Site icon Vistara News

ITR Filling : ಐಟಿಆರ್-‌4 ಯಾರು ಬಳಸಬೇಕು, ಯಾರಿಗೆ ಸಲ್ಲದು?

ITR

ಕಳೆದ 2022-23ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಈಗಾಗಲೇ ವಿಸ್ತಾರ ಮನಿ ಗೈಡ್‌ನಲ್ಲಿ ಐಟಿಆರ್‌ 1,2 ಮತ್ತು 3ರ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ಮುಂದುವರಿದ ಭಾಗವಾಗಿ ಈಗ ಐಟಿಆರ್-‌4 ಅನ್ನು ಯಾರು ಬಳಸಬೇಕು, ಯಾರು ಬಳಸಕೂಡದು ಎಂಬುದನ್ನು ನೋಡೋಣ.

ಐಟಿಆರ್‌ -4 ಅಥವಾ ಸುಗಮ್‌ ಫಾರ್ಮ್‌ ಅನ್ನು ವೈಯಕ್ತಿಕ ತೆರಿಗೆದಾರರು ಮತ್ತು ಎಚ್‌ಯುಎಫ್‌, ಪಾರ್ಟನರ್‌ಶಿಪ್‌ ಕಂಪನಿಗಳು (LLP ಹೊರತುಪಡಿಸಿ) ಬಳಸಬಹುದು. ವೇತನ ಅಥವಾ ಪಿಂಚಣಿ ಮೂಲಕ 50 ಲಕ್ಷ ರೂ. ತನಕ ಆದಾಯ ಇರುವವರು, ವಸತಿ ಪ್ರಾಪರ್ಟಿಯಿಂದ 50 ಲಕ್ಷ ರೂ. ಮೀರದ ಆದಾಯ ಇರುವವರು, ಇತರ ಮೂಲಗಳಿಂದ 50 ಲಕ್ಷ ರೂ. ಮೀರದ ಆದಾಯ ಇರುವವರು ಐಟಿಆರ್-‌4 ಬಳಸಬಹುದು. 50 ಲಕ್ಷ ರೂ. ಮೀರದ ಆದಾಯ ಇರುವ ಫ್ರೀಲ್ಯಾನ್ಸರ್‌ಗಳೂ ಇದನ್ನು ಬಳಸಬಹುದು.

ಯಾರು ಐಟಿಆರ್-‌4 ಬಳಸಬಾರದು? ನಿಮ್ಮ ಆದಾಯ 50 ಲಕ್ಷ ರೂ. ಮೀರಿದ್ದರೆ, ಒಂದಕ್ಕಿಂತ ಹೆಚ್ಚು ಮನೆಯಿಂದ ಆದಾಯ ಬರುತ್ತಿದರೆ, ವಿದೇಶದಲ್ಲಿ ಆಸ್ತಿ ಇದ್ದರೆ, ಭಾರತದ ಹೊರಗೆ ಯಾವುದೇ ಅಕೌಂಟ್‌ಗೆ ಸೈನಿಂಗ್‌ ಅಥಾರಿಟಿ ಹೊಂದಿದ್ದರೆ, ಕಂಪನಿಯ ನಿರ್ದೇಶಕ ಆಗಿದ್ದರೆ ಐಟಿಆರ್-‌4 ಫಾರ್ಮ್‌ ಬಳಸಬಾರದು.

ಐಟಿಆರ್-‌5 : ಐಟಿಆರ್-‌5 ಫಾರ್ಮ್‌ ಅನ್ನು ಕಂಪನಿಗಳು ಎಲ್‌ಎಲ್‌ಪಿಗಳು (limited liability partnership̧) ಎಒಪಿ(Association of personş) ಬಿಸಿನೆಸ್‌ ಟ್ರಸ್ಟ್‌ ಮತ್ತು ಇನ್ವೆಸ್ಟ್‌ಮೆಂಟ್‌ ಫಂಡ್‌ ವಲಯದಲ್ಲಿ ಐಟಿಆರ್-‌5 ಬಳಸಲಾಗುತ್ತದೆ.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಐಟಿಆರ್-‌6 : ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 11 ( ಚಾರಿಟೆಬಲ್‌ ಅಥವಾ ಧಾರ್ಮಿಕ ಉದ್ದೇಶದಲ್ಲಿ ಪ್ರಾಪರ್ಟಿಯಿಂದ ಆದಾಯ) ಅಡಿಯಲ್ಲಿ ಕಂಪನಿಗಳು ಕ್ಲೇಮ್‌ ಮಾಡುವುದಿದ್ದರೆ ಐಟಿಆರ್-‌6 ಬಳಸಬೇಕು. ಆನ್‌ಲೈನ್‌ನಲ್ಲಿ ಮಾತ್ರ ಫಾರ್ಮ್‌ ಭರ್ತಿ ಮಾಡಬೇಕು.

ಐಟಿಆರ್-‌7 : ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 139(4ಎ), ಸೆಕ್ಷನ್‌ 139(4ಬಿ), ಸೆಕ್ಷನ್‌ 139(4ಸಿ), ಸೆಕ್ಷನ್‌ 139(4ಡಿ), ಸೆಕ್ಷನ್‌ 139(4ಇ), ಸೆಕ್ಷನ್‌ 139(4ಎಫ್) ಅಡಿಯಲ್ಲಿ ಐಟಿಆರ್-‌7 ಬಳಸಬೇಕು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 139(4ಎ) ಅಡಿಯಲ್ಲಿ ಚಾರಿಟೆಬಲ್‌ ಅಥವಾ ಧಾರ್ಮಿಕ ಉದ್ದೇಶದ ಟ್ರಸ್ಟ್‌ ಬರುತ್ತದೆ. ಸೆಕ್ಷನ್‌ 139(4ಬಿ) ಅಡಿಯಲ್ಲಿ ರಾಜಕೀಯ ಪಕ್ಷ ಬರುತ್ತದೆ. ಸೆಕ್ಷನ್‌ 139(4ಸಿ) ಅಡಿಯಲ್ಲಿ ವೈಜ್ಞಾನಿಕ ಸಂಶೋಧನಾ ಸಂಸ್ಥೆ, ನ್ಯೂಸ್‌ ಏಜೆನ್ಸಿ, ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಮೆಡಿಕಲ್‌ ಇನ್‌ಸ್ಟಿಟ್ಯೂಶನ್‌ ಬರುತ್ತದೆ.

Exit mobile version