Site icon Vistara News

Lok Sabha Election 2024: ಬುದ್ಧಿ ಇರೋರು ವೋಟ್‌ ಹಾಕ್ತಿದ್ದಾರೆ ಎಂದ ಕಿಚ್ಚ! ಉಳಿದ ತಾರೆಗಳು ಹೇಳಿದ್ದೇನು?

Lok Sabha Election 2024 sandalwood celebrities reaction

ಬೆಂಗಳೂರು:  ಲೋಕಸಭಾ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವಂತೆ ಪ್ರಕಾಶ್ ರಾಜ್ ಮನವಿ ಮಾಡಿದರು. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕೂಡ ʻನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿʼ ಎಂದು ಮಾಧ್ಯಮದ ಜತೆ ಮಾತನಾಡಿದರು. ಅಶ್ವಿನಿ ಪುನೀತ್, ಡಾಲಿ ಧನಂಜಯ್, ಸಪ್ತಮಿ ಗೌಡ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸೇರಿ ಅನೇಕ ಸೆಲೆಬ್ರಿಟಿಗಳು ವೋಟ್ ಮಾಡಿದ್ದಾರೆ. 

ನಟ ಸುದೀಪ್‌ ಅವರು ಮಗಳ ಜತೆ ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ಈ ವೇಳೆ ನಟ ಮಾಧ್ಯಮದ ಜತೆ ಮಾತನಾಡಿ ʻʻತಲೆ ಇರುವವರು, ಬುದ್ಧಿ ಇರುವವರು, ದೇಶದ ಮೇಲೆ ಪ್ರೀತಿ ಇರುವವರು ವೋಟ್‌ ಹಾಕುತ್ತಿದ್ದಾರೆ, ಮಿಕ್ಕವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಯಾರು ವೋಟ್‌ ಹಾಕಲು ಬರುತ್ತ ಇಲ್ಲವೋ ಅವರ ಬಗ್ಗೆ ತುಂಬ ತೆಲೆ ಕೆಡಿಸಿಕೊಳ್ಳುವುದನ್ನು ಬಿಡೋಣʼʼಎಂದರು.

ಇದನ್ನೂ ಓದಿ: Lok Sabha Election 2024: ಹಳ್ಳಿ ಸ್ಟೈಲ್‌ನಲ್ಲಿ ಬಂದು ಮತ ಹಾಕಿದ ಡಾಲಿ! ವೋಟ್ ಮಾಡಿದ ಸೆಲೆಬ್ರಿಟಿಗಳಿವರು!

ನಟ ಉಪೇಂದ್ರ ಮಾತನಾಡಿ ʻʻವೋಟ್‌ ಮಾಡಲು ತುಂಬ ಜನ ಬರುತ್ತ ಇದ್ದಾರೆ. ಎಲ್ಲರಿಗೂ ಮಹತ್ವ ಗೊತ್ತಿದೆ. ಖಂಡತ ಎಲ್ಲರೂ ಬರ್ತಾರೆ. ಯುವಕರು ಬಂದು ವೋಟ್‌ ಮಾಡಿ. ಪ್ರಜೆಗಳು ವಿಚಾರ ಮಾಡಿ ಮತ ಹಾಕಿʼʼಎಂದರು.

ಈ ಬಾರಿ ಡಾಲಿ ಧನಂಜಯ್‌ ಅವರು ಹಳ್ಳಿ ಸ್ಟೈಲ್‌ನಲ್ಲಿ ಬಂದು ವೋಟ್‌ ಮಾಡಿದರು. ಈ ವೇಳೆ ವಿಸ್ತಾರ ಜತೆಗೆ ಮಾತನಾಡಿ ʻʻಮತದಾನ ಪರ್ಸಂಟೇಜ್‌ ಜಾಸ್ತಿ ಆಗಬೇಕು. ನಾವು ಮತ ಚಲಾಯಿಸಬೇಕು. ಯುವಕರಿಗೆ ಹೇಳೋದು ಏನಂದರೆ ಯೋಚನೆ ಮಾಡಿ ಮತ ಹಾಕಿ. ನೋಡೋದು, ಕೇಳೋದು ಯಾವತ್ತೂ ಸತ್ಯ ಇರುವುದಿಲ್ಲ. ನಮ್ಮ ಭವಿಷ್ಯಕ್ಕೆ ಏನು ಬೇಕು ಎಂದು ಅರಿತು ವೋಟ್‌ ಮಾಡಬೇಕು. ನಮ್ಮ ಮತ ಖಂಡಿತ ಒಳ್ಳೆಯ ನಾಯಕರಿಗೆ ಆಗರುತ್ತೆʼʼಎಂದರು.

ಮತದಾನದ ಬಳಿಕ ನಟಿ ತಾರಾ ಮಾತನಾಡಿ ʻಇವತ್ತು ರಾಷ್ಟ್ರ ಕಟ್ಟುವ ಸಮಯ. ಇಲ್ಲಿ ನಮ್ಮ ನೆಚ್ಚಿನ ನಾಯಕನ್ನು ಆರಿಸುವ ಸಮಯ. ವೋಟ್‌ ಮಾಡುವ ಸಂಭ್ರಮ ನೋಡಿ ಖುಷಿ ಆಗುತ್ತದೆ. ತುಂಬ ಯುವಕರು ವೋಟ್‌ ಮಾಡುತ್ತಿದ್ದಾರೆ. ದೇಶದ ಪ್ರಜೆಯಾಗಿ ವೋಟ್‌ ಮಾಡುವುದು ತುಂಬ ಮುಖ್ಯ. ಎಲ್ಲ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮಗಿಂತ ಹೆಚ್ಚಾಗಿ ನೀವು ಮನೆ ಮನೆಗೆ ತಲುಪಿ ಮತದಾನದ ಅರಿವು ಮೂಡಿಸಿದ್ದೀರಿʼʼ ಎಂದರು.

ನಟ ಯಶ್ ಮಾತನಾಡಿ ʻʻಮತ ಹಾಕೋದು ನಮ್ಮೆಲ್ಲರ ಕರ್ತವ್ಯ. ಅದು ನಮ್ಮ ಹಕ್ಕು. ದೇಶಕ್ಕಾಗಿ ಮತ ಚಲಾವಣೆ ಮಾಡಬೇಕು. ನಿಮ್ಮ ನಿರ್ಧಾರಗಳಿಂದ ಕಲಿಯುವುದಕ್ಕೆ ಅವಕಾಶ ಸಿಗಲಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯ ಮುಖ್ಯ. ಸಮಯ ಕಳೆದಂತೆ ಮತದಾನ ಹೆಚ್ಚಾಗಬಹುದು. ಅಭಿವೃದ್ಧಿ ಅನ್ನೋದು ಮುಖ್ಯ. ದೇಶಕ್ಕೆ ಈಗ ಒಳ್ಳೆಯ ಅವಕಾಶ ಇದೆ. ಒಳ್ಳೆಯ ಸಮಯʼʼಎಂದು ಹೇಳಿದರು.

ನಟ ಸೃಜನ್ ಲೋಕೇಶ್ ಮಾತನಾಡಿ ʻʻಮತ ಹಾಕಿರುವುದು ಖುಷಿ ಕೊಟ್ಟಿದೆ. ಒತ್ತಾಯದಿಂದ ಯಾರು ಮತದಾನ ಮಾಡಬಾರದು. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಅದು ನಮ್ಮ ಮೂಲ ಹಕ್ಕುʼʼಎಂದರು.

ಮತದಾನ ಮಾಡಿದ ಬಳಿಕ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ ʻʻಮತದಾನ ನಮ್ಮಲ್ಲೆರ ಹಕ್ಕು. ಯೋಚನೆ ಮಾಡಿ ಮತದಾನ ಮಾಡಿ. ದೇಶದ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಮತದಾನ ಮಾಡಿ ಅಂತ ಹೇಳುತ್ತೇನೆ. ಬಂದು ಮತ ಹಾಕಿ ಎಲ್ಲಿಗಾದರೂ ಹೋಗಿ. ಯಾಕೆಂದರೆ ಮತಕ್ಕೆ ತುಂಬಾ ಬೆಲೆ ಇದೆʼʼಎಂದರು.

ನಟಿ ಅಮೂಲ್ಯ ಪತಿ ಜಗದೀಶ್ ಮಾತನಾಡಿ ʻʻವೋಟ್ ಮಾಡಿದ್ದೇವೆ,ಇದು ಎಲ್ಲರ ಹಕ್ಕು. ಈ ಬಾರೀ ತುಂಬಾ ಜನ ವೋಟ್ ಮಾಡ್ತಿದ್ದಾರೆ. ಹೆಚ್ಚು ಜನರು ವೋಟಿಂಗ್‌ಗೆ ಬಂದಿರೋದು ಖುಷಿಯಾಯ್ತು. ಎಲ್ಲರೂ ತಪ್ಪದೇ ಮತದಾನ ಮಾಡಬೇಕುʼʼಎಂದರು.

ಈಗಾಗಲೇ ಡಿಂಪಲ್‌ ಕ್ಷೀನ್‌ ರಚಿತಾ ರಾಮ್‌, ನಿರಂಜನ್‌ ದೇಶಪಾಂಡೆ, ದರ್ಶನ್‌, ವಿಜಯ್‌ ರಾಘವೇಂದ್ರ ಸೇರಿದಂತೆ ಸ್ಟಾರ್ಸ್‌ಗಳು ಮತಚಲಾಯಿಸಿದ್ದಾರೆ.

Exit mobile version