Site icon Vistara News

Shah Rukh Khan: ದೇವದಾಸ್ ಚಿತ್ರದಲ್ಲಿ ಶಾರುಖ್ ಖಾನ್ ನಿಜವಾಗ್ಲೂ ಕುಡಿದಿದ್ದರೆ?

Shah Rukh Khan

ಮುಂಬಯಿ: ಚಲನಚಿತ್ರದ ಶೂಟಿಂಗ್ (film shooting) ಸಂದರ್ಭ ಅಭಿನಯದಲ್ಲಿ ನೈಜ್ಯತೆ ಕಾಣಿಸಲು ಬಾಲಿವುಡ್ ಬಾದ್ ಷಾ (Bollywood Bad Shah), ನಟ (actor) ಶಾರುಖ್ ಖಾನ್ (Shah Rukh Khan) ಮದ್ಯ ಸೇವನೆ ಮಾಡುತ್ತಾರೆ. ಇದು ಗೊತ್ತಾಗಿದ್ದು ನಿರ್ದೇಶಕ (film director) ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರೊಂದಿಗಿನ ಶಾರುಖ್ ಖಾನ್ ಅವರ ಮೊದಲ ಚಿತ್ರ ದೇವದಾಸ್ ನಲ್ಲಿ (devadas) ಎಂದು ಸಹನಟರೊಬ್ಬರು ಇತ್ತೀಚೆಗೆ ಹೇಳಿಕೊಂಡಿದ್ದಾರೆ.

2002ರಲ್ಲಿ ತೆರೆಗೆ ಬಂದ ʼದೇವದಾಸ್ʼ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರು ಮದ್ಯವ್ಯಸನಿಯ ಪಾತ್ರವನ್ನು ನಿರ್ವಹಿಸಿದರು. ಇದರ ಕೆಲವೊಂದು ದೃಶ್ಯಗಳಲ್ಲಿ ಶಾರುಖ್ ನಿಜವಾಗಿಯೂ ಮದ್ಯಪಾನ ಮಾಡಿದ್ದಾರೆ. ಯಾಕೆಂದರೆ ಅವರು ತಮ್ಮ ಪಾತ್ರಕ್ಕೆ ನೈಜ್ಯವಾಗಿ ಕಾಣಿಸಬೇಕು ಎಂದು ಅವರು ಬಯಸಿದ್ದರು ಎಂದು ದೇವದಾಸ್ ಚಿತ್ರದಲ್ಲಿ ಶಾರುಖ್ ಖಾನ್ ಅವರಿಗೆ ಸಹನಟರಾಗಿ ಕಾಣಿಸಿಕೊಂಡಿದ್ದ ಟಿಕು ತಲ್ಸಾನಿಯಾ (Tiku Talsania) ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ʼದೇವದಾಸ್ʼ ಚಿತ್ರದಲ್ಲಿ ಟೀಕು ಧರ್ಮದಾಸ್ ಪಾತ್ರವನ್ನು ನಿರ್ವಹಿಸಿದ್ದರು.

ಸುಡುವ ಸೂರ್ಯನ ಕೆಳಗೆ ಮಧ್ಯಾಹ್ನ ಚಿತ್ರೀಕರಣ ಮಾಡುತ್ತಿದ್ದೆವು. ಈ ಸಂದರ್ಭದಲ್ಲಿ ಅವರು ಒಂದರ ನಂತರ ಒಂದರಂತೆ ರಮ್ ಅನ್ನು ತೆಗೆದುಕೊಳ್ಳುತ್ತಿದ್ದರು. ನಾನು, ಇದೇನು ಮಾಡುತ್ತಿದ್ದೀಯಾ, ನಾವು ಕಾರ್ಯನಿರ್ವಹಿಸಬೇಕು ಎಂದು ಕೇಳಿದೆ. ಅದಕ್ಕೆ ಶಾರುಖ್ ಖಾನ್, ಸರ್ ನಟನಾ ತೋ ಹೋ ಜಾಯೇಗಿ. ಆಂಖೋನ್ ಮೇ ಶರಬ್ ದಿಖ್ತಿ ನಹೀ ಹೈ ನಾ, ಉಸ್ಕಾ ಕ್ಯಾ (ಸರ್, ನಟನೆ ಆಗುತ್ತದೆ. ಆದರೆ ಮಾದಕತೆ ನನ್ನ ಕಣ್ಣಿನಲ್ಲಿ ಪ್ರತಿಫಲಿಸದಿದ್ದರೆ ಹೇಗೆ?) ಎಂದು ಹೇಳಿದ್ದರು.

ಇದನ್ನೂ ಓದಿ: Ram Charan: ಥೈಲ್ಯಾಂಡ್‌ನಲ್ಲಿ ಆನೆ ಮರಿಗೆ ಸ್ನಾನ ಮಾಡಿಸಿದ ರಾಮ್ ಚರಣ್!

ನಶೆ ಕಣ್ಣಲ್ಲಿ ಕಾಣಬೇಕು

ಶಾರುಖ್ ಖಾನ್ ಅವರೊಂದು ‘ಅದ್ಭುತ’ ಎಂದ ನಟ ಟೀಕು, ಕುಡಿದಂತೆ ಯಾರು ಬೇಕಾದರೂ ನಟಿಸಬಹುದು. ಆದರೆ ಮದ್ಯದ ನಶೆ ಕಣ್ಣುಗಳಲ್ಲಿ ಪ್ರತಿಬಿಂಬಿಸದಿದ್ದರೆ ದೃಶ್ಯವು ಹೇಗೆ ನೈಜ್ಯವಾಗಿ ಕಾಣಲು ಸಾಧ್ಯ? ಮತ್ತು ದೇವದಾಸ್‌ ಪಾತ್ರಧಾರಿಯಾಗಿದ್ದ ಶಾರುಖ್ ಅವರಿಗೆ ಮದ್ಯ ಕೇವಲ ನಶೆ ಆಗಿರಲಿಲ್ಲ ಎಂದು ಹೇಳಿದ್ದಾರೆ.

ಶಾರುಖ್ ತಮ್ಮ ಪಾತ್ರಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಬನ್ಸಾಲಿ ನಿರ್ದೇಶಕರಾಗಿದ್ದರೂ ಶಾರುಖ್ ತಮ್ಮ ಪಾತ್ರಕ್ಕೆ ಜೀವತುಂಬಲು ತಮ್ಮದೇ ಆದ ಯೋಜನೆಯೊಂದಿಗೆ ದೇವದಾಸ್ ಸೆಟ್‌ಗೆ ಹೇಗೆ ಬರುತ್ತಿದ್ದರು ಎಂಬುದನ್ನು ಅವರು ನೆನಪಿಸಿಕೊಂಡರು.

ಶಾರುಖ್ ಬೆಂಬಲ ನೀಡಿದ ನೆನಪು

ʼದೇವದಾಸ್‌ʼ ಚಿತ್ರದಲ್ಲಿ ನಟಿಸಿದ್ದ ನಟ ಮಿಲಿಂದ್ ಗುನಾಜಿ, ಸವಾಲಿನ ಸಮಯದಲ್ಲಿ ಶಾರುಖ್ ಅವರು ಹೇಗೆ ಕಾಳಜಿ ತೋರಿಸಿದರು ಎಂಬುದರ ಕುರಿತು ಹೇಳಿಕೊಂಡಿದ್ದು, ಈ ಚಿತ್ರದ ಶೂಟಿಂಗ್ ಸಮಯದಲ್ಲಿ ತಮ್ಮ ತಂದೆ ದುರಂತವೊಂದರಲ್ಲಿ ಸಾವನ್ನಪ್ಪಿದ್ದರು. ಆಗ ಶಾರುಖ್ ಖಾನ್ ನನಗೆ ಬೆಂಬಲವಾಗಿ ನಿಲ್ಲಲು ಚಿತ್ರೀಕರಣವನ್ನು ನಿಲ್ಲಿಸಲು ಸಿದ್ಧರಾಗಿದ್ದರು. ಆ ಸಂದರ್ಭದಲ್ಲಿ ಶಾರುಖ್ ಯಾವಾಗಲು ಬಂದು ನನ್ನ ಜೊತೆ ಕೂರುತ್ತಿದ್ದರು ಎಂದು ಹೇಳಿದ್ದಾರೆ.

ಶಾರುಖ್ ಖಾನ್, ಐಶ್ವರ್ಯ ರೈ, ಮಾಧುರಿ ದೀಕ್ಷಿತ್ ನಟಿಸಿರುವ ದೇವದಾಸ್ ಚಿತ್ರ ಬ್ಲಾಕ್ ಬಾಸ್ಟರ್ ಚಿತ್ರವಾಗಿ ಹೊರಹೊಮ್ಮಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ 168 ಕೋಟಿ ಆದಾಯಗಳಿಸಿತ್ತು.

Exit mobile version