Site icon Vistara News

Bollywood Divorce Case: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

Bollywood Divorce Case

ಮುಂಬೈ: ಈಗಿನ ಕಾಲದಲ್ಲಿ ಲವ್, ಬ್ರೇಕ್ ಅಪ್, ಮದುವ , ವಿಚ್ಛೇದನ ಎಲ್ಲಾ ಕಾಮನ್ ಆಗಿ ಬಿಟ್ಟಿದೆ. ಲವ್ ಮಾಡಿ ಮದುವೆಯಾಗಿ ನಂತರ ಕೆಲವೇ ದಿನಗಳಲ್ಲಿ ವಿಚ್ಛೇದನ ನೀಡುವುದು ಸೆಲೆಬ್ರಿಟಿಗಳಲ್ಲಿ ಸಾಮಾನ್ಯ. ಆದರೆ ಈಗ ಸಾಮಾನ್ಯ ಜನರೂ ಇದೇ ನಿಯಮವನ್ನು ಅನುಸರಿಸುತ್ತಿದ್ದಾರೆ! ಮದುವೆಯಾದ ಸಂಗಾತಿಯೊಂದಿಗೆ ದೀರ್ಘಕಾಲದವರೆಗೆ ಸಂಬಂಧದಲ್ಲಿದ್ದ ಸಿನಿಮಾ ತಾರೆಯರು ಬೆರಳೆಣಿಕೆಯಷ್ಟು ಮಾತ್ರ! ಬಾಲಿವುಡ್ (Bollywood Divorce Case) ಸಿನಿಮಾ ತಾರೆಯರಲ್ಲಿ ಹಲವರು ಮದುವೆ ಆಗಿ ಸ್ವಲ್ಪ ದಿನದಲ್ಲೇ ವಿಚ್ಛೇದನ ಪಡೆದು ಪತ್ನಿಗೆ ಅತಿ ಹೆಚ್ಚು ಜೀವನಾಂಶ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅಂತಹ ಬಾಲಿವುಡ್ ಸಿನಿಮಾ ತಾರೆಯರ ಬಗ್ಗೆ ಇಲ್ಲಿದೆ ಕುತೂಹಲಕರ ಮಾಹಿತಿ.

ಹೃತಿಕ್ ರೋಷನ್- ಸುಸ್ಸೇನ್ ಖಾನ್

ಬಾಲಿವುಡ್‌ನ ʼಗ್ರೀಕ್ ದೇವರುʼ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ 2000ರಲ್ಲಿ ಪ್ರಸಿದ್ಧ ಇಂಟಿರಿಯರ್ ಡಿಸೈನರ್ ಸುಸ್ಸೇನ್ ಖಾನ್ ಅವರನ್ನು ವಿವಾಹವಾದರು. ಹೊರಗಿನವರಿಗೆ ಸುಂದರವಾಗಿ ಕಾಣುತ್ತಿದ್ದ ಇವರ ವೈವಾಹಿಕ ಜೀವನವು 2014ರಲ್ಲಿ ಕೊನೆಗೊಂಡಿತು. ಇವರ ವಿಚ್ಛೇದನ ಒಪ್ಪಂದವು ಬಾಲಿವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿಯಾಗಿತ್ತು. ಯಾಕೆಂದರೆ ಹೃತಿಕ್ ರೋಷನ್‌ ಅವರು ಸುಸ್ಸೇನ್‌ಗೆ ಸುಮಾರು 380 ಕೋಟಿ ರೂ. ಜೀವನಾಂಶ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್

ಕಪೂರ್ ಕುಟುಂಬದ ವಂಶಸ್ಥರಾದ ಕರಿಷ್ಮಾ ಕಪೂರ್ 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಇವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾದ ಹಿನ್ನಲೆಯಲ್ಲಿ ಇವರು 2014ರಲ್ಲಿ ಬೇರೆಬೇರೆಯಾದರು. ಕರಿಷ್ಮಾ ಅವರಿಗೆ ಸಂಜಯ್ ಜೀವನಾಂಶವಾಗಿ 14 ಕೋಟಿ ರೂ. ಬಾಂಡ್, ಮುಂಬೈನಲ್ಲಿ ಐಷಾರಾಮಿ ಮನೆ ಮತ್ತು ಅವರ ಮಕ್ಕಳ ಜೀವನಕ್ಕಾಗಿ ಹಣವನ್ನು ಪಾವತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್

ನಟ ಸೈಫ್ ಅಲಿ ಖಾನ್ 1991ರಲ್ಲಿ ನಟಿ ಅಮೃತಾ ಸಿಂಗ್ ಅವರನ್ನು ವಿವಾಹವಾದರು. ಈ ದಂಪತಿಗೆ ಸಾರಾ ಮತ್ತು ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದರು. ಹದಿಮೂರು ವರ್ಷಗಳ ದಾಂಪತ್ಯದ ನಂತರ, ಅವರು 2004ರಲ್ಲಿ ವಿಚ್ಛೇದನ ಪಡೆದರು. ಸೈಫ್ ಅಮೃತಾಗೆ ಜೀವನಾಂಶವಾಗಿ 5 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಹೆಚ್ಚುವರಿಯಾಗಿ, ತಮ್ಮ ಮಗ ಪ್ರೌಢಾವಸ್ಥೆಗೆ ತಲುಪುವವರೆಗೆ ತಿಂಗಳಿಗೆ 1 ಲಕ್ಷ ರೂ.ಗಳನ್ನು ಪಾವತಿಸಲು ಅವರು ಬದ್ಧರಾಗಿದ್ದಾರೆ.

ಅಮೀರ್ ಖಾನ್ ಮತ್ತು ರೀನಾ ದತ್ತಾ

ಅಮೀರ್ ಖಾನ್ 1986ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. 2002ರಲ್ಲಿ ಅವರ ವಿವಾಹವು ಕೊನೆಗೊಂಡಿದೆ. ವಿಚ್ಛೇದನ ನಂತರ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ರೀನಾಗೆ ಸುಮಾರು 50 ಕೋಟಿ ರೂ.ಗಳನ್ನು ನೀಡಿರುವುದಾಗಿ ಅಮೀರ್ ಖಾನ್ ಖಚಿತಪಡಿಸಿದ್ದಾರೆ.

ಫರ್ಹಾನ್ ಅಖ್ತರ್ ಮತ್ತು ಅಧುನಾ ಭಬಾನಿ

ಬಹುಮುಖ ಪ್ರತಿಭೆಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ 2000ರಲ್ಲಿ ಸೆಲೆಬ್ರಿಟಿ ಹೇರ್ಸ್ಟೈಲಿಸ್ಟ್ ಅಧುನಾ ಭಬಾನಿ ಅವರನ್ನು ವಿವಾಹವಾದರು. ಹದಿನಾರು ವರ್ಷಗಳ ದಾಂಪತ್ಯದ ನಂತರ, ಅವರು 2016ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಹಾಗೇ ಪತ್ನಿಗೆ ದುಬಾರಿ ಜೀವನಾಂಶದ ಜೊತೆಗೆ ಬಂಗಲೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳ ಖರ್ಚುವೆಚ್ಚದ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದಾರೆ.

ಸಂಜಯ್ ದತ್ ಮತ್ತು ರಿಯಾ ಪಿಳ್ಳೈ

ರೂಪದರ್ಶಿ ರಿಯಾ ಪಿಳ್ಳೈ ಅವರೊಂದಿಗಿನ ಸಂಜಯ್ ದತ್ ಅವರ ಎರಡನೇ ಮದುವೆಯಾದರು. 2008ರಲ್ಲಿ ಇವರ ವೈವಾಹಿಕ ಜೀವನ ವಿಚ್ಛೇದನದಲ್ಲಿ ಕೊನೆಗೊಂಡಿತು ಸಂಜಯ್ ರಿಯಾಗೆ ದುಬಾರಿ ಜೀವನಾಂಶವನ್ನು ಪಾವತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅದರಲ್ಲಿ ಮುಂಬೈನಲ್ಲಿ ಸಮುದ್ರದ ಕಡೆಗೆ ಮುಖವಿದ್ದ ಎರಡು ಐಷಾರಾಮಿ ಅಪಾರ್ಟ್ಮೆಂಟ್‍ಗಳು ಮತ್ತು ಒಂದು ಕಾರನ್ನು ನೀಡಲಾಗಿದೆ.

ಇದನ್ನೂ ಓದಿ: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ

ನಟ-ನಿರ್ಮಾಪಕ ಮತ್ತು ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಅರ್ಬಾಜ್ ಖಾನ್ ನಟಿ ಮತ್ತು ರೂಪದರ್ಶಿ ಮಲೈಕಾ ಅರೋರಾ ಅವರನ್ನು 1998ರಲ್ಲಿ ವಿವಾಹವಾದರು. ಸ್ಟೈಲಿಶ್ ನೋಟಗಳಿಗೆ ಹೆಸರುವಾಸಿಯಾದ ದಂಪತಿಗಳು 2016ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು ಮತ್ತು 2017ರಲ್ಲಿ ಅಧಿಕೃತವಾಗಿ ವಿಚ್ಛೇದನವನ್ನು ಪಡೆದುಕೊಂಡರು. ಈ ಒಪ್ಪಂದದಲ್ಲಿ ಅರ್ಬಾಜ್ ಮಲೈಕಾಗೆ ಸುಮಾರು 10-15 ಕೋಟಿ ರೂ.ಗಳ ದುಬಾರಿ ಜೀವನಾಂಶವನ್ನು ನೀಡಿದ್ದಾರೆ ಮತ್ತು ಅವರ ಮಗ ಅರ್ಹಾನ್ ಅವರ ಸಂಪೂರ್ಣ ಖರ್ಚುವೆಚ್ಚವನ್ನು ನೋಡಿಕೊಳ್ಳುವುದಾಗಿ ವರದಿಯಾಗಿದೆ.

Exit mobile version