Site icon Vistara News

Sunil shetty: ಕೆ ಎಲ್‌ ರಾಹುಲ್‌ ಪತ್ನಿ ಗರ್ಭಿಣಿಯಲ್ಲ! ಅಭಿಮಾನಿಗಳ ಹೊಸ ಸಂಶೋಧನೆ!

ಮುಂಬಯಿ: ನಟಿ ಅಥಿಯಾ ಶೆಟ್ಟಿ (Athiya Shetty) ಮತ್ತು ಕ್ರಿಕೆಟಿಗ ಕೆ.ಎಲ್. ರಾಹುಲ್ (k.l. rahul) ಮೊದಲ ಮಗುವಿನ (first baby) ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ವೈರಲ್ (viral) ಆಗಿ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಆದರೆ ಇದೀಗ ಈ ಸುದ್ದಿ ಸುಳ್ಳು (fake) ಎಂಬುದು ದೃಢಪಟ್ಟಿದೆ.

ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಥಿಯಾ ಶೆಟ್ಟಿ ಮತ್ತು ಕೆ.ಎಲ್. ರಾಹುಲ್ ಅವರು ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು ನಟ ಸುನೀಲ್ ಶೆಟ್ಟಿ (sunil shetty) ಅವರು ಕೊಟ್ಟ ಸುಳಿವಿನಿಂದಾಗಿ ಎನ್ನಲಾಗಿದೆ.

ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ದಿವಾನೆ ಕಾರ್ಯಕ್ರಮದ ನಿರೂಪಕಿಯಾಗಿರುವ ಮಾಧುರಿ ದೀಕ್ಷಿತ್ ಅವರು ನಟ ಸುನೀಲ್ ಕುಮಾರ್ ಅವರೊಂದಿಗೆ ಮಾತನಾಡುವಾಗ ಸುನೀಲ್ ಅವರು ತಾನು ಅಜ್ಜನಾಗುವ ಬಗ್ಗೆ ಮಾತನಾಡಿದ್ದರು. ಇದು ಊಹಾಪೋಹಕ್ಕೆ ಕಾರಣವಾಗಿತ್ತು.

ಸುನೀಲ್ ಶೆಟ್ಟಿ ಏನು ಹೇಳಿದ್ದರು ?:

ಡ್ಯಾನ್ಸ್ ದಿವಾನೆಯ ಮುಂದಿನ ಸೀಸನ್ ಬಂದಾಗ ನಾನು ಅಜ್ಜನಾಗಿ ವೇದಿಕೆ ಮೇಲೆ ನಡೆಯುತ್ತೇನೆ ಎಂದಿದ್ದರು. ಇದರಿಂದಾಗಿಯೇ ರಾಹುಲ್ ಹಾಗೂ ಅಥಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಸುಮಾರು ಐದು ವರ್ಷಗಳ ಡೇಟಿಂಗ್ ಅನಂತರ ಅಥಿಯಾ ಶೆಟ್ಟಿ ಮತ್ತು ಕೆ.ಎಲ್. ರಾಹುಲ್ 2023 ರ ಜನವರಿಯಲ್ಲಿ ವಿವಾಹವಾದರು. ಖಂಡಾಲಾದಲ್ಲಿ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಅತ್ಯಾಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು.


ತಮ್ಮ ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಎಲ್ಲರಿಗೂ ತಿಳಿಸಿದ್ದರು. ಜನವರಿಯಲ್ಲಿ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಅಥಿಯಾ ಮತ್ತು ಕೆ.ಎಲ್. ರಾಹುಲ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ರೊಮ್ಯಾಂಟಿಕ್ ಕ್ಷಣಗಳ ತುಣುಕುಗಳನ್ನು ಹಂಚಿಕೊಂಡಿದ್ದರು.

ಇದನ್ನು ಓದಿ: Ajay Devagan: ಅಜಯ್ ದೇವಗನ್ ಗೆ ಹುಟ್ಟುಹಬ್ಬದ ಸಂಭ್ರಮ; ಬಯಲಾಯ್ತು ನಟನ ಹಿಂದಿನ ಹೆಸರಿನ ಸಿಕ್ರೆಟ್!

ಮಗುವಿನ ನಿರೀಕ್ಷೆಯಲ್ಲಿಲ್ಲ!

ಅಥಿಯಾ ಮತ್ತು ರಾಹುಲ್ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿಲ್ಲ. ಸುನೀಲ್ ಶೆಟ್ಟಿ ಅವರು ತಮಾಷೆಗಾಗಿ ಈ ರೀತಿ ಹೇಳಿದ್ದು, ಎಲ್ಲರೂ ತಪ್ಪಾಗಿ ಅರ್ಥೈಸಿದ್ದಾರೆ ಎಂದು ಮಾಧ್ಯಮವೊಂದು ಸ್ಪಷ್ಟಪಡಿಸಿದೆ.

ಗುಲ್ಲು ಹಬ್ಬಿದ್ದು ಯಾಕೆ?

ನಟ ಸುನೀಲ್ ಶೆಟ್ಟಿ ಮಾಧುರಿ ದೀಕ್ಷಿತ್ ಜತೆಗೆ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ʻಡ್ಯಾನ್ಸ್ ದೀವಾನೆʼಯಲ್ಲಿ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ವಿಶೇಷ ಸಂಚಿಕೆಯಲ್ಲಿ, ಕಾರ್ಯಕ್ರಮದ ನಿರೂಪಕಿ ಭಾರ್ತಿ ಸಿಂಗ್ ಅವರು ಸುನೀಲ್ ಅವರು ಅಜ್ಜನ ರೀತಿ ಹೇಗೆ ವರ್ತಿಸಬಹುದು ಎಂದು ಹಾಸ್ಯಮಯವಾಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುನೀಲ್ “ಹೌದು ಮುಂದಿನ ಸೀಸನ್‌ಗೆ ಬಂದಾಗ ನಾನು ವೇದಿಕೆಯ ಮೇಲೆ ಅಜ್ಜನಂತೆಯೇ ಓಡಾಡುತ್ತೇನೆʼʼ ಎಂದು ಪ್ರತಿಕ್ರಿಯೆ ನೀಡಿದ್ದರು..” ನಟನ ಈ ಹೇಳಿಕೆ ಭಾರಿ ಸದ್ದು ಮಾಡಿದೆ. ಅವರ ಪುತ್ರಿ ಗರ್ಭಿಣಿಯಾಗಿರಬಹುದು ಎಂದು ಈ ವೇಳೆ ಸುದ್ದಿ ಹಬ್ಬಿದೆ.

ಅವರ ಹೇಳಿಕೆಯಿಂದಾಗಿ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂದು ಅಭಿಮಾನಿಗಳು ಪ್ರಶ್ನೆ ಇಟ್ಟಿದ್ದರು. ಅಥಿಯಾ ಶೆಟ್ಟಿ ಮದುವೆ ನಂತರ ಸಿನಿಮಾಗಳಿಂದ ದೂರವಿದ್ದಾರೆ. ಇತ್ತೀಚೆಗೆ ಯಾವುದೇ ಬಾಲಿವುಡ್‌ಗೆ ಸಂಬಂಧಿಸಿದ ಪಾರ್ಟಿಗಳಲ್ಲಿ ಅಥಿಯಾ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಈ ಸುದ್ದಿ ಸತ್ಯ ಇರಬಹುದು ಎಂದು ಅವರ ಫ್ಯಾನ್ಸ್‌ ಊಹಿಸುತ್ತಿದ್ದಾರೆ.

Exit mobile version