Site icon Vistara News

Naga Chaitanya: ನಾಗಚೈತನ್ಯ ಜೊತೆ ಪ್ರೇಮಿ, ಪತ್ನಿ ಮತ್ತು ತಾಯಿಯಾಗಿ ನಟಿಸಿದ್ದಾರೆ ಈ ನಟಿ!

Naga Chaitanya

‘ಯೇ ಮಾಯಾ ಚೆಸಾವೆ’ ಮತ್ತು ‘ಮನಮ್’ನಂತಹ ಹಿಟ್ ಚಿತ್ರಗಳೊಂದಿಗೆ ತಮ್ಮ ಅಭಿನಯದ ಮೂಲಕ ಛಾಪು ಮೂಡಿಸಿದ ತೆಲುಗು ನಟರಲ್ಲಿ ನಾಗ ಚೈತನ್ಯ ಒಬ್ಬರು. ಚೈತನ್ಯ ಅವರು ಲಾವಣ್ಯ ತ್ರಿಪಾಠಿ ಸೇರಿದಂತೆ ಹಲವಾರು ಪ್ರಮುಖ ನಟಿಯರೊಂದಿಗೆ ನಟಿಸಿದ್ದಾರೆ. ಕೃಷ್ಣ ಮಾರಿಮುತ್ತು ನಿರ್ದೇಶನದ ‘ಯುದ್ಧಂ ಶರಣಂ’ ಚಿತ್ರದಲ್ಲಿ ಲಾವಣ್ಯ ತ್ರಿಪಾಠಿ ಅವರು ನಾಗ ಚೈತನ್ಯ(Naga Chaitanya) ಅವರ ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದರು.

‘ಬಂಗಾರರಾಜು’ ಚಿತ್ರದಲ್ಲಿ ಇವರು ನಾಗಚೈತನ್ಯ ಅವರ ತಾಯಿಯಾಗಿ ನಟಿಸಿದ್ದರು. ಈ ಚಿತ್ರವು ‘ಸೊಗ್ಗಡೆ ಚಿನ್ನಿ ನಯನ’ ಚಿತ್ರದ ಮುಂದುವರಿದ ಭಾಗವಾಗಿದೆ. ವಿಕ್ರಮ್ ಕೆ ಕುಮಾರ್ ನಿರ್ದೇಶನದ ‘ಮನಂ’ ಚಿತ್ರದಲ್ಲಿ ಲಾವಣ್ಯ ನಾಗ ಚೈತನ್ಯ ಅವರ ಸ್ನೇಹಿತೆಯಾಗಿ (ಅತಿಥಿ ಪಾತ್ರ) ನಟಿಸಿದ್ದಾರೆ. ಈ ರೀತಿಯಾಗಿ, 33 ವರ್ಷದ ನಟಿ ಈ ಚಿತ್ರಗಳಲ್ಲಿ ಚೈತನ್ಯ ಅವರ ಪತ್ನಿ, ತಾಯಿ ಮತ್ತು ಸ್ನೇಹಿತೆಯ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲದೇ ಯುದ್ಧಂ ಶರಣಂ, ಸೊಗ್ಗಡೆ ಚಿನ್ನಿ ನಯನ ಮತ್ತು ಮನಂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಬಹಳ ಸದ್ದು ಮಾಡಿದ್ದವು.

ನಾಗ ಚೈತನ್ಯ ಪ್ರಸ್ತುತ ಚಂದೂ ಮೊಂಡೆಟಿ ನಿರ್ದೇಶನದ ‘ತಾಂಡೇಲ್’ ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಚಿತ್ರದ ತಂಡವು ನವೆಂಬರ್ 22ರಂದು ಚಿತ್ರದ ಫಸ್ಟ್ ಲುಕ್ ಅನ್ನು ಟ್ವೀಟ್ ಮೂಲಕ ಬಿಡುಗಡೆ ಮಾಡಿದೆ. ಫಸ್ಟ್ ಲುಕ್‌ನಲ್ಲಿ ಅವರು ಮೀನುಗಾರನ ಪಾತ್ರವನ್ನು ನಿರ್ವಹಿಸುತ್ತಿದ್ದು, ನಾಗಚೈತನ್ಯ ಅವರು ದೋಣಿಯಲ್ಲಿ ಕುಳಿತಿರುವುದನ್ನು ತೋರಿಸಲಾಗಿದೆ. ಚೈತನ್ಯ ಈ ಪೋಸ್ಟ್ ಗೆ “#NC23 #Thandel ನಾನು ನಿಜವಾಗಿಯೂ ಎದುರು ನೋಡುತ್ತಿರುವ ಪಾತ್ರ .. ಮತ್ತು ಪ್ರತಿಯೊಬ್ಬರೂ at@GeethaArts @chandoomondeti@Sai_Pallavi92@ThisIsDSPand ನಾನು ನಿಜವಾಗಿಯೂ ಇಷ್ಟಪಡುವ ತಂಡ. ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ” ಎಂದು ಶೀರ್ಷಿಕೆ ನೀಡಿದ್ದಾರೆ,
ನಿರ್ಮಾಪಕರು ಚಿತ್ರದ ಕಥೆಯನ್ನು ರಹಸ್ಯವಾಗಿಟ್ಟಿದ್ದಾರೆ.

ಚಿತ್ರ ತಂಡವು ಈ ವರ್ಷದ ಆರಂಭದಲ್ಲಿ ಕೆ ಮ್ಯಾಚಿಲೆಸಂ ಎಂಬ ಮೀನುಗಾರಿಕಾ ಕುಗ್ರಾಮಕ್ಕೆ ಪ್ರಯಾಣ ಬೆಳೆಸಿತ್ತು. ಶ್ರೀಕಾಕುಳಂ ಬಳಿ ಇರುವ ಈ ಗ್ರಾಮವು ಮೀನುಗಾರ ಸಮುದಾಯಕ್ಕೆ ಸೇರಿದ ನೆಲೆಯಾಗಿದೆ. ಚಿತ್ರದ ನಿರ್ದೇಶಕ ಚಂದೂ ಮೊಂಡೆಟಿ ಮತ್ತು ನಾಗ ಚೈತನ್ಯ ಇಬ್ಬರೂ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಈ ಚಿತ್ರವು ಗ್ರಾಮದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ ಎಂದು ಹೇಳಿದ್ದಾರೆ. ಚಿತ್ರಕ್ಕಾಗಿ ಉತ್ತಮ ತಯಾರಿ ನಡೆಸಲು ಅವರು ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಕ್ಕಾಗಿ ಅವರೊಂದಿಗೆ ಹೆಚ್ಚು ಸಮಯ ಕಳೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಆಟವಾಡುತ್ತ ಕೂದಲಿನ ಕ್ಲಿಪ್ ನುಂಗಿದ 10 ತಿಂಗಳ ಮಗು!

ವರದಿಗಳ ಪ್ರಕಾರ, ನಾಗ ಚೈತನ್ಯ ಅವರು ಈ ಪಾತ್ರಕ್ಕಾಗಿ ತಮ್ಮ ಕೂದಲನ್ನು ಬೆಳೆಸಲಿಲ್ಲವಂತೆ. ಆದರೆ ಅವರು ಮೀನುಗಾರರೊಂದಿಗೆ ಅವರ ಬಾಡಿ ಲ್ಯಾಂಗ್ವೇಜ್ ಮತ್ತು ಭಾಷೆಯನ್ನು ಕಲಿಯಲು ಸಮಯ ಕಳೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗೇ ಅವರು ಈ ಚಿತ್ರದಲ್ಲಿ ಶ್ರೀಕಾಕುಳಂ ಗ್ರಾಮದ ಜನರ ಭಾಷೆಯಲ್ಲೇ ಮಾತನಾಡಲಿದ್ದಾರೆ. ಈ ರೀತಿಯ ಚಿತ್ರ ಅವರ ವೃತ್ತಿಜೀವನದಲ್ಲಿ ಮೊದಲನೆಯದು ಎನ್ನಲಾಗಿದೆ.

Exit mobile version