ವಡೋದರಾ: ಅದೆಷ್ಟೋ ರಾಜಕಾರಣಿಗಳ ಅನೈತಿಕ ಸಂಬಂಧ ಜಗಜ್ಜಾಹೀರಾಗಿದೆ. ಅದಕ್ಕೆ ಕರ್ನಾಟಕದ ರಾಜಕಾರಣಿಗಳೂ ಹೊರತಲ್ಲ. ಅದೆಷ್ಟೋ ರಾಜಕಾರಣಿಗಳು ಈಗಾಗಲೇ ಲೈಂಗಿಕ ಹಗರಣದಲ್ಲಿ ಸಿಲುಕಿದ್ದಾರೆ. ಈ ಸಾಲಿಗೆ ಈಗ ಸೇರಿದ್ದು ಗುಜರಾತ್‌ನ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಭರತ್ ಸಿಂಗ್ ಸೋಲಂಕಿ. ಇವರದ್ದು ಇನ್ನೂ ವಿಭಿನ್ನ ಕೇಸ್. ಭರತ್ ಸಿಂಗ್ ಬೇರೊಬ್ಬ ಮಹಿಳೆಯೊಂದಿಗೆ ಇದ್ದಾಗ, ಪತ್ನಿಯೇ ಹೋಗಿ ರೆಡ್‌ಹ್ಯಾಂಡ್ ಆಗಿ ಅವರನ್ನು ಹಿಡಿದಿದ್ದಾರೆ. ಅಷ್ಟೇ ಅಲ್ಲ, ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.
ಭರತ್ ಸಿಂಗ್ ಸೋಲಂಕಿ ಮತ್ತು ಅವರ ಪತ್ನಿ ರೇಷ್ಮಾ ಪಟೇಲ್ ನಡುವೆ ಭಿನ್ನಾಭಿಪ್ರಾಯ ಈಗಿನದಲ್ಲ. ಭರತ್ ಸಿಂಗ್‌ಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ರೇಷ್ಮಾ ಈಗಾಗಲೇ ಆರೋಪ ಮಾಡಿದ್ದು, ಇವರಿಬ್ಬರ ಮಧ್ಯೆ ಕಾನೂನು ಹೋರಾಟವೂ ನಡೆಯುತ್ತಿದೆ. ಆದರೆ ನಾನು ಯಾವ ಕಾರಣಕ್ಕೂ ಭರತ್‌ಗೆ ಡಿವೋರ್ಸ್ ನೀಡುವುದಿಲ್ಲ ಎಂದೂ ರೇಷ್ಮಾ ಈಗಾಗಲೇ ಹೇಳಿಕೊಂಡಿದ್ದಾರೆ. ಆದರೆ ಈ ಬಾರಿ ಗಂಡನ ಮರ್ಯಾದಿಯನ್ನು ಉದ್ದೇಶಪೂರ್ವಕವಾಗಿಯೇ ತೆಗೆದಿದ್ದಾರೆ.
ಆನಂದ್ ಎಂಬಲ್ಲಿರುವ ಬಂಗಲೆಯಲ್ಲಿ ಭರತ್ ಸಿಂಗ್ ಬೇರೊಬ್ಬ ಯುವತಿಯೊಂದಿಗೆ ಇದ್ದಾರೆ ಎಂಬ ಮಾಹಿತಿ ರೇಷ್ಮಾರಿಗೆ ಹೇಗೋ ಸಿಕ್ಕಿಬಿಟ್ಟಿತ್ತು. ಎರಡು ಮೂರು ಜನರೊಂದಿಗೆ ಅಲ್ಲಿಗೆ ಹೋದ ರೇಷ್ಮಾ ಪಟೇಲ್, ಆ ಯುವತಿಗೆ ಬಾಯಿಗೆ ಬಂದಂತೆ ಗುಜರಾತಿ ಭಾಷೆಯಲ್ಲಿ ಬೈದಿದ್ದಾರೆ. ಯುವತಿ ಮುಖಮುಚ್ಚಿಕೊಂಡು ಕುರ್ಚಿಯೊಂದರ ಮೇಲೆ ಕುಳಿತಿದ್ದಾರೆ. ಇಬ್ಬರು ಅವಳನ್ನು ವಿಡಿಯೋ ಮಾಡುತ್ತಿದ್ದರೆ, ರೇಷ್ಮಾ ಹೋಗಿ ಆಕೆಗೆ ಏಟನ್ನೂ ಕೊಟ್ಟಿದ್ದಾರೆ. ಆ ಮಹಿಳೆ ಕೊನೆಗೂ ತನ್ನ ಮುಖ ತೋರಿಸಲಿಲ್ಲ.
ಇದನ್ನೂ ಓದಿ: ರಾಜಕೀಯ ದೇಣಿಗೆ: ಬಿಜೆಪಿಗೆ ಸಿಂಹ ಪಾಲು, ಕಾಂಗ್ರೆಸ್‌ಗೆ ಇಲ್ಲೂ ಭಾರಿ ಅಂತರದ ಸೋಲು!
ರೇಷ್ಮಾ ತನ್ನ ಪತಿ ಬಳಿ ಹೋಗಿ, ಯಾರೀಕೆ? ನೀವು ಇಲ್ಲೇನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಭರತ್ ಸಿಂಗ್ ಉತ್ತರ ಕೊಡುವ ಮೊದಲೇ, ಅವರೊಂದಿಗೆ ಇದ್ದ ಯುವತಿ ಉತ್ತರಿಸಿ, ʼನೀನು ಇಲ್ಲೇನು ಮಾಡುತ್ತಿದ್ದೀಯಾ?, ನಾನು ಅವರೊಂದಿಗೆ ಮಜಾ ಮಾಡುತ್ತೇನೆ, ನಿನಗೇನು?ʼ ಎಂದಿದ್ದಾಳೆ. ಈ ಅಧಿಕಪ್ರಸಂಗತನದ ಮಾತುಗಳನ್ನು ಕೇಳುತ್ತಿದ್ದಂತೆ ರೇಷ್ಮಾ ಮತ್ತಷ್ಟು ಕೆರಳಿದ್ದಾರೆ. ತುಂಬ ಸಿಟ್ಟಿನಲ್ಲಿ ಆಕೆಯ ಕಡೆ ಹೋಗುತ್ತಿದ್ದ ಅವರನ್ನು, ಭರತ್ ಸಿಂಗ್ ಸೋಲಂಕಿ ತಳ್ಳಿದ್ದಾರೆ.
ಭರತ್ ಸಿಂಗ್ ಸೋಲಂಕಿ ಯಾರು?
ಭರತ್ ಸಿಂಗ್ ಸೋಲಂಕಿಯವರು ಹಿರಿಯ ಕಾಂಗ್ರೆಸ್ ನಾಯಕರು. 2009ರಿಂದ 2011ರವರೆಗೆ ಕೇಂದ್ರ ಇಂಧನ ಇಲಾಖೆ ರಾಜ್ಯ ಸಚಿವರಾಗಿದ್ದರು. 2011 ರಿಂದ 2012ರವರೆಗೆ ಕೇಂದ್ರ ರೈಲ್ವೆ ಸಚಿವಾಲಯದಲ್ಲಿ ಮತ್ತು 2012ರಿಂದ 2014ರವರೆಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ರಾಜ್ಯ ಸಚಿವರಾಗಿದ್ದರು. ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಗೆ ಎರಡು ಬಾರಿ ಅಧ್ಯಕ್ಷರಾಗಿದ್ದಾರೆ. ಇವರ ದಾಂಪತ್ಯ ಜೀವನ ಸ್ವಲ್ಪವೂ ಸರಿಯಾಗಿಲ್ಲ. ಭರತ್ ಸಿಂಗ್ ಸೋಲಂಕಿ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂಬ ಆರೋಪವನ್ನೂ ಇವರು ಮಾಡಿದ್ದಾರೆ.
ಇದನ್ನೂ ಓದಿ: ರಾಜಕೀಯ ದೇಣಿಗೆ: ಬಿಜೆಪಿಗೆ ಸಿಂಹ ಪಾಲು, ಕಾಂಗ್ರೆಸ್‌ಗೆ ಇಲ್ಲೂ ಭಾರಿ ಅಂತರದ ಸೋಲು!