Site icon Vistara News

ಗುಜರಾತ್​ ಕರಾವಳಿಯಲ್ಲಿ ಡ್ರಗ್ಸ್​ ತರುತ್ತಿದ್ದ ಪಾಕ್​ ಬೋಟ್​ ಜಪ್ತಿ; 200 ಕೋಟಿ ರೂ ಬೆಲೆಯ ಮಾದಕ ವಸ್ತು ವಶ

Gujarat coast

ಅಹ್ಮದಾಬಾದ್​: ಅರೇಬಿಯನ್ ಸಮುದ್ರದ ಗುಜರಾತ್​ ಕರಾವಳಿ ತೀರದಲ್ಲಿ ಪಾಕಿಸ್ತಾನಿ ಮೀನುಗಾರಿಕಾ ಬೋಟ್​​ನಲ್ಲಿದ್ದ 200 ಕೋಟಿ ರೂಪಾಯಿ ಮೌಲ್ಯದ 40 ಕೆಜಿ ಹೆರಾಯಿನ್​​ನ್ನು ವಶಪಡಿಸಿಕೊಳ್ಳಲಾಗಿದೆ. ಗುಜರಾತ್​ ಆ್ಯಂಟಿ ಟೆರರಿಸ್ಟ್​ ಸ್ಕ್ವಾಡ್​ (ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ) ಮತ್ತು ಭಾರತೀಯ ಕರಾವಳಿ ರಕ್ಷಕ ಪಡೆ (ಇಂಡಿಯನ್​ ಕೋಸ್ಟ್​ ಗಾರ್ಡ್​) ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ಈ ಬೋಟ್​​ನಲ್ಲಿದ್ದ ಆರು ಮಂದಿ ಪಾಕಿಸ್ತಾನ ಪ್ರಜೆಗಳನ್ನೂ ಬಂಧಿಸಲಾಗಿದೆ.

ಪಾಕಿಸ್ತಾನ ಬೋಟ್ ಹೊತ್ತು ತಂದ​ ಈ ಹೆರಾಯಿನ್​​ನ್ನು ಗುಜರಾತ್​ ಕರಾವಳಿಯಲ್ಲಿ ಇಳಿಸಿ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಪಂಜಾಬ್​ಗೆ ಸಾಗಿಸುವ ಉದ್ದೇಶ ಇತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗುಜರಾತ್​ ಎಟಿಎಸ್​ ಮತ್ತು ಕರಾವಳಿ ರಕ್ಷಕ ಪಡೆಗಳು ಕಚ್​ ಜಿಲ್ಲೆಯ ಜಖೌ ಬಂದರಿನ ಸಮೀಪ ಸಾಗರದ ಮಧ್ಯೆಯೇ ಬೋಟ್​​ನ್ನು ಜಪ್ತಿ ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಮಾದಕ ವಸ್ತುಗಳ ಜಪ್ತಿ ಕಾರ್ಯಾಚರಣೆ ಚುರುಕಾಗಿ ನಡೆಯುತ್ತಿದೆ. ಗುಜರಾತ್​ ಕರಾವಳಿ ತೀರದಲ್ಲಿ ಈ ಹಿಂದೆಯೂ ಹಲವು ಬಾರಿ ಡ್ರಗ್ಸ್​​ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ದೆಹಲಿ ಪೊಲೀಸರು ಉತ್ತರ ಪ್ರದೇಶದ ಲಖನೌನ ಗೋದಾಮಿನಲ್ಲಿ 606 ಬ್ಯಾಗ್​​ಗಳಲ್ಲಿ ಇದ್ದ 312.5 ಕೆಜಿ ಮೆಥಾಂಫೆಟಮೈನ್, ಸುಮಾರು 10 ಕೆಜಿ ಹೆರಾಯಿನ್​ ವಶಪಡಿಸಿಕೊಂಡಿದ್ದರು. ಇವುಗಳ ಬೆಲೆ 1200 ಕೋಟಿ ರೂಪಾಯಿ. ಈ ಕೇಸ್​​ನಲ್ಲಿ ಅಫ್ಘಾನಿಸ್ತಾನದ ಇಬ್ಬರು ಪ್ರಜೆಗಳನ್ನು ಅರೆಸ್ಟ್ ಮಾಡಿದ್ದರು.

ಇದನ್ನೂ ಓದಿ: Video: ಗೃಹ ಸಚಿವ ಅಮಿತ್‌ ಶಾ ಎದುರೇ 30 ಸಾವಿರ ಕೆಜಿ ಮಾದಕ ದ್ರವ್ಯ ಸುಟ್ಟುಹಾಕಿದ ಎನ್‌ಸಿಬಿ

Exit mobile version