ಬೆಂಗಳೂರು: ಅಮಿತ್ ಕಿಶನ್ ಬೆಂಗಳೂರಿನಲ್ಲಿ ವಿಮಾ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕ್ಲೈಮ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಹೆಚ್ಚಾಗಿ ಕ್ಯಾನ್ಸರ್‌ನಿಂದ ಜನರು ಸಾವನ್ನಪ್ಪಿದ ಪ್ರಕರಣಗಳೇ ಎದುರಾಗುತ್ತಿದ್ದವಂತೆ. ಆದರೆ ಏಕೆ ಜನರು ಈ ರೀತಿ ಕ್ಯಾನ್ಸರ್‌ಗೆ ಬಳಲುತ್ತಿದ್ದಾರೆ ಎನ್ನುವ ಚಿಂತೆ ಅವರನ್ನು ಕಾಡಲಾರಂಭಿಸಿತು. ಅದೇ ಚಿಂತೆ ಮುಂದೆ (Inspiring Story) ಅವರನ್ನು ಒಬ್ಬ ಸಾವಯುವ ಕೃಷಿಕನಾಗಿ (Organic Farming) ಬದಲಾಯಿಸಿತು.
ಅಮಿತ್ ಅವರ ಅಜ್ಜ ಕೃಷಿಕರಾಗಿದ್ದರಂತೆ. ಅವರಂತೆ ತಾನೂ ಸಾವಯುವ ಕೃಷಿ ಮಾಡಬೇಕು ಎನ್ನುವ ಕನಸನ್ನು ಕಟ್ಟಿಕೊಂಡ ಅಮಿತ್ 2019ರಲ್ಲಿ ಸಹೋದರ ಅಶ್ರಿತ್ ಸಹಾಯದೊಂದಿಗೆ ಹೆಬ್ಬೇವು ಫಾರ್ಮ್ಸ್ ಹೆಸರಿನ ಫಾರ್ಮ್ ಅನ್ನು ಆರಂಭಿಸಿದರು. ಅಲ್ಲಿ ನೈಸರ್ಗಿಕ ಬೀಜಗಳನ್ನೇ ಹಾಕಿ ಬೆಳೆ ಬೆಳೆಯಲಾರಂಭಿಸಿದರು. ಅದಕ್ಕೆ ಗೋವಿನ ಸಗಣಿ ಮತ್ತು ಗೋಮೂತ್ರವನ್ನೇ ಗೊಬ್ಬರದ ರೀತಿಯಲ್ಲಿ ಹಾಕಲಾರಂಭಿಸಿದರು. ಹಾಗೆಯೇ ಮಣ್ಣಿನಲ್ಲಿ ಪೊಟ್ಯಾಶಿಯಂ ಮಟ್ಟವನ್ನು ಹೆಚ್ಚಿಸಲೆಂದು ಬಾಳೆಕಾಯಿ ಮರಗಳನ್ನು ಬೆಳೆಸಿದರು.
ಇದನ್ನೂ ಓದಿ: Viral video: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಬೆಂಕಿ ಎಸೆದು ಕೋಲಾಹಲ ಸೃಷ್ಟಿಸಿದ ಮಹಿಳೆ!
ಮೊದಲಿಗೆ ಚಿಕ್ಕದಾಗಿ ಫಾರ್ಮ್ಸ್ ಆರಂಭಿಸಿದ ಅವರು ಅದರಲ್ಲಿ ತೆಂಗಿನಕಾಯಿ, ಬಿಳಿ ಕಡಲೆ, ಹೆಸರು ಕಾಳು ಸೇರಿ ಅನೇಕ ರೀತಿಯ ಆಹಾರ ಧಾನ್ಯಗಳನ್ನು ಬೆಳೆಸಲಾರಂಭಿಸಿದರು. ಸುಮಾರು 40 ಜಾತಿಯ ಆಹಾರ ಧಾನ್ಯಗಳನ್ನು ಮತ್ತು ತರಕಾರಿಗಳನ್ನು ಬೆಳೆಸಲಾರಂಭಿಸಿದರು. ಹಾಗೆಯೇ ದೇಸೀ ದನಗಳನ್ನು ಸಾಕಿ ಅದರ ಹಾಲನ್ನು ಮಾರಾಟ ಮಾಡಲಾರಂಭಿಸಿದರು. ಈ ರೀತಿ ಆರಂಭವಾದ ಅವರ ಸಾವಯುವ ಕೃಷಿಯಿಂದ ಇಂದು ಬೆಂಗಳೂರಿನಲ್ಲಿ ಒಂದು ಅಂಗಡಿ ಮತ್ತು ವೆಬ್‌ಸೈಟ್ ಒಂದನ್ನು ಮಾಡಲಾಗಿದೆ. ಅದರಲ್ಲಿ ಪ್ರತಿ ದಿನ ಆರು ಟನ್ ತರಕಾರಿ ಹಾಗೆಯೇ 1,500 ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ.
ಕೀಟನಾಶಕ ಬಳಸದೆ ಸಾವಯುವ ಕೃಷಿ ಮಾಡುವುದಕ್ಕೆ ರೈತರನ್ನು ಒಪ್ಪಿಸುವುದು ಮೊದಲಿಗೆ ಕಷ್ಟದ ಕೆಲಸವಾಗಿತ್ತು. ಆದರೆ ಬರಬರುತ್ತ ರೈತರು ಕೂಡ ಅದನ್ನು ಒಪ್ಪಿಕೊಂಡು ಅನುಸರಿಸಲಾರಂಭಿಸಿದರು. ಈ ಅಮಿತ್ ಅವರಿಂದಾಗಿ ಇಂದು ಸುಮಾರು 700 ಎಕರೆ ಜಾಗದಲ್ಲಿ ಸಾವಯವ ಕೃಷಿಯನ್ನೇ ಮಾಡಲಾಗುತ್ತಿದೆ.
ಇದನ್ನೂ ಓದಿ: Viral News : ಅಂತ್ಯಸಂಸ್ಕಾರ ಮಾಡಲಾಗಿದ್ದ ಮಗಳು ವಿಡಿಯೊ ಕಾಲ್ ಮಾಡಿದಳು! ಇದೊಂದು ವಿಚಿತ್ರ ಲವ್ ಸ್ಟೋರಿ
ದೇಸೀ ದನಗಳಿಂದ ತೆಗೆದ ಹಾಲನ್ನು ಇವರು ವೆಬ್‌ಸೈಟ್ ಮೂಲಕ ಹಾಗೂ ಬೆಂಗಳೂರಿನ ಅಂಗಡಿಯಲ್ಲಿ ಮಾರಾಟ ಮಾಡುತ್ತಾರೆ. ಅದಷ್ಟೇ ಅಲ್ಲದೆ ಸಮೀಪದ ಚಿನ್ನಮಂತೂರು, ಮಾವುತೂರು, ಪೆದ್ದಮಂತುರು, ರೊದ್ದಂ ಮತ್ತು ಮಡಕಶಿರ ಗ್ರಾಮಗಳಲ್ಲಿರುವ 3000 ಮಹಿಳೆಯರಿಗೆ ಪ್ರತಿ ದಿನ 25 ಲೀಟರ್ ಹಾಲನ್ನು ಕೊಡಲಾಗುತ್ತದೆ. ಅವರಿಂದ ಪನೀರ್, ತುಪ್ಪ ಮತ್ತು ಇತರೆ ಡೈರಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.
ಈ ರೀತಿಯಲ್ಲಿ ಅಮಿತ್ ಅವರು ಕಾರ್ಪೋರೇಟ್ ಜೀವನ ಬಿಟ್ಟು, ಸಾವಯುವ ಕೃಷಿಕನಾಗುವುದಲ್ಲದೆ ಇಂದು ಅದೆಷ್ಟೋ ರೈತರನ್ನು ಸಾವಯುವ ಕೃಷಿಗೆ ವಾಪಸು ಎಳೆತಂದಿದ್ದಾರೆ. ಹಾಗೆಯೇ ಸಾವಿರಾರು ಹೆಣ್ಣು ಮಕ್ಕಳಿಗೆ ಕೆಲಸ ನೀಡಿ ವರ್ಷಕ್ಕೆ ಸರಿ ಸುಮಾರು 21 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ.