Site icon Vistara News

Tauba Tauba : ಲಂಡನ್‌ ಬೀದಿಯಲ್ಲಿ ‘ತೌಬಾ ತೌಬಾ’ ಹಾಡಿಗೆ ಸಖತ್‌ ಆಗಿ ಸ್ಟೆಪ್ಸ್‌ ಹಾಕಿದ ಬೆಡಗಿಯರು; ವಿಡಿಯೊ ವೈರಲ್

Tauba Tauba


ಲಂಡನ್ : ವಿಕ್ಕಿ ಕೌಶಲ್ (Vicky Kaushal) ಮತ್ತು ತೃಪ್ತಿ ಡಿಮ್ರಿ ನಟನೆಯ ‘ಬ್ಯಾಡ್ ನ್ಯೂಸ್​​​ ‘ ಬಾಲಿವುಡ್​ ಚಿತ್ರ ಜುಲೈ 19ಕ್ಕೆ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಈ ಎಲ್ಲದಕ್ಕಿಂತ ಮೊದಲೇ ಅದರ ಹಾಡೊಂದು ವೈರಲ್ ಆಗಿದೆ. ‘ತೌಬಾ ತೌಬಾ’ (Tauba Tauba) ಹಾಡಿನ ವಿಡಿಯೊ ಬಿಡುಗಡೆಯಾದ ಕ್ಷಣದಿಂದ ರೀಲ್ಸ್ ಹಾಗೂ ಇನ್ನಿತರ ಕಾರಣಕ್ಕೆ ಜನಪ್ರಿಯವಾಗುತ್ತಿದೆ. ಪಂಜಾಬಿ ಸ್ಟ್ರೈಲ್​ನಲ್ಲಿರುವ ಇದರ ಡ್ಯಾನ್ಸ್ ಆನ್‍ಲೈನ್‍ನಲ್ಲಿ ಬಿರುಗಾಳಿ ಎಬ್ಬಿಸಿದೆ . ಹಾಗಾಗಿ ರೀಲ್ಸ್‌ ಪ್ರಿಯರು ಈ ಡ್ಯಾನ್ಸ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಈ ನಡುವೆ ಲಂಡನ್‍ನ ಬೀದಿಯಲ್ಲೂ ಈ ಹಾಡಿಗೆ ಯುವ ತಂಡವೊಂದು ಕುಣಿದು ಕುಪ್ಪಳಿಸಿದೆ. ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೊದಲ್ಲಿ ಕಪ್ಪು ಕುರ್ತಾ ಧರಿಸಿದ ಇಬ್ಬರು ಹುಡುಗಿಯರು ಕಲರ್​ಫುಲ್​​ ದುಪಟ್ಟಾಗಳೊಂದಿಗೆ ಬೀದಿಗಳಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ತೌಬಾ ತೌಬಾ ಹಾಡು ಪ್ಲೇ ಮಾಡಿ ಹಾಡಿನ ಬೀಟ್‍ಗಳಿಗೆ ಸಲೀಸಾಗಿ ಸ್ಟೆಪ್ ಹಾಕಿದ್ದಾರೆ. ಅಲ್ಲಿ ತಮ್ಮ ಗಿದ್ಧಾ ಸ್ಟೆಪ್‍ಗಳನ್ನು (ಪಂಜಾಬಿ ಸ್ಟೆಪ್​) ಸೇರಿದ್ದಾರೆ ಹಾಡಿನಲ್ಲಿ ವಿಕ್ಕಿ ಕೌಶಲ್ ಮಾಡುವ ಅದೇ ಹೆಜ್ಜೆಗಳನ್ನು ಅವರು ಮಾಡಲು ಪ್ರಯತ್ನಿಸಿದ್ದಾರೆ. ಈ ವಿಡಿಯೊವನ್ನು @annaikaahuja ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಹಂಚಿಕೊಂಡ ಬಳಕೆದಾರರು ನಟ ವಿಕ್ಕಿ ಕೌಶಲ್ ಮತ್ತು ಗಾಯಕ ಕರಣ್ ಔಜ್ಲಾ ಅವರಿಗೆ ಟ್ಯಾಗ್ ಮಾಡಿ, “@karanaujla @vickykaushal09 ನಮ್ಮ ಪಂಜಾಬಿ ರಾಜರಿಗೆ, ಗಿದ್ಧಾ ಟಚ್ ಕಡ್ಡಾಯ ಎಂದು ಬರೆದಿದ್ದಾರೆ.

ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ, ಇದಕ್ಕೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‍ಗಳು ಬಂದಿದೆ. ಅಲ್ಲದೇ ಇದರ ವೀಕ್ಷಕರ ಸಂಖ್ಯೆಗಳು ಇನ್ನೂ ವೇಗವಾಗಿ ಹೆಚ್ಚುತ್ತಿವೆ. ಈ ವೈರಲ್ ವಿಡಿಯೊಗೆ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಪೋಸ್ಟ್‌ನ ಕಾಮೆಂಟ್‍ಗಳ ವಿಭಾಗದಲ್ಲಿ ಅನೇಕ ಬಳಕೆದಾರರು ಹಾರ್ಟ್ ಮತ್ತು ಫಯರ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. “ನಮ್ಮ ಫೀಡ್‌ಗಳಿಗೆ ತೌಬಾ ತೌಬಾದ ಆವೃತ್ತಿ ಬೇಕು” ಎಂದು ಬಳಕೆದಾರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು ತುಂಬಾ ಚೆನ್ನಾಗಿ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನೊಬ್ಬರು “ತುಂಬಾ ಒಳ್ಳೆಯದಾಗಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು “ಜಸ್ಟ್ ವಾವ್” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸ್ಟ್ರೆಚರ್‌ ಇಲ್ಲದ ಸರ್ಕಾರಿ ಆಸ್ಪತ್ರೆ; ಪತಿಯನ್ನು ಬೆನ್ನ ಮೇಲೆ ಹೊತ್ತು ನಡೆದ ಪತ್ನಿ! ಮನಮಿಡಿಯುವ ವಿಡಿಯೊ

ಆನಂದ್ ತಿವಾರಿ ಅವರ ನಿರ್ದೇಶನದ ‘ಬ್ಯಾಡ್ ನ್ಯೂಸ್​’ ಹಾಸ್ಯ ಚಿತ್ರದಲ್ಲಿ ತೃಪ್ತಿ ಡಿಮ್ರಿ, ವಿಕ್ಕಿ ಕೌಶಲ್ ಮತ್ತು ಎಮಿ ವಿರ್ಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜುಲೈ 19 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.

Exit mobile version