ಯಾವುದೇ ಉದ್ಯೋಗವೂ ಸಂದರ್ಶನವಿಲ್ಲದೆ (Job Interview) ಪೂರ್ಣವಾಗುವುದಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಈಗ ಉದ್ಯೋಗ (job) ಪಡೆಯಲು ಕೇವಲ ಅಂಕಗಳಿದ್ದರೆ ಸಾಲದು ಕೌಶಲ, ನಡವಳಿಕೆಯೂ ಮುಖ್ಯವಾಗಿರುತ್ತದೆ. ಕಾಲೇಜು (college) ಮುಗಿಸಿ ಉದ್ಯೋಗಕ್ಕಾಗಿ ಸಂದರ್ಶನದ ತಯಾರಿ ನಡೆಸಿಕೊಳ್ಳುತ್ತಿರುವ ಫ್ರೆಶರ್‌ಗಳಿಗೆ ಸಹಾಯವಾಗಬಲ್ಲ ಸಲಹೆಗಳು ಇಲ್ಲಿವೆ.
ಸಂದರ್ಶನಕ್ಕೆ ಹೊರಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಅವುಗಳಲ್ಲಿ ಮುಖ್ಯವಾಗಿ ಸಂಶೋಧನೆ, ಉಡುಗೆ, ದಾಖಲೆಗಳು, ದೇಹ ಭಾಷೆ, ಸಂವಹನ ಸೇರಿದಂತೆ ಇನ್ನು ಹಲವು ಪ್ರಮುಖ ವಿಷಯಗಳಿವೆ.
ಕಂಪನಿಯ ಹಿನ್ನೆಲೆ ಸ್ಟಡಿ ಮಾಡಿ
ಸಂದರ್ಶನಕ್ಕೆ ಹೊರಡುವಾಗ ಕಂಪನಿ ಮತ್ತು ಉದ್ಯೋಗ ಪ್ರೊಫೈಲ್ ಬಗ್ಗೆ ತಿಳಿದುಕೊಳ್ಳಿ. ಇದು ಕಂಪನಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಒದಗಿಸಿ ಸಂದರ್ಶನವನ್ನು ಸುಲಭಗೊಳಿಸುತ್ತದೆ. ಸಂದರ್ಶನದ ತಯಾರಿಯ ಪ್ರಮುಖ ಆದ್ಯತೆಯಾಗಿ ಸಂಶೋಧನೆಯನ್ನು ಪಟ್ಟಿ ಮಾಡುವುದು ಬಹಳ ಮುಖ್ಯ. ಪ್ರತಿ ಕಂಪೆನಿಯು ತನ್ನ ಪ್ರೊಫೈಲ್‌ಗಳಲ್ಲಿ ವಿಮರ್ಶೆ ವಿಭಾಗವನ್ನು ಹೊಂದಿರುತ್ತದೆ. ಕಂಪನಿಯ ಮಾಜಿ, ಪ್ರಸ್ತುತ ಉದ್ಯೋಗಿಗಳ ಬಗ್ಗೆ ಕೇಳಬಹುದು. ಅವರ ಅನುಭವ, ಕೆಲಸದ ಸಂಸ್ಕೃತಿ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು.
ಕೌಶಲವನ್ನು ಬೆಳೆಸಿಕೊಳ್ಳಿ
ಫ್ರೆಶರ್‌ಗಳಿಗೆ ಮತ್ತೊಂದು ಪ್ರಮುಖ ಸಂದರ್ಶನ ಸಲಹೆಯೆಂದರೆ ಉದ್ಯೋಗ ವಿವರಣೆಯನ್ನು ಸಂಪೂರ್ಣವಾಗಿ ಓದುವುದು. ಯಾಕೆಂದರೆ ಇದು ನೇಮಕಾತಿದಾರರು ಹುಡುಕುತ್ತಿರುವ ಪ್ರಮುಖ ಕೌಶಲಗಳನ್ನು ಗುರುತಿಸಲು ಅದಕ್ಕೆ ತಕ್ಕುದಾಗಿ ಹೊಂದಿಕೊಳ್ಳಲು ನಿಮಗೆ ಸಹಾಯವಾಗುವುದು. ಕೌಶಲದ ಕೊರತೆ ಇದ್ದರೆ ಸಂದರ್ಶನ ಕಷ್ಟವಾಗಬಹುದು.
ಉಡುಗೆ ಬಗ್ಗೆ ಗಮನವಿರಲಿ
ಫ್ರೆಶರ್‌ಗಳಿಗೆ ಸಂದರ್ಶನದ ತಯಾರಿಗಾಗಿ ಮತ್ತೊಂದು ಪ್ರಮುಖ ಅಂಶವೆಂದರೆ ಉಡುಪು. ಉಡುಪು ನಮ್ಮ ಆಲೋಚನೆಗಳನ್ನು ತೋರಿಸುತ್ತದೆ. ಯಾವುದೇ ಕೆಲಸಕ್ಕಾಗಿ ಸಂದರ್ಶನದಲ್ಲಿ ಅನಿಸಿಕೆ ವ್ಯಕ್ತಪಡಿಸಲು ಅವಕಾಶ ನೀಡಲಾಗುತ್ತದೆ. ಇದು ಸಂದರ್ಶಕರ ಮೇಲೆ ನಮ್ಮ ಪ್ರಭಾವವನ್ನು ಬೀರಲು ಕಾರಣವಾಗುತ್ತದೆ.
ಸಂದರ್ಶನಕ್ಕೆ ಹೋಗುವಾಗ ಸ್ವಚ್ಛ ಮತ್ತು ಚೆನ್ನಾಗಿ ಇಸ್ತ್ರಿ ಮಾಡಿರುವ ದಿರಿಸು ಧರಿಸಿ. ಪಾಲಿಶ್ ಮಾಡಿದ ಶೂಗಳು ಮತ್ತು ಕ್ಲೀನ್ ಸಾಕ್ಸ್, ಕೂದಲು, ಉಗುರುಗಳು ಚೆನ್ನಾಗಿದೆ ಎಂದು ಖಚಿತಪಡಿಸಿಕೊಳ್ಳಿ.ಋತುಮಾನಕ್ಕೆ ಸೂಕ್ತವಾದ ಆರಾಮದಾಯಕ ಉಡುಗೆಗಳನ್ನು ಆಯ್ಕೆ ಮಾಡಿ.
ನಿಮ್ಮನ್ನು ನೀವು ತಿಳಿದುಕೊಳ್ಳಿ
ಇನ್ನೊಬ್ಬರಿಗೆ ನಮ್ಮ ಸಾಮರ್ಥ್ಯವನ್ನು ತಿಳಿಸಬೇಕಾದರೆ ನಮ್ಮ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು. ಇದು ಫ್ರೆಶರ್‌ಗಳಿಗೆ ಅತೀ ಪ್ರಮುಖ ಸಲಹೆ. ಕಂಪೆನಿಯಲ್ಲಿ ನಿಮ್ಮನ್ನು ನೀವು ಹೇಗೆ ತೋರ್ಪಡಿಸುತ್ತಿರಿ ಎನ್ನುವುದು ಮುಖ್ಯವಾಗಿರುತ್ತದೆ. ಉದ್ಯೋಗ ಸಂದರ್ಶನದ ಪ್ರಮುಖ ಉದ್ದೇಶವು ನಿಮ್ಮನ್ನು ಪ್ರತಿನಿಧಿಸುವುದು ಮುಖ್ಯವಾಗುತ್ತದೆ.
ದಾಖಲೆಗಳ ಹೆಚ್ಚುವರಿ ಸೆಟ್ ಇರಲಿ
ಸಂದರ್ಶನದ ದಿನ ಸಂದರ್ಶಕರು ಮತ್ತು ಎಚ್‌ಆರ್ ಕ್ರಮವಾಗಿ ರೆಸ್ಯೂಮ್‌ನ ಹಾರ್ಡ್ ಪ್ರತಿಯನ್ನು ಕೇಳಬಹುದು. ಆದ್ದರಿಂದ ಯಾವಾಗಲೂ ರೆಸ್ಯೂಮ್‌ನ 2- 3 ಪ್ರತಿಗಳನ್ನು ಕೈಯಲ್ಲಿರಲಿ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಕಳುಹಿಸಿದ ರೆಸ್ಯೂಮ್‌ನಲ್ಲಿ ಯಾವುದೇ ದೋಷ ಕಂಡುಬಂದರೆ, ಬಳಿಕ ಅಪ್‌ಡೇಟ್ ಮಾಡಿದ್ದರೆ ಅದನ್ನು ಸಂದರ್ಶಕರ ಗಮನಕ್ಕೆ ತನ್ನಿ. ಇದಕ್ಕಾಗಿ ಹೆಚ್ಚುವರಿ ದಾಖಲೆಗಳ ಸೆಟ್ ಜೊತೆ ಇರಲಿ. ರೆಸ್ಯೂಮ್‌ನಲ್ಲಿನ ದೋಷ, ಪರಿಷ್ಕರಣೆ ಕುರಿತು ನೇಮಕಾತಿದಾರರಿಗೆ ತಿಳಿಸುವುದು ನಿಮ್ಮ ಸಮಗ್ರತೆಯ ಬಗ್ಗೆ ಮಾತ್ರವಲ್ಲದೆ ಕೆಲಸದ ಪಾತ್ರದ ಬಗ್ಗೆ ನಿಮ್ಮ ಗಂಭೀರತೆಯ ಬಗ್ಗೆಯೂ ಅವರಿಗೆ ತಿಳಿಸಿದಂತಾಗುತ್ತದೆ.
ಇದನ್ನೂ ಓದಿ: UPSC 2024: ಯುಪಿಎಸ್ಸಿ ಸಿಎಸ್ಇ ಪ್ರಿಲಿಮ್ಸ್ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?
ಪ್ರಶ್ನೆ ಕೇಳಿ, ಉತ್ತರಿಸಲು ಸಿದ್ಧರಾಗಿರಿ
ಸಾಮಾನ್ಯವಾಗಿ ಅಭ್ಯರ್ಥಿಯ ದಕ್ಷತೆಯನ್ನು ಪರೀಕ್ಷಿಸಲು ಉದ್ಯೋಗಕ್ಕಾಗಿ ಮೂರು ಸುತ್ತಿನ ಸಂದರ್ಶನಗಳು, ಲಿಖಿತ, ತಾಂತ್ರಿಕ ಮತ್ತು ಮಾನವ ಸಂಪನ್ಮೂಲ ಸಂದರ್ಶನಗಳು ಇರುತ್ತವೆ. ಮೊದಲ ಎರಡು ಸುತ್ತುಗಳು ಕೆಲಸವನ್ನು ಪೂರ್ಣಗೊಳಿಸಲು ಸಹಾಯ ಮಾಡುವ ತಾಂತ್ರಿಕ ಜ್ಞಾನವನ್ನು ಪರೀಕ್ಷಿಸುತ್ತದೆ. ಕೊನೆಯ ಸುತ್ತು ಕೌಶಲಗಳನ್ನು ಪರೀಕ್ಷಿಸುತ್ತದೆ.
ಈ ಸಂದರ್ಭದಲ್ಲಿ ಅನುಮಾನಗಳಿದ್ದಾಗ ಪ್ರಶ್ನೆ ಕೇಳಲು ಹಿಂಜರಿಯಬೇಡಿ. ಇದು ಆಯ್ಕೆಗೆ ನಿಮ್ಮನ್ನು ನೀವು ಹೇಗೆ ಸಿದ್ಧಪಡಿಸಿಕೊಳ್ಳುತ್ತೀರಿ ಎಂಬುದನ್ನು ತಿಳಿಸುತ್ತದೆ. ಅದೇ ರೀತಿ ಅವರು ಕೇಳುವ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ತೋರ್ಪಡಿಸುತ್ತದೆ.