Site icon Vistara News

Tragic Death: ಸಾಕು ನಾಯಿಗೆ ಸ್ನಾನ ಮಾಡಿಸಲು ಹೋಗಿ ಜೀವ ಕಳೆದುಕೊಂಡ!

Tragic Death


ಸಾಮಾನ್ಯವಾಗಿ ಕೆಲವರು ನೀರು ಕಾಯಿಸಲು ಎಲೆಕ್ಟ್ರಾನಿಕ್ (Tragic Death) ರಾಡ್‍ಗಳನ್ನು ಬಳಸುತ್ತಾರೆ. ಇದನ್ನು ನೀರಿನಲ್ಲಿ ಇಟ್ಟು ಸ್ವಿಚ್ ಆನ್ ಮಾಡಿದರೆ ಸ್ವಲ್ಪ ಹೊತ್ತಿನಲ್ಲೇ ನೀರು ಬಿಸಿ ಆಗುತ್ತದೆ. ಆದರೆ ಇದನ್ನು ತುಂಬಾ ಎಚ್ಚರಿಕೆಯಿಂದ ಬಳಸಬೇಕು. ಒಂದು ವೇಳೆ ಇದಕ್ಕೆ ಸ್ವಲ್ಪ ಕೈ ತಗುಲಿದರೂ ಸಾವು ಸಂಭವಿಸುತ್ತದೆ. ಇದೀಗ ಅಂತಹದೊಂದು ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ. ಭಾನುವಾರ 40 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸಾಕು ನಾಯಿಗೆ ಸ್ನಾನ ಮಾಡಲು ನೀರನ್ನು ಬಿಸಿ ಮಾಡುವಾಗ ವಿದ್ಯುತ್ ಹೀಟರ್ (Electric Water Heater) ರಾಡ್ ಅನ್ನು ತಪ್ಪಾಗಿ ತೋಳಿನ ಕೆಳಗೆ ಇರಿಸಿದ ಕಾರಣ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ.

ದೊಣೆಪುಡಿ ಮಹೇಶ್ ಬಾಬು ಎಂಬ ವ್ಯಕ್ತಿ ನಗರದ ಹನುಮಾನ್ ದೇವಾಲಯದ ಬಳಿ ವಾಸಿಸುತ್ತಿದ್ದು, ಭಾನುವಾರ ಸಂಜೆ ತನ್ನ ಸಾಕು ನಾಯಿಗೆ ಸ್ನಾನ ಮಾಡಿಸಲು ನೀರು ಬಿಸಿಮಾಡಲು ವಿದ್ಯುತ್ ಹೀಟರ್ ಅನ್ನು ಹೊರತೆಗೆದರು. ಆದರೆ, ಆ ಸಮಯದಲ್ಲಿ ಅವರಿಗೆ ಫೋನ್ ಕರೆ ಬಂದಿತು. ಆಗ ಅವರು ಪೋನಿನಲ್ಲಿ ಮಾತನಾಡುತ್ತಾ ತಪ್ಪಾಗಿ ರಾಡ್ ಅನ್ನು ನೀರಿನಲ್ಲಿ ಇಡುವ ಬದಲು ಅದನ್ನು ತಮ್ಮ ತೋಳಿನ ಕೆಳಗೆ ಇರಿಸಿ ಸ್ವಿಚ್ ಆನ್ ಮಾಡಿದರು. ಇದರಿಂದ ಅವರು ಕರೆಂಟ್ ಶಾಕ್ ಹೊಡೆದು ಕುಸಿದು ಬಿದ್ದಿದ್ದಾರೆ. ನಂತರ ಅವರ ಪತ್ನಿ ದುರ್ಗಾ ದೇವಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕರೆಂಟ್ ಶಾಕ್‍ ತಗುಲಿ ಜನರು ಸಾವನಪ್ಪಿದ ಘಟನೆ ಇದೇ ಮೊದಲಲ್ಲ. ಇದಕ್ಕೂ ಮುನ್ನ ಖಮ್ಮಂ ಜಿಲ್ಲೆಯ ಚಿಂತಕನಿ ಮಂಡಲದ ಮಥ್ಕೆಪಲ್ಲಿ ನಾಮಾವರಂನಲ್ಲಿರುವ ತಮ್ಮ ನಿವಾಸದಲ್ಲಿ ತಂದೆಯ ಫೋನ್ ಚಾರ್ಜರ್ ಅನ್ನು ಪ್ಲಗ್ ಮಾಡುವಾಗ ಒಂಬತ್ತು ವರ್ಷದ ಬಾಲಕಿ ಕರೆಂಟ್ ಶಾಕ್‍ನಿಂದ ಸಾವನ್ನಪ್ಪಿದ್ದಳು. ಮೃತ ಬಾಲಕಿಯನ್ನು ಗ್ರಾಮದ ಸರ್ಕಾರಿ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಕಾಟಿಕಲಾ ಅಂಜಲಿ ಕಾರ್ತಿಕ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಕಂಠ ಪೂರ್ತಿ ಕುಡಿದ ಪಿಯು ಹುಡುಗನ ಕಾರು ಚಾಲನೆ; ಜೀವ ಕಳೆದುಕೊಂಡ ಅಮಾಯಕ

ವರದಿಗಳ ಪ್ರಕಾರ, ಸಂತ್ರಸ್ತೆ ವಾಶ್‍ರೂಂಗೆ ಹೋಗಿ ಬಂದಿದ್ದಳು ಮತ್ತು ಅವಳ ಕೈಗಳು ಇನ್ನೂ ಒದ್ದೆಯಾಗಿದ್ದಾಗ ಪೋನ್ ಚಾರ್ಜ್‌ ಆನ್ ಮಾಡಿದ್ದಾಳೆ. ಇದರಿಂದ ಅವಳು ಕರೆಂಟ್ ಶಾಕ್ ಹೊಡೆದು ಸಾವನಪ್ಪಿದ್ದಾಳೆ ಎನ್ನಲಾಗಿದೆ.

Exit mobile version