Site icon Vistara News

Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

Wayanad Tragedy

ಭಾರೀ ಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯ (Wayanad Tragedy )ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ (ಜುಲೈ 30) ಮುಂಜಾನೆ ಭಾರಿ ಭೂಕುಸಿತ ಉಂಟಾಗಿದೆ. ಇದರಿಂದ ಹಲವು ಜನರು ಸಾವನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಬದುಕುಳಿದವರಲ್ಲಿ ಅನೇಕ ಜನರು ತಮ್ಮ ಮನೆ, ಕುಟುಂಬದವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಚಲನಚಿತ್ರೋದ್ಯಮದ ಹಲವಾರು ಸೆಲೆಬ್ರಿಟಿಗಳು ಸಂತ್ರಸ್ತರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅದಕ್ಕಾಗಿ ತಮ್ಮ ಕೈಲಾದಷ್ಟು ಸಹಾಯ ಹಸ್ತ ನೀಡಿದ್ದಾರೆ.

ಖ್ಯಾತ ನಟ ಮೋಹನ್ ಲಾಲ್ 3 ಕೋಟಿ ರೂ. ನೆರವು ನೀಡಿದ್ದಾರೆ. ನಟಿ ಜ್ಯೋತಿಕಾ, ನಟ ಕಾರ್ತಿ ಮತ್ತು ನಟ ಸೂರ್ಯ ಅವರು ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಹಾಗೇ ಮಲಯಾಳಂ ನಟ ದಂಪತಿ ಫಹಾದ್ ಫಾಸಿಲ್ ಮತ್ತು ನಜ್ರಿಯಾ ನಜೀಮ್ ಕೂಡ ಸಂತ್ರಸ್ತರಿಗೆ ಸಹಾಯ ಮಾಡಲು 25 ಲಕ್ಷ ರೂ. ನೀಡಿದ್ದಾರೆ. ಅವರು ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ, “ನಾವು ಸಿಎಂಡಿಆರ್ ಎಫ್ ಗೆ 25 ಲಕ್ಷ ರೂ.ಗಳ ದೇಣಿಗೆ ನೀಡುತ್ತಿದ್ದೇವೆ. ಇದನ್ನು ತೀವ್ರ ಅಗತ್ಯವಿರುವವರಿಗೆ ಅಗತ್ಯತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂಬುದಾಗಿ ತಿಳಿಸಿದ್ದಾರೆ.

ಹಾಗೇ ಪೊನ್ನಿಯಿನ್ ಸೆಲ್ವನ್ ಪಾರ್ಟ್ 1 ಮತ್ತು ರಾವಣನ್‍ನಂತಹ ಚಿತ್ರಗಳಲ್ಲಿ ನಟಿಸಿದ ಖ್ಯಾತ ತಮಿಳು ನಟ ವಿಕ್ರಮ್ ಭೂಕುಸಿತದ ಸಂತ್ರಸ್ತರಿಗೆ 20 ಲಕ್ಷ ರೂ. ನೀಡಿದ್ದಾರೆ. ಈ ವಿಚಾರವನ್ನು ಅವರ ಮ್ಯಾನೇಜರ್ ಯುವರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ತಬ್ಬಲಿ ಶಿಶುಗಳಿಗೆ ಎದೆಹಾಲು ನೀಡಿ ಪೋಷಿಸಿದ ʼಮಹಾತಾಯಿʼಗೆ ವ್ಯಾಪಕ ಪ್ರಶಂಸೆ

ಅಲ್ಲದೇ ಮಲಯಾಳಂ ನಟ ಮಮ್ಮುಟ್ಟಿ ಮತ್ತು ಅವರ ಪುತ್ರ ಮತ್ತು ನಟ ದುಲ್ಕರ್ ಸಲ್ಮಾನ್ ಕೂಡ ಪರಿಹಾರ ನಿಧಿಗೆ 35 ಲಕ್ಷ ರೂ. ನೀಡಿದ್ದಾರೆ. ಈ ವಿಚಾರವನ್ನು ನಟ ಮುಮ್ಮಟಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಅವರ ಚಾರಿಟಬಲ್ ಟ್ರಸ್ಟ್ ತೀವ್ರ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದೆ ಮತ್ತು ಸಂತ್ರಸ್ತರಿಗೆ ಅಗತ್ಯ ವಸ್ತುಗಳಾದ ಆಹಾರ ಪದಾರ್ಥಗಳು, ಔಷಧಿಗಳು, ಬಟ್ಟೆಗಳು ಮತ್ತು ಇತರ ಪ್ರಮುಖ ವಸ್ತುಗಳನ್ನು ಪೂರೈಸುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಹಾಗೇ ನಟಿ ರಶ್ಮಿಕಾ ಮಂದಣ್ಣ ಕೂಡ ಸಂತ್ರಸ್ತರಿಗೆ 10 ಲಕ್ಷ ರೂ. ದೇಣಿಗೆ ನೀಡಿರುವುದಾಗಿ ತಿಳಿದುಬಂದಿದೆ.

Exit mobile version