Site icon Vistara News

Priyanka Chopra: ‘ದಿ ಬ್ಲಫ್’ ಚಿತ್ರೀಕರಣದ ವೇಳೆ ನಟಿ ಪ್ರಿಯಾಂಕ ಚೋಪ್ರಾ ಕೊರಳಿಗೆ ಗಾಯ

Priyanka Chopra

ಮುಂಬೈ: ಹಾಲಿವುಡ್‌ನ ‘ದಿ ಬ್ಲಫ್’ ಚಿತ್ರದ ಚಿತ್ರೀಕರಣದ ವೇಳೆ ನಟಿ ಪ್ರಿಯಾಂಕ್ ಚೋಪ್ರಾ (Priyanka Chopra) ಅವರು ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ
ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ತಮ್ಮ ಗಾಯದ ಚಿತ್ರವನ್ನು ಪೋಸ್ಟ್ ಮಾಡಿ ಅದಕ್ಕೆ ‘Oh the professional hazards on my jobs” ಎಂದು ಶೀರ್ಷಿಕೆ ನೀಡುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಅವರ ಕುತ್ತಿಗೆಗೆ ಗಾಯವಾಗಿದ್ದು, ಆ ಗಾಯ ಆಳವಾಗಿ ಕಾಣುತ್ತಿಲ್ಲವಾದರೂ ಅದು ತುಂಬಾ ನೋವಿನಿಂದ ಕೂಡಿದೆ ಎಂದು ನಟಿ ತಿಳಿಸಿದ್ದಾರೆ.

ನಟಿ ಪ್ರಿಯಾಂಕ ಚೋಪ್ರಾ ಅವರು ‘ದಿ ಬ್ಲಫ್’ ಎಂಬ ಹಾಲಿವುಡ್ ಚಿತ್ರದಲ್ಲಿ ನಟಿಸಿದ್ದು, ಇದರ ಚಿತ್ರೀಕರಣಕ್ಕಾಗಿ ಅವರು ಕೆಲವು ದಿನಗಳಿಂದ ಆಸ್ಟ್ರೇಲಿಯಾದಲ್ಲಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕ ಜೊತೆ ಕಾರ್ಲ್ ಅರ್ಬನ್ ಅವರು ನಟಿಸುತ್ತಿದ್ದಾರೆ. ಈ ಚಿತ್ರವು ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮಿಂಗ್ ಆಗಲಿದೆ. ದಿ ಬ್ಲಫ್ ಅನ್ನು ಫ್ರಾಂಕ್ ಇ.ಫ್ಲವರ್ಸ್ ನಿರ್ದೇಶಿಸುತ್ತಿದ್ದಾರೆ.

‘ದಿ ಬ್ಲಫ್’ ಮಾಜಿ ಮಹಿಳಾ ದರೋಡೆಕೋರರ ಕಥೆಯ ಹಿನ್ನೆಲೆ ಇರುವ ಸಿನಿಮಾವಾಗಿದೆ. ದರೋಡೆಕೋರನ ಪಾತ್ರದಲ್ಲಿ ನಟಿ ಪ್ರಿಯಾಂಕ ನಟಿಸಿದ್ದಾರೆ. ಈ ಚಿತ್ರದಲ್ಲಿ ದರೋಡೆಕೋರ ಮಹಿಳೆಗೆ ತಾನು ಹಿಂದೆ ಮಾಡಿದಂತಹ ಪಾಪಗಳು ಬಂದು ಕಾಡಲು ಶುರುಮಾಡಿದಾಗ ಅದರಿಂದ ತನ್ನ ಕುಟುಂಬವನ್ನು ರಕ್ಷಿಸಲು ಪ್ರಯಾಣವನ್ನು ಪ್ರಾರಂಭಿಸುತ್ತಾಳೆ. ಈ ಚಿತ್ರವನ್ನು ಎಜಿಬಿಒ ನ ಆಂಥೋನಿ ರುಸ್ಸೋ, ಜೋ ರುಸ್ಸೋ, ಏಂಜೆಲಾ ರುಸ್ಸೋ-ಓಟ್ ಸ್ಟಾಟ್ ಮತ್ತು ಮೈಕಲ್ ಡಿಸ್ಕೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ, ಕಾರ್ಲ್ ಅರ್ಬನ್, ಇಸ್ಮಾಯಿಲ್ ಕ್ರೂಜ್ ಕಾರ್ಡೋವಾ, ಸಫಿಯಾ ಓಕ್ಲೆ-ಗ್ರೀನ್ ಮತ್ತು ವೇದಾಂತನ್ ನೈಡೂ ನಟಿಸಿದ್ದಾರೆ.

ಇದನ್ನೂ ಓದಿ: Blood Pressure: ಬ್ಲಡ್‌ ಪ್ರೆಷರ್‌ ನಿಯಂತ್ರಣದಲ್ಲಿಡಲು ಸಾಧ್ಯ; ಈ ಸಲಹೆ ಫಾಲೋ ಮಾಡಿ

ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಚಿತ್ರೀಕರಣದ ವೇಳೆ ಗಾಯಗಳಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ನಟಿಸಿದ ‘ಸಿಟಾಡೆಲ್ ‘ ವೆಬ್ ಸರಣಿಯ ಚಿತ್ರೀಕರಣದ ವೇಳೆ ನಟಿಗೆ ಎಡಹುಬ್ಬಿನ ಮೇಲೆ ಕತ್ತರಿಸಿದ ಗಾಯವಾಗಿದೆ. ಈ ಬಗ್ಗೆ ಕೂಡ ನಟಿ ಇನ್ ಸ್ಟಾಗ್ರಾಂನಲ್ಲಿ ಪೋಟೊ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.

Exit mobile version