Site icon Vistara News

Stree 2 New Song:’ಆಜ್ ಕಿ ರಾತ್’ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ತಮನ್ನಾ ; ಮಿಲ್ಕಿ ಬ್ಯೂಟಿಯ ಹಾಟ್‌ ಸ್ಟೆಪ್‌ಗೆ ಫುಲ್‌ ಫಿದಾ!

Aaj Ki Raat


ಮುಂಬೈ : ಶ್ರದ್ಧಾ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ಸ್ತ್ರೀ 2 ಚಿತ್ರದ ‘ಆಜ್ ಕಿ ರಾತ್’ (Aaj Ki Raat)ಎಂಬ ಹೊಸ ಹಾಡು ಇದೀಗ ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ನಟಿ ತಮನ್ನಾ ಭಾಟಿಯಾ(Tamanna Bhatiya)ಅವರ ಡ್ಯಾನ್ಸ್ ವೀಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ತಮನ್ನಾ ಅವರ ಫಸ್ಟ್ ಲುಕ್ ಅನ್ನು ಸ್ತ್ರೀ 2 ರ ಟ್ರೈಲರ್‌ನಲ್ಲಿ ಪ್ರದರ್ಶಿಸಲಾಯಿತು. ಈಗ, ಸ್ತ್ರೀ 2(Stree 2 New Song) ಚಿತ್ರದ ನಿರ್ಮಾಪಕರಾದ ಮ್ಯಾಡಾಕ್ ಫಿಲ್ಮ್ಸ್ ಅಂತಿಮವಾಗಿ ಈ ಚಿತ್ರದ ಬಹುನಿರೀಕ್ಷಿತ ಪೆಪ್ಪಿ ಹಾಡನ್ನು ರಿಲೀಸ್‌ ಮಾಡಿದೆ. ಇದಕ್ಕೆ “#AajKiRaat ಹೋಗಿ ತಬಾಹಿ ಕಿ ರಾತ್!” ಎಂದು ಮ್ಯಾಡಾಕ್ ಫಿಲ್ಮ್ಸ್ ಶೀರ್ಷಿಕೆ ಬರೆದಿದೆ.

ಈ ಹಾಡಿನಲ್ಲಿ ತಮನ್ನಾ ಅವರೊಂದಿಗೆ ರಾಜ್ ಕುಮಾರ್ ರಾವ್, ಅಪರಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ಮತ್ತು ಚಿತ್ರದ ನಿರ್ದೇಶಕ ಅಮರ್ ಕೌಶಿಕ್ ಕೂಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ತ್ರೀ 2 ಚಿತ್ರದ ಸಂಗೀತ ಸಂಯೋಜಕ ಸಚಿನ್-ಜಿಗರ್ ಈ ಹಾಡಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.”ಕಮಾರಿಯಾ ಮತ್ತು ಮಿಲೇಗಿ ಮಿಲೇಗಿ ಹಿಟ್ ಹಾಡುಗಳ ನಂತರ, ನಾವು ಆಜ್ ಕಿ ರಾತ್ ಎನ್ನುವ ಹಿಟ್ ಹಾಡನ್ನು ನೀಡಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗಿತ್ತು. ತಮನ್ನಾ ಅವರ ಅದ್ಭುತ ನೃತ್ಯ ಸಂಯೋಜನೆಯೊಂದಿಗೆ, ಈ ಹಾಡು ಪ್ರೇಕ್ಷಕರ ನೆಚ್ಚಿನದಾಗಲಿದೆ ಎಂದು ನಮಗೆ ನಂಬಿಕೆ ಇತ್ತು” ಎಂದು ತಿಳಿಸಿದ್ದಾರೆ.

ಅಮರ್ ಕೌಶಿಕ್ ನಿರ್ದೇಶನದ ಸ್ತ್ರೀ 2 ಚಿತ್ರವು ಸ್ತ್ರೀಯ (ಶ್ರದ್ಧಾ ಪಾತ್ರ) ದುಷ್ಟಶಕ್ತಿಯ ಪಾತ್ರದ ಸುತ್ತ ಸುತ್ತುವುದಲ್ಲದೆ, ‘ಸರ್ಕತಾ’ ಎಂಬ ಮತ್ತೊಂದು ಅಪಾಯಕಾರಿ ದುಷ್ಟ ಶಕ್ತಿಯು ಚಂದೇರಿಯ ಜನರನ್ನು ಭಯಭೀತಿಗೊಳಿಸುತ್ತದೆ. ಈ ಚಿತ್ರವು ಆಗಸ್ಟ್ 15, 2024 ರಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ನಾಗಚೈತನ್ಯ ಜೊತೆ ಪ್ರೇಮಿ, ಪತ್ನಿ ಮತ್ತು ತಾಯಿಯಾಗಿ ನಟಿಸಿದ್ದಾರೆ ಈ ನಟಿ!

ಸ್ತ್ರೀ 2 ಜೊತೆಗೆ ಇನ್ನೂ ಎರಡು ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಈ ಬಾರಿಯ ಸ್ವಾತಂತ್ರ್ಯ ದಿನದಂದು ಸಿನಿಮಾ ಪ್ರಿಯರಿಗೆ ಒಂದು ಸಿಹಿಸುದ್ದಿಯಾಗಲಿದೆ.

ಆದಾಗ್ಯೂ, ಈ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿನ ಹೆಚ್ಚು ಸದ್ದು ಮಾಡುವ ನಿರೀಕ್ಷೆಯಿದೆ. ಸ್ತ್ರೀ 2 ಹೊರತುಪಡಿಸಿ, ಅಕ್ಷಯ್ ಕುಮಾರ್ ಅವರ ಖೇಲ್ ಖೇಲ್ ಮೇ ಮತ್ತು ಜಾನ್ ಅಬ್ರಹಾಂ ಅವರ ವೇದಾ ಆಗಸ್ಟ್ 15, 2024 ರಂದು ಬಿಡುಗಡೆಯಾಗುತ್ತಿವೆ.

Exit mobile version