ರಾಂಚಿ: ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಬಸ್ವೊಂದು ನದಿಗೆ ಬಿದ್ದು ಆರು ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಸ್ನಲ್ಲಿ ಸುಮಾರು 50 ಮಂದಿ ಪ್ರಯಾಣ ಮಾಡುತ್ತಿದ್ದರು.
ಇದು ರಾಂಚಿಯ ಬಸ್ ಆಗಿದ್ದು ಗಿರಿದಿಹ್ ಜಿಲ್ಲೆಯಿಂದ ವಾಪಸ್ ರಾಂಚಿಗೆ ಬರುತ್ತಿತ್ತು. ಮಾರ್ಗ ಮಧ್ಯೆ ಸಿವಾನ್ನೆ ನದಿ ಸೇತುವೆ
ತತಿಜಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿವಾನ್ನೆ ನದಿ ಸೇತುವೆಗೆ ಹಾಕಿದ್ದ ಕಂಬಿ ತಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಂಬಿ ಮುರಿದು ಬಸ್ ನದಿಗೆ ಬಿದ್ದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಚೋಥೆ ತಿಳಿಸಿದ್ದಾರೆ. ನದಿಗೆ ಬಿದ್ದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆದಿದೆ. ಆರು ಮೃತದೇಹಗಳು ಸಿಕ್ಕಿದ್ದು, ಹಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ನೋವು ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್, ‘ತತಿಜಾರಿಯಾದ ಸಿವಾನ್ನೆ ನದಿಗೆ ಬಸ್ ಬಿದ್ದು ಆರು ಮಂದಿ ಮೃತಪಟ್ಟಿದ್ದು ಕೇಳಿ ನೋವಾಯಿತು. ಸ್ಥಳೀಯ ಜಿಲ್ಲಾಡಳಿತದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲಿಂದ ವರದಿ ತರಿಸಿಕೊಂಡಿದ್ದೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: BMTC Accident | ಕಂಡಕ್ಟರ್ ಅವಾಂತರದಿಂದ ಬಿಎಂಟಿಸಿ ಬಸ್ ಅಪಘಾತ!