Site icon Vistara News

Aadhaar ATM: ಬ್ಯಾಂಕ್‌ಗೆ ಹೋಗಬೇಕಿಲ್ಲ, ಎಟಿಎಂ ಕಾರ್ಡ್‌ ಬೇಕಿಲ್ಲ; ಮನೆಗೇ ಹಣ ತರಿಸಿಕೊಳ್ಳಬಹುದು!

Aadhaar ATM

ಕಾರ್ಡ್, ಫೋನ್ ವಹಿವಾಟು ಎಷ್ಟೇ ಚಾಲ್ತಿಯಲ್ಲಿದ್ದರೂ ಕೆಲವೊಮ್ಮೆ ನಗದು (cash) ಸ್ವಲ್ಪವಾದರೂ ಕೈಯಲ್ಲಿ ಬೇಕಾಗುತ್ತದೆ. ಆದರೆ ಈಗ ಎಲ್ಲರೂ ಬ್ಯುಸಿ. ಬ್ಯಾಂಕ್ (bank), ಎಟಿಎಂಗೆ (ATM) ಹೋಗಲು ಪುರುಸೊತ್ತಿಲ್ಲ. ಸುರಕ್ಷತೆ ಹಿನ್ನೆಲೆಯಲ್ಲಿ ಬ್ಯಾಂಕ್ ಕಾರ್ಡ್ ಗಳನ್ನು ಇನ್ನೊಬ್ಬರ ಕೈಗೆ ಕೊಡುವ ಹಾಗಿಲ್ಲ. ಹೀಗಿರುವಾಗ ತುರ್ತು ಹಣ ಬೇಕಾದಾಗ ಏನು ಮಾಡುವುದು ಎನ್ನುವ ಚಿಂತೆ ಇನ್ನು ಬೇಡ. ಯಾಕೆಂದರೆ ಆಧಾರ್ ಎಟಿಎಂ (Aadhaar ATM) ಇದ್ದರೆ ಸಾಕು ಮನೆಯಲ್ಲೇ ಕುಳಿತು ಹಣವನ್ನು ಪಡೆಯಬಹುದು.

ನಗದು ಹಣದ ಅವಶ್ಯಕತೆ ಇದ್ದಾಗ ಬ್ಯಾಂಕ್ ಅಥವಾ ಎಟಿಎಂಗೆ ಭೇಟಿ ನೀಡಲು ಸಮಯವಿಲ್ಲದೇ ಇದ್ದಾಗ ಐಪಿಪಿಬಿ (ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್- IPPB) ಆನ್‌ಲೈನ್ ಆಧಾರ್ ಎಟಿಎಂ (AEPS) ಸೇವೆಯನ್ನು ಬಳಸಿಕೊಂಡು ಮನೆಯಲ್ಲೇ ಕುಳಿತು ಹಣವನ್ನು ಪಡೆಯಬಹುದು.

ಈ ಕುರಿತು ಎಕ್ಸ್ ನಲ್ಲಿ (X) ಮಾಹಿತಿ ನೀಡಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತುರ್ತು ನಗದು ಅಗತ್ಯವಿದ್ದಾಗ ಬ್ಯಾಂಕ್‌ಗೆ ಭೇಟಿ ನೀಡಲು ಸಮಯವಿಲ್ಲದೇ ಇದ್ದಾಗ PPBONLine ಆಧಾರ್ ATM (AePS) ಸೇವೆಯನ್ನು ಬಳಸಿಕೊಂಡು ಮನೆಯಲ್ಲೇ ಕುಳಿತು ಹಣವನ್ನು ಪಡೆಯಬಹುದು. ಆಗ ಪೋಸ್ಟ್‌ಮ್ಯಾನ್ (postman) ನಿಮ್ಮ ಮನೆ ಬಾಗಿಲಿಗೆ ಬಂದು ಹಣವನ್ನು ನೀಡುತ್ತಾರೆ ಎಂದು ಹೇಳಿದೆ.

ಇದನ್ನು ಓದಿ: Silver price: ಗಗನಕ್ಕೇರುತ್ತಿದೆ ಬೆಳ್ಳಿ ದರ; ಹೂಡಿಕೆ ಮಾಡಲು ಇದು ಸಕಾಲ

ಆಧಾರ್ ಎಟಿಎಂ ಹೇಗೆ ಕೆಲಸ ಮಾಡುತ್ತದೆ ?

ಆಧಾರ್ ಎಟಿಎಂ ಅಥವಾ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು (AEPS) ಬಯೋಮೆಟ್ರಿಕ್‌ನೊಂದಿಗೆ ಮಾತ್ರ ಬಳಸಬಹುದು ಮತ್ತು ಆಧಾರ್-ಲಿಂಕ್ ಮಾಡಿದ ಖಾತೆಯಿಂದ ಹಣವನ್ನು ಪಡೆಯಬಹುದು ಅಥವಾ ಪಾವತಿಗಳನ್ನು ಮಾಡಬಹುದು.


Aadhaar Enabled Payment System (AEPS) ಎಂಬುದು ಪಾವತಿ ಸೇವೆಯಾಗಿದೆ. ಆಧಾರ್ ಮೂಲಕ ಸಕ್ರಿಯಗೊಳಿಸಿರುವ ಬ್ಯಾಂಕ್ ಗ್ರಾಹಕರು ಅದನ್ನೇ ಗುರುತಾಗಿ ಇಟ್ಟುಕೊಂಡು ಬ್ಯಾಂಕ್ ಖಾತೆಯನ್ನು ಪ್ರವೇಶಿಸಲು, ಬ್ಯಾಲೆನ್ಸ್ ವಿಚಾರಣೆ, ನಗದು ಹಿಂಪಡೆಯುವಿಕೆಯಂತಹ ಮೂಲಭೂತ ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸಬಹುದು.


ಯಾವ ಸೇವೆ ಪಡೆಯಬಹುದು?

ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ ಮೂಲಕ ಗ್ರಾಹಕರು ನಗದು ಹಿಂಪಡೆಯುವಿಕೆ, ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್ ಮೆಂಟ್ ಮತ್ತು ಆಧಾರ್‌ ಮೂಲಕ ಆಧಾರ್ ನಿಧಿ ವರ್ಗಾವಣೆ ಮಾಡಬಹುದಾಗಿದೆ.

ಸೇವೆ ಪಡೆಯುವುದು ಹೇಗೆ?

ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು ಬಳಸಬೇಕೆಂದು ಬಯಸಿದರೆ ಇದಕ್ಕಾಗಿ AEPS ಸೇವೆಯನ್ನು ನೀಡುವ ಬ್ಯಾಂಕ್‌ ನಲ್ಲಿ ಖಾತೆಯನ್ನು ಹೊಂದಿರಬೇಕು. ಬ್ಯಾಂಕ್‌ಗೆ ಲಿಂಕ್ ಮಾಡಲಾದ ಆಧಾರ್ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಮಾಡಿರಬೇಕು.

ಶುಲ್ಕಗಳು ಹೇಗಿದೆ ?

ಇಂಡಿಯನ್ ಪೋಸ್ಟ್ ಪೇಮೆಂಟ್ ಪೇಮೆಂಟ್ ಬ್ಯಾಂಕ್ ನೀಡುವ ವಿವಿಧ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ ಸೇವೆಗಳಿಗೆ ಗ್ರಾಹಕರಿಗೆ ಯಾವುದೇ ವಹಿವಾಟು ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ ಚಾಲ್ತಿಯಲ್ಲಿರುವ ಶುಲ್ಕಗಳ ಪ್ರಕಾರ ಡೋರ್‌ಸ್ಟೆಪ್ ಸೇವಾ ಶುಲ್ಕಗಳು ಅನ್ವಯವಾಗುತ್ತದೆ.

Exit mobile version