Site icon Vistara News

ರಾಜಮಾರ್ಗ ಅಂಕಣ | ಅವರು ಹಾಡುತ್ತಿದ್ದರೆ ಮೈಯ ನೋವೆಲ್ಲ ಕಣ್ಣೀರಾಗಿ ಹರಿಯುತ್ತಿತ್ತು!

Bheemsen Joshi

ಭಾರತರತ್ನ ಪ್ರಶಸ್ತಿ ವಿಜೇತ ಪಂಡಿತ್ ಭೀಮಸೇನ್ ಜೋಷಿ ಅವರು ಹಿಂದೂಸ್ತಾನಿ ಸಂಗೀತದಲ್ಲಿ ಬಹು ದೊಡ್ಡ ಸಾಧನೆ ಮಾಡಿದವರು. ಅವರು ವೇದಿಕೆಗಳಲ್ಲಿ ಮೈಮರೆತು ಅಭಂಗಗಳನ್ನು ಹಾಡುತ್ತಾ ಇರುವುದನ್ನು ನೋಡುವುದೇ ಚಂದ. ಅವರ ಇಡೀ ದೇಹವು ಸಂಗೀತದ ಜೊತೆಗೆ ಸಂವಾದಿ ಆಗುತ್ತಿತ್ತು.

ಅದರಲ್ಲಿಯೂ ಅವರಿಗೆ ತುಂಬಾ ಇಷ್ಟವಾದ ಹಾಡು ಭಾಗ್ಯದ ಲಕ್ಷ್ಮಿ ಬಾರಮ್ಮ. ಪುರಂದರದಾಸರ ಈ ಹಾಡಿಗೊಂದು ಭಾಷ್ಯವನ್ನು ಬರೆದವರು ಅವರು. ಅದನ್ನು ಹಾಡುವಾಗ ಅವರ ಇಡೀ ದೇಹದಲ್ಲಿ ವಿದ್ಯುತ್ ಸಂಚಾರ ಆಗುತ್ತಿತ್ತು. ಆ ಹಾಡನ್ನು ಹಾಡದೆ ಅವರ ಯಾವ ಕಛೇರಿಯು ಕೂಡ ಮುಗಿಯುತ್ತಲೇ ಇರಲಿಲ್ಲ.

ಅಂತಹ ಜೋಶಿಯವರಿಗೆ ಎಪ್ಪತ್ತೈದು ವರ್ಷ ದಾಟುವಾಗ ತೀವ್ರವಾದ ಮೊಣಕಾಲು ಗಂಟು ನೋವು ಆರಂಭ ಆಯಿತು. ನೆಲದ ಮೇಲೆ ಕಾಲು ಮಡಚಿ ಕುಳಿತುಕೊಳ್ಳುವುದು ಅವರಿಗೆ ಕಷ್ಟ ಆಯಿತು. ವೈದ್ಯರು ಕುರ್ಚಿಯ ಮೇಲೆ ಕುಳಿತು ಹಾಡಲು ಸಲಹೆ ನೀಡಿದರು. ಜೋಶಿಯವರಿಗೆ ಅದು ಇಷ್ಟ ಆಗಲೇ ಇಲ್ಲ. ಕೊನೆಗೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೆರವಿನಿಂದ ಎರಡೂ ಮೊಣಕಾಲು ಗಂಟುಗಳ ಸರ್ಜರಿ ಆಯಿತು. ನಂತರ ಅವರು ಆಸ್ಪತ್ರೆಯ ಬೆಡ್ ಮೇಲೆ ತಿಂಗಳುಗಟ್ಟಲೆ ಮಲಗಬೇಕಾಯಿತು. ಕಾಲು ಮಡಚಲು ಆಗದೆ ತುಂಬಾ ನೋವು ಪಡಬೇಕಾಯಿತು.

ಆಗ ಸಹಿಸಲಾಗದ ನೋವು ಉಂಟಾದಾಗ ಜೋಶಿಯವರು ಮಂಚದ ಮೇಲೆ ಕಾಲು ಕೆಳಗೆ ಬಿಟ್ಟು ಕುಳಿತುಕೊಳ್ಳುತ್ತಿದ್ದರು. ಕಣ್ಣು ಮುಚ್ಚಿ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ನೋವು ಕಡಿಮೆ ಆಗುವವರೆಗೆ ಗಟ್ಟಿಯಾಗಿ ಹಾಡುತ್ತಿದ್ದರು.

ಆ ಹಾಡನ್ನು ಅವರು ಲಕ್ಷ ಲಕ್ಷ ವೇದಿಕೆಯಲ್ಲಿ ಆಗಲೇ ಹಾಡಿ ಆಗಿತ್ತು. ವಿದೇಶದ ವೇದಿಕೆಗಳಲ್ಲಿ ಕೂಡ ಆ ಹಾಡಿಗೆ ಭಾರೀ ಡಿಮಾಂಡ್ ಇತ್ತು.

ಆದರೆ ಅದೇ ಹಾಡನ್ನು ಜೋಶಿಯವರು ಆಸ್ಪತ್ರೆಯಲ್ಲಿ ಹಾಡುವಾಗ ಅವರ ದೇಹದ ನೋವೆಲ್ಲ ಕಣ್ಣೀರಾಗಿ ಗಲ್ಲದ ಮೇಲೆ ಹರಿಯುತ್ತಿತ್ತು. ಅವರಿಗೆ ಊಟ, ತಿಂಡಿ ಎಲ್ಲವೂ ಮರೆತು ಹೋಗುತ್ತಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಸಂಗೀತಕ್ಕೆ ನೋವನ್ನು ಮರೆಸುವ ಶಕ್ತಿ ಇದೆ ಎಂದು ಅವರು ಬಲವಾಗಿ ನಂಬಿದ್ದರು.
ಇದನ್ನೂ ಓದಿ| ರಾಜಮಾರ್ಗ ಅಂಕಣ| ಮಧ್ಯ ರಾತ್ರಿ ಎದ್ದುಬಂದು ಎರಡು ಹಾಡು ಹಾಡಿದ್ದರು ಸುಬ್ಬುಲಕ್ಷ್ಮಿ, ಯಾಕೆಂದರೆ..

Exit mobile version