Site icon Vistara News

Titanic Movie : ಟೈಟಾನಿಕ್​, ಗಾಂಧಿ ಸಿನಿಮಾದ ನಟ ಬರ್ನಾರ್ಡ್ ಹಿಲ್ ನಿಧನ

Bernard Hill

ಬೆಂಗಳೂರು: ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಟ್ರೈಲಜಿ ಮತ್ತು ವಿಶ್ವ ವಿಖ್ಯಾತಿ ಪಡೆದ ಹಾಲಿವುಡ್​ ಸಿನಿಮಾ ‘ಟೈಟಾನಿಕ್’ ನಲ್ಲಿ (Titanic Movie) ಪ್ರಭಾವಶಾಲಿ ಪಾತ್ರಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಇಂಗ್ಲಿಷ್ ನಟ ಬರ್ನಾರ್ಡ್ ಹಿಲ್ (Bernard Hill) ನಿಧನ ಹೊಂದಿದ್ದಾರೆ. ಅವರಿಗೆ ತಮ್ಮ 79 ವರ್ಷ. ಸ್ಕಾಟ್ಲೆಂಟ್​ನ ಜನಪ್ರಿಯ ಹಾಡುಗಾರ್ತಿ ಬಾರ್ಬರಾ ಡಿಕ್ಸನ್ ಈ ಸುದ್ದಿಯನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪ್ರಕಟಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಲ್ ಅವರು 1982ರಲ್ಲಿ ಮಹಾತ್ಮ ಗಾಂಧಿಯ ಜೀವನ ಚರಿತ್ರೆಯ ಕುರಿತು ರಿಚರ್ಡ್​ ಅಟೆನ್​ಬರೊ ಅವರ ಗಾಂಧಿ ಸಿನಿಮಾದಲ್ಲೂ ನಟಿಸಿದ್ದರು.

“ಬರ್ನಾರ್ಡ್ ಹಿಲ್ ಅವರ ನಿಧನದಿಂದ ನಾನು ದುಃಖ ತೃಪ್ತನಾಗಿದ್ದೇನೆ. ನಾವು 1974-1975 ರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಿಜವಾಗಿಯೂ ಗಮನಾರ್ಹ ನಟ. ಅವರೊಂದಿಗೆ ಕೆಲಸ ಮಾಡುವುದು ಒಂದು ಗೌರವವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಹಿಲ್ ಅವರ ನಿಧನದ ನಂತರ ಅಭಿಮಾನಿಗಳು ಅವರಿಗೆ ಗೌರವ ಸಲ್ಲಿಸಿದ್ದಾರೆ. ಅನೇಕರು ಅವರ ಬಹುಮುಖ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

ಪ್ರಭಾವಶಾಲಿ ಬ್ರಿಟಿಷ್ ಕಿರು ಸರಣಿ ‘ಬಾಯ್ಸ್ ಫ್ರಮ್ ದಿ ಬ್ಲ್ಯಾಕ್ಸ್ಟಫ್’ ನಲ್ಲಿ ಕಾರ್ಮಿಕ ವರ್ಗದ ನಾಯಕ ಯೋಸರ್ ಹ್ಯೂಸ್ ಅವರಂತಹ ಸಂಕೀರ್ಣ ಪಾತ್ರಗಳನ್ನು ಮಾಡಿರುವ ಅವರ ಪ್ರತಿಭೆಯನ್ನು ಸ್ಮರಿಸಿದ್ದಾರೆ. ಬರ್ನಾರ್ಡ್​ ಹಿಲ್​ ಭಾರತೀಯರಿಗೆ ಟೈಟಾನಿಕ್​ ಸಿನಿಮಾ ಮೂಲಕ ಪರಿಚಿತ. ಅವರು ಆ ಸಿನಿಮಾದಲ್ಲಿ ಹಡಗಿನ ಕ್ಯಾಪ್ಟನ್​ ಎಡ್ವರ್ಡ್ ಸ್ಮಿತ್ ಪಾತ್ರದಲ್ಲಿ ನಟಿಸಿದ್ದರು.

ವೈವಿಧ್ಯಮಯ ಪಾತ್ರ

ಹಿಲ್ ಅವರು ತಮ್ಮ ಐದು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ರಂಗಭೂಮಿ, ದೂರದರ್ಶನ ಮತ್ತು ಚಲನಚಿತ್ರದಾದ್ಯಂತ ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದರು. ‘ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಟರ್ನ್ ಆಫ್ ದಿ ಕಿಂಗ್’ ಮತ್ತು ‘ಟೈಟಾನಿಕ್’ ಸಿನಿಮಾಗಳ ಮೂಲಕ ಅಕಾಡಮಿ ಪ್ರಶಸ್ತಿಗಳನ್ನು ಗೆದ್ದಿದ್ದರು.

ಇದನ್ನೂ ಓದಿ: Self-Healing Roads: ರಸ್ತೆಗಳಲ್ಲಿ ಹೊಂಡಗಳೇ ಇರಲ್ಲ! ಬರಲಿವೆ ಸೆಲ್ಫ್‌ ಹೀಲಿಂಗ್‌ ರೋಡ್‌ಗಳು!

ಬಿಬಿಸಿ ಟಿವಿ ಸರಣಿ “ವೂಲ್ಫ್ ಹಾಲ್” ನಲ್ಲಿ, ಬರ್ನಾರ್ಡ್ ಹಿಲ್ ಡ್ಯೂಕ್ ಆಫ್ ನಾರ್ಫೋಕ್ ಆಗಿ ಸ್ಮರಣೀಯ ಅಭಿನಯ ಮಾಡಿದ್ದರು. ಕಾರ್ಡಿನಲ್ ವೋಲ್ಸಿಯ ವಿರೋಧಿ ಮತ್ತು ಅನ್ನಿ ಬೊಲೆನ್ ಅವರ ಚಿಕ್ಕಪ್ಪನಾದ ಈ ಪಾತ್ರವು ಹಿಲ್ ಅವರ ಬಹುಮುಖ ನಟನಾ ಕೌಶಲ್ಯವನ್ನು ಪ್ರದರ್ಶಿಸಿತ್ತು.

ದಶಕಗಳ ಸುದೀರ್ಘ ವೃತ್ತಿಜೀವನದುದ್ದಕ್ಕೂ, ಹಿಲ್ ವಿವಿಧ ಪಾತ್ರಗಳನ್ನು ಮಾಡಿದ್ದರ. ಅದು ಶಾಶ್ವತ ಪರಿಣಾಮ ಬೀರಿತ್ತು. 1976 ರ ಗೌರವಾನ್ವಿತ ಬಿಬಿಸಿ ಸರಣಿ “ಐ, ಕ್ಲಾಡಿಯಸ್” ನಲ್ಲಿ ಕಾಣಿಸಿಕೊಂಡಾಗಿನಿಂದ ಹಿಡಿದು 1982 ರಲ್ಲಿ ಮೆಚ್ಚುಗೆ ಪಡೆದ ಚಲನಚಿತ್ರ “ಗಾಂಧಿ” ಯಲ್ಲಿನ ಅವರ ಸರ್ಜೆಂಟ್​ ಪುಟ್ನಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 1989 ರಲ್ಲಿ “ಶೆರ್ಲಿ ವ್ಯಾಲೆಂಟೈನ್”, 2002 ರಲ್ಲಿ “ದಿ ಸ್ಕಾರ್ಪಿಯನ್ ಕಿಂಗ್” ಮತ್ತು 2008 ರ ಟಾಮ್ ಕ್ರೂಸ್ ಚಲನಚಿತ್ರ “ವಾಲ್ಕೈರಿ” ನಂತಹ ಸಿನಿಮಾಗಳಲ್ಲಿ ಪಾತ್ರ ವಹಿಸಿದ್ದರು.

Exit mobile version