ಶಿಮ್ಲಾ: ವಿದ್ಯಾರ್ಥಿಗಳಿಂದ (students) ನಿಂದನೆ ಮತ್ತು ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಶಿಕ್ಷಕರ (teachers) ಹಿಂಜರಿಕೆಯಿಂದ 9ನೇ ತರಗತಿಯಲ್ಲೇ ಆಕೆ ಶಾಲೆ (school) ಬಿಡಬೇಕಾಯಿತು. ಆದರೆ ಈಗ ಆಕೆ ಹಿಮಾಚಲ ಪ್ರದೇಶ (himachal pradesh) ರಾಜ್ಯ ಚುನಾವಣಾ ಆಯೋಗದ (Election Icon) ಚುನಾವಣಾ ರಾಯಭಾರಿ! ಆಕೆಯೇ ತೃತೀಯಲಿಂಗಿ ಮಾಯಾ ಠಾಕೂರ್.
ಶಿಮ್ಲಾ ಸಂಸದೀಯ ಕ್ಷೇತ್ರದ ಅಡಿಯಲ್ಲಿ ಸೋಲನ್ ಜಿಲ್ಲೆಯ ಕುನಿಹಾರ್ ಪ್ರದೇಶದ ಕೋಠಿ ಗ್ರಾಮದಿಂದ ಬಂದ ಠಾಕೂರ್, ಆಗ ಪರಿಸ್ಥಿತಿ ತುಂಬಾ ಕಠೋರವಾಗಿತ್ತು. ಗ್ರಾಮಸ್ಥರು ನನ್ನನ್ನು ಗ್ರಾಮದಿಂದಲೇ ಹೊರಹಾಕುವಂತೆ ಕುಟುಂಬವನ್ನು ಒತ್ತಾಯಿಸಲು ಪ್ರಾರಂಭಿಸಿದ್ದರು ಎನ್ನುವುದನ್ನು ನೆನಪಿಸಿಕೊಂಡರು.
ಶೌಚಾಲಯವನ್ನು ಬಳಸಲು ಅನುಮತಿಸದ ಮಟ್ಟಿಗೆ ಶಾಲೆಯಲ್ಲಿನ ದೌರ್ಜನ್ಯ ಮತ್ತು ತಾರತಮ್ಯದ ಬಗ್ಗೆ ನಾನು ನನ್ನ ಕುಟುಂಬ ಸದಸ್ಯರಿಗೆ ಹೇಳಿದಾಗ, ಅವರು ನಾನು ಶಾಲೆಯನ್ನು ಬಿಡಲು ಬಯಸುತ್ತಿದ್ದೇನೆ ಎಂದು ಭಾವಿಸಿದರು. ಅವಕಾಶವನ್ನು ನೀಡಿದರೆ ನಾನು ನನ್ನ ಶಿಕ್ಷಣವನ್ನು ಪುನರಾರಂಭಿಸಲು ಬಯಸುತ್ತೇನೆ ಎಂದು ಅವರು ಅರ್ಥ ಮಾಡಿಕೊಳ್ಳಲಿಲ್ಲ. ಜೀವನದ ಪ್ರತಿ ಹಂತದಲ್ಲೂ ನನ್ನಂಥವರು ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಸಾಧಿಸುವ ಇಚ್ಛೆ ಇದೆ
ಶಿಕ್ಷಣ, ಉದ್ಯೋಗಗಳು ಟ್ರಾನ್ಸ್‌ಜೆಂಡರ್‌ಗಳ ವಿರುದ್ಧದ ತಾರತಮ್ಯವನ್ನು ಕೊನೆಗೊಳಿಸುವುದು. ಅಧ್ಯಯನ ಮಾಡಲು, ಶಿಕ್ಷಕರಾಗಲು, ವಕೀಲರಾಗಲು, ಪೊಲೀಸ್ ಸೇವೆಗೆ ಸೇರಲು ಮತ್ತು ಜೀವನದ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಬಯಸುವ ಟ್ರಾನ್ಸ್‌ಜೆಂಡರ್‌ಗಳು ಇದ್ದಾರೆ. ಆದರೆ ನಾವು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದಾಗ ಸಾಕಷ್ಟು ಹಿನ್ನಡೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಗಂಡಾಗಿ ಹುಟ್ಟಿದ್ದೇನೆ. ಆದರೆ ನನ್ನನ್ನು ಮಹಿಳೆ ಎಂದು ಗುರುತಿಸಿಕೊಂಡಿದ್ದೇನೆ. ನಾವು ಯುನಿಸೆಕ್ಸ್ ಮತ್ತು ನಪುಂಸಕರಲ್ಲ. ಜನರು ನಮ್ಮನ್ನು ನಪುಂಸಕರೆಂದು ಅಂತರವನ್ನು ಕಾಯ್ದುಕೊಳ್ಳುತ್ತಾರೆ ಎಂದು ಹೇಳಿದರು.
ಜಾಗೃತಿ ಅಗತ್ಯ
ಉತ್ತರಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ತಮ್ಮ ಆಯ್ಕೆಯ ಜೀವನವನ್ನು ನಡೆಸುವ ಹಕ್ಕನ್ನು ಹೊಂದಿರುವ ಟ್ರಾನ್ಸ್‌ಜೆಂಡರ್‌ಗಳಿಗೆ ಸಾಮಾಜಿಕ ಸ್ವೀಕಾರಕ್ಕಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಆದರೆ ನಮ್ಮ ವಿರುದ್ಧ ನಡೆಯುವ ದೌರ್ಜನ್ಯದ ವಿರುದ್ಧ ದೂರುಗಳನ್ನು ಪೊಲೀಸರು ದಾಖಲಿಸಿಕೊಳ್ಳುವುದಿಲ್ಲ ಎಂದು ದೂಷಿಸಿದರು.
ಇದನ್ನೂ ಓದಿ: Voter Turnout: 4ನೇ ಹಂತದಲ್ಲಿ ಹೆಚ್ಚಿದ ಮತದಾನ; ಪುರುಷರಿಗಿಂತ ಸ್ತ್ರೀಯರಿಂದಲೇ ಹೆಚ್ಚು ಮತ ಚಲಾವಣೆ; ಹೀಗಿದೆ ಆಯೋಗದ ಮಾಹಿತಿ
ಈ ಹಿಂದೆ ದೆಹಲಿಯ ಎನ್‌ಜಿಒದಲ್ಲಿ ಕೆಲಸ ಮಾಡಿದ್ದ ಠಾಕೂರ್, ಕೆನಡಾದಂತಹ ದೇಶಗಳ ರೀತಿಯಲ್ಲಿ ಶೈಕ್ಷಣಿಕ ಪಠ್ಯಕ್ರಮದಲ್ಲಿ ಟ್ರಾನ್ಸ್‌ಜೆಂಡರ್‌ಗಳ ಬಗ್ಗೆ ಪಾಠಗಳನ್ನು ಇರಿಸಬೇಕೆಂದು ಪ್ರತಿಪಾದಿಸುತ್ತಾರೆ. ಇದು ತಾರತಮ್ಯ ಮತ್ತು ಕಿರುಕುಳದಿಂದ ಮುಕ್ತವಾದ ಶೈಕ್ಷಣಿಕ ವಾತಾವರಣದ ಹಕ್ಕನ್ನು ಒದಗಿಸುತ್ತದೆ. ಬೆದರಿಸಿ ಅಥವಾ ಶಾಪ ಹಾಕಿ ಹಣ ವಸೂಲಿ ಮಾಡುವ ಕಾರ್ಯವನ್ನು ಮಂಗಳಮುಖಿಯರು ನಿಲ್ಲಿಸಬೇಕು ಎಂದೂ ಅವರು ಸಲಹೆ ನೀಡಿದರು.
ಟ್ರಾನ್ಸ್‌ಜೆಂಡರ್‌ಗಳನ್ನು ಬಲವಂತವಾಗಿ ಕರೆದೊಯ್ಯುವ ಮತ್ತು ಅವರಿಗೆ ಕಿರುಕುಳ ನೀಡುವ ಜನರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದೂ ಅವರು ಪ್ರತಿಪಾದಿಸಿದರು.