Site icon Vistara News

Voting awareness: ಸಮುದ್ರದಾಳದಲ್ಲಿ ಮತದಾನ ಜಾಗೃತಿ

voting awareness

ಚೆನ್ನೈ: ದೇಶಾದ್ಯಂತ ಲೋಕಸಭಾ ಚುನಾವಣೆ (loksabha election) ತಯಾರಿ ಬಹು ಜೋರಾಗಿಯೇ ನಡೆಯುತ್ತಿದೆ. ಒಂದೆಡೆ ವಿವಿಧ ಪಕ್ಷಗಳು ಮತದಾರರನ್ನು (voter’s) ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಭಾರತೀಯ ಚುನಾವಣಾ ಆಯೋಗವೂ (indian election commission) ಮತದಾರರನ್ನು ಮತಗಟ್ಟೆಗೆ ಸೆಳೆಯಲು ವಿವಿಧ ಕಸರತ್ತು ಗಳನ್ನು ಮಾಡುತ್ತಿದೆ. ಇದರೊಂದಿಗೆ ಇನ್ನು ಹಲವಾರು ಮಂದಿ ವಿಶೇಷ ರೀತಿಯಲ್ಲಿ ಜನರಲ್ಲಿ ಮತದಾನ ಜಾಗೃತಿಗಾಗಿ (Voting awareness) ಪ್ರಯತ್ನಿಸುತ್ತಿದ್ದಾರೆ.

ಇದೀಗ ಭಾರತೀಯ ಸ್ಕೂಬಾ ಡೈವರ್‌ಗಳು (Indian scuba diver’s) ಸಾಗರದ ಆಳದಲ್ಲಿ (depths of the sea) ಮತದಾನದ ಜಾಗೃತಿ ಅಭಿಯಾನವನ್ನು ನಡೆಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ ಮತದಾರರಲ್ಲಿ ಜಾಗೃತಿ ಮೂಡಿಸಲು ವಿಶೇಷ ರೀತಿಯಲ್ಲಿ ಆರು ಸ್ಕೂಬಾ ಡೈವರ್‌ಗಳು ತಮ್ಮ ಪ್ರಯತ್ನ ಮಾಡಿದ್ದಾರೆ. ದಕ್ಷಿಣ ಭಾರತದ (south india) ಚೆನ್ನೈನ (chennai) ನೀಲಂಕಾರೈನಲ್ಲಿ (Neelankarai) ಸುಮಾರು ಅರವತ್ತು ಅಡಿಗಳಷ್ಟು ನೀರಿನ ಅಡಿಯಲ್ಲಿ ಸಮುದ್ರದ ಆಳದಲ್ಲಿ ಮತದಾನ ಜಾಗೃತಿ ಕಾಯವನ್ನು ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇವರು ತಮ್ಮೊಂದಿಗೆ ಅಣಕು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಮತ್ತು ಭಾರತೀಯ ಚುನಾವಣಾ ಆಯೋಗದ ಸಂದೇಶಗಳನ್ನು ತೋರಿಸುವ ಫಲಕಗಳನ್ನು ತೆಗೆದುಕೊಂಡು ಹೋಗಿ ಆಳ ಸಮುದ್ರದಲ್ಲಿ ಮತದಾನದ ಮಹತ್ವವನ್ನು ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: Lok Sabha Election: ಏ.19ರವರೆಗೆ ಲೋಕಸಭೆ ಚುನಾವಣೆ; ಮೇ 22ಕ್ಕೆ ರಿಸಲ್ಟ್?

ಸಮುದ್ರದಾಳದಲ್ಲಿ ಪ್ರದರ್ಶನ

ಸಮುದ್ರದಾಳದಲ್ಲಿ ನಡೆಸಿದ ಮತದಾನ ಜಾಗೃತಿಯ ಪ್ರಚಾರವನ್ನು ಕೆಮರಾದಲ್ಲಿ ಸೆರೆ ಹಿಡಿದು ಪ್ರದರ್ಶಿಸಲಾಗಿದೆ. ಸ್ಕೂಬಾ ಡೈವರ್‌ಗಳಲ್ಲಿ ಒಬ್ಬರು ಮತದಾನದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಮತದಾನ ಮಾಡುವುದು ನಮ್ಮ ಕರ್ತವ್ಯ ಮತ್ತು ಹಕ್ಕು ಎಂಬುದನ್ನು ತೋರಿಸಲು ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ.


ಯಾರ ಯೋಜನೆ ?

ಈ ಆಳ ಸಮುದ್ರದ ಮತದಾರರ ಜಾಗೃತಿ ಅಭಿಯಾನ ಸ್ಕೂಬಾ ಡೈವಿಂಗ್ ತರಬೇತುದಾರ ಮತ್ತು ಟೆಂಪಲ್ ಅಡ್ವೆಂಚರ್‌ನ ನಿರ್ದೇಶಕ ಎಸ್‌.ಬಿ. ಅರವಿಂದ್ ತರುಣ್‌ಶ್ರೀ ಅವರ ಯೋಜನೆ.

ತರುಣ್‌ಶ್ರೀ ಅವರ ವಿನೂತನ ವಿಧಾನವು ಹೆಚ್ಚುನ ನಾಗರಿಕರನ್ನುಮತದಾನ ಜಾಗೃತಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಈ ಕುರಿತು ವಿಡಿಯೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಏಳು ಹಂತಗಳಲ್ಲಿ ಚುನಾವಣೆ

ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯು ದೇಶಾದ್ಯಂತ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸುವುದಕ್ಕೆ ಕಾಯುತ್ತಿದ್ದಾರೆ. ಸುಮಾರು 970 ಮಿಲಿಯನ್ ಅರ್ಹ ಮತದಾರರನ್ನು ಹೊಂದಿರುವ ಇದು ವಿಶ್ವದ ಅತಿದೊಡ್ಡ ಚುನಾವಣೆ ಪ್ರಕ್ರಿಯೆಯಾಗಿದೆ.

ನೀರೊಳಗಿನ ಮತದಾರರ ಜಾಗೃತಿ ಅಭಿಯಾನದಂತಹ ಯೋಜನೆಗಳು ಹೆಚ್ಚಿನ ಮತದಾರರನ್ನು ಮತಗಟ್ಟೆಗೆ ಸೆಳೆಯುವ ಪ್ರಯತ್ನ ಹೊಂದಿದೆ. ಇದರೊಂದಿಗೆ ಇಂತಹ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಸ್ಥೆಗಳೂ ತನ್ನ ಕೊಡುಗೆಯನ್ನು ನೀಡಿ ಮತದಾನದಲ್ಲಿ ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತವೆ.

Exit mobile version