಡು ತಲೆಮಾರುಗಳು ಪ್ರೀತಿಯನ್ನು ನ್ಯಾವಿಗೇಟ್ ಮಾಡಲಾಗುತ್ತದೆ. ಸನ್ನಿ ಸಿಂಗ್ ಇಶಿಕಾ (ಅವ್ನೀತ್ ಕೌರ್) ಳನ್ನು ಪ್ರೀತಿಸುವ ಲವ್ ಎಂಬ ಯುವಕನಾಗಿ ನಟಿಸುತ್ತಾನೆ.
ಆದರೆ ಲವ್‌ನ ವಿಧುರ ತಂದೆ (ಅನ್ನು ಕಪೂರ್) ಇಶಿಕಾಳ ತಾಯಿಯನ್ನು (ಸುಪ್ರಿಯಾ ಪಾಠಕ್) ಪ್ರೀತಿಸಿದಾಗ ಅವರ ಯೋಜನೆಗಳು ಅನಿರೀಕ್ಷಿತ ತಿರುವು ಪಡೆಯುತ್ತವೆ. ಇವರ ಪ್ರೇಮಕಥೆಯಲ್ಲಿ ಹಾಸ್ಯದ ಹೊನಲು ಹೆಚ್ಚಾಗಿದೆ. ಪ್ರೀತಿ ಎನ್ನುವುದು ವಯಸ್ಸು ಮತ್ತು ಹಿನ್ನಲೆಯನ್ನು ನೋಡುವುದಿಲ್ಲ ಎಂಬುದು ಈ ಚಿತ್ರದಲ್ಲಿ ತೋರಿಸಲಾಗಿದೆ.
2. ಇಂಗ್ಲಿಷ್ ವಿಂಗ್ಲಿಷ್ :
ಈ ಚಿತ್ರ ಮತ್ತೆ ನಟಿ ಶ್ರೀದೇವಿ ಅವರನ್ನು ಸಿನಿಮಾ ರಂಗಕ್ಕೆ ಕರೆತಂದಿತ್ತು. ಪ್ರತಿಭಾನ್ವಿತ ಉದ್ಯಮಿ ಮತ್ತು ಮಧ್ಯವಯಸ್ಕ ಗೃಹಿಣಿ ಶಶಿ ಗೋಡಬೋಲೆ ಪಾತ್ರದಲ್ಲಿ ಶ್ರೀದೇವಿ ನಟಿಸಿದ್ದಾರೆ, ಇದರಲ್ಲಿ ಅವರಿಗೆ ಇಂಗ್ಲಿಷ್ ಸರಿಯಾಗಿ ತಿಳಿಯದ ಕಾರಣ ಅವರನ್ನು ಕುಟುಂಬದವರು ಗೇಲಿ ಮಾಡುತ್ತಾರೆ.
ನ್ಯೂಯಾರ್ಕ್ ನಗರಕ್ಕೆ ಪ್ರವಾಸಕ್ಕೆ ಬಂದ ಶಶಿ, ತನ್ನ ಮೌಲ್ಯವನ್ನು ಸಾಬೀತುಪಡಿಸಲು ನಿರ್ಧರಿಸಿ, ಇಂಗ್ಲಿಷ್ ಕಲಿಯಲು ಜೀವನವನ್ನು ಬದಲಾಯಿಸುವ ಸಾಹಸಕ್ಕೆ ಹೊರಡುತ್ತಾಳೆ. ಇದರಲ್ಲಿ ಸ್ವಲ್ಪ ಹಾಸ್ಯವನ್ನು ಸೇರಿಸಲಾಗಿದೆ. ಈ ಚಿತ್ರದಲ್ಲಿ ನಿರ್ದೇಶಕಿ ಗೌರಿ ಶಿಂಧೆ ಅವರ ಕೆಲಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
3. ಲಂಚ್ ಬಾಕ್ಸ್ [ಅಮೆಜಾನ್ ಪ್ರೈಮ್ ವಿಡಿಯೋ] :
ಸುಂದರವಾಗಿ ರಚಿಸಲಾದ ಈ ಚಿತ್ರದಲ್ಲಿ ಇರ್ಫಾನ್ ಖಾನ್ ಅವರು ಸಾಜನ್ ಎಂಬ ಕೋಪದ ಸ್ವಭಾವದ ವಿಧುರ ಮತ್ತು ನಿಮ್ರತ್ ಕೌರ್ ಅಡುಗೆಯ ಮೂಲಕ ತನ್ನ ಪತಿಯನ್ನು ಆಕರ್ಷಿಸುವ ಗೃಹಿಣಿ ಇಳಾ ಪಾತ್ರದಲ್ಲಿ ನಟಿಸಿದ್ದಾರೆ.
ಮುಂಬೈನ ಪ್ರಸಿದ್ಧ ಡಬ್ಬಾವಾಲಾ ವ್ಯವಸ್ಥೆಯು ಇಳಾ ಪ್ರೀತಿಯಿಂದ ತಯಾರಿಸಿದ ಊಟವನ್ನು ಅವಳ ಗಂಡನ ಬದಲು ಸಾಜನ್ ಗೆ ತಪ್ಪಾಗಿ ತಲುಪಿಸಿದಾಗ, ಟಿಫಿನ್ ಕ್ಯಾರಿಯರ್ ನಲ್ಲಿ ವಿನಿಮಯವಾದ ಪತ್ರದ ಮೂಲಕ ಅವರ ನಡುವೆ ಸ್ನೇಹವು ಅರಳುತ್ತದೆ. ಆದರೆ ಅವರು ಎಂದಿಗೂ ಭೇಟಿಯಾಗುವುದಿಲ್ಲ. ನಿರ್ದೇಶಕ ರಿತೇಶ್ ಬಾತ್ರಾ ಇಬ್ಬರು ಒಂಟಿ ಜೀವಗಳು ಪರಸ್ಪರರ ಮಾತುಗಳಲ್ಲಿ ಸಮಾಧಾನ ಮಾಡುವಂತಹ ಕಥೆಯನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ.
4.ದೇ ದೇ ಪ್ಯಾರ್ ದೇ [ಡಿಸ್ನಿ + ಹಾಟ್ಸ್ಟಾರ್] :
ದೇ ದೇ ಪ್ಯಾರ್ ದೇ ಒಂದು ಉಲ್ಲಾಸದಾಯಕ ರೊಮ್ಯಾಂಟಿಕ್ ಚಿತ್ರವಾಗಿದ್ದು, ಇದು ವಯಸ್ಸಿನ ಅಂತರದ ಸಂಬಂಧಗಳು ಬೆಸೆಯುವುದನ್ನು ಹಾಸ್ಯದಲ್ಲಿ ತೋರಿಸುತ್ತದೆ. ಅಜಯ್ ದೇವಗನ್ 50 ವರ್ಷದ ಲಂಡನ್ ಮೂಲದ ವಿಚ್ಛೇದಿತ ಆಶಿಶ್ ಮೆಹ್ರಾ ಪಾತ್ರದಲ್ಲಿ ನಟಿಸಿದ್ದಾರೆ, ಅವರು ತಮ್ಮಗಿಂತ ತುಂಬಾ ಕಡಿಮೆ ವಯಸ್ಸಿನ ಮಹಿಳೆ ಆಯೇಷಾ (ರಾಕುಲ್ ಪ್ರೀತ್ ಸಿಂಗ್) ಅವರನ್ನು ಪ್ರೀತಿಸುತ್ತಾರೆ.
ಆಶಿಶ್ ತನ್ನ ಮಾಜಿ ಪತ್ನಿ ಮಂಜು (ಟಬು) ಅವರನ್ನು ಭೇಟಿಯಾಗಲು ಆಯೇಷಾಳನ್ನು ಭಾರತಕ್ಕೆ ಕರೆತಂದಾಗ, ಗೊಂದಲ ಮತ್ತು ಹಾಸ್ಯ ಉಂಟಾಗುತ್ತದೆ.
ಇದನ್ನೂ ಓದಿ: ಮಕ್ಕಳು ಫುಟ್ಬಾಲ್ ಆಡುತ್ತಿದ್ದ ಮೈದಾನದ ಮೇಲೆ ಇಸ್ರೇಲ್ ಬಾಂಬ್ ದಾಳಿ; ಭೀಕರ ದೃಶ್ಯ ವಿಡಿಯೊದಲ್ಲಿ ಸೆರೆ
5. ಶುಭ್ ಮಂಗಲ್ ಸಾವಧಾನ್ [ಅಮೆಜಾನ್ ಪ್ರೈಮ್ ವಿಡಿಯೋ] :
ಶುಭ್ ಮಂಗಲ್ ಸಾವಧಾನ್ ಬಾಲಿವುಡ್ ನ ಅದ್ಭುತ ಹಾಸ್ಯ ಚಿತ್ರವಾಗಿದ್ದು, ಇದು ಸಲಿಂಗ ಪ್ರೀತಿಯನ್ನು ತೋರಿಸುತ್ತದೆ. ಆಯುಷ್ಮಾನ್ ಖುರಾನಾ ಕಾರ್ತಿಕ್ ಸಿಂಗ್ ಎಂಬ ಸಲಿಂಗಕಾಮಿ ವ್ಯಕ್ತಿಯಾಗಿ ನಟಿಸಿದ್ದಾರೆ, ಅವರು ದೆಹಲಿಯ ಸಹ ಮಾರಾಟಗಾರ ಅಮನ್ ತ್ರಿಪಾಠಿ (ಜಿತೇಂದ್ರ ಕುಮಾರ್) ಅವರನ್ನು ಪ್ರೀತಿಸುತ್ತಾರೆ.
ಆದರೆ ಅವರು ತಮ್ಮ ಸಾಂಪ್ರದಾಯಿಕ ಕುಟುಂಬದ ಅನುಮತಿ ಪಡೆಯಲು ಅಮನ್ ಅವರ ಹುಟ್ಟೂರಾದ ಅಲಹಾಬಾದ್‍ಗೆ ಹಿಂದಿರುಗಿದಾಗ ಅನೇಕ ಸವಾಲುಗಳನ್ನು ಎದುರಿಸುತ್ತಾರೆ.