ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಆಂಬುಲೆನ್ಸ್‌ಗೆ ಕ್ಯಾಂಟರ್ ಡಿಕ್ಕಿಯಾಗಿ (Bareilly Accident) 7 ಮಂದಿ ಮೃತಪಟ್ಟಿದ್ದಾರೆ. ಈ ಆಂಬುಲೆನ್ಸ್ ಬರೇಲಿಯ ರಾಮಮೂರ್ತಿ ಆಸ್ಪತ್ರೆಗೆ ಸೇರಿದ್ದಾಗಿತ್ತು. ದೆಹಲಿಯಿಂದ ಬರೇಲಿಗೆ ವಾಪಸ್ ಬರುತ್ತಿತ್ತು. ಫತೇಹ್‌ಗಂಜ್ ವೆಸ್ಟ್ ಝೋನ್ ಬಳಿಯ ರಾಷ್ಟ್ರೀಯ ಹೆದ್ದಾರಿಯ ಸಂಖಾ ಸೇತುವೆ ಬಳಿ ಭೀಕರ ಅಪಘಾತ ನಡೆದಿದೆ. ಆಂಬುಲೆನ್ಸ್‌ನಲ್ಲಿ ಇದ್ದ ಆರು ಮಂದಿ ಪಿಲಿಭಿತ್ ನಿವಾಸಿಗಳಾಗಿದ್ದು, ಆರೋಗ್ಯ ತಪಾಸಣೆಗಾಗಿ ದೆಹಲಿ ಆಸ್ಪತ್ರೆಗೆ ಹೋಗಿದ್ದರು. ಅವರೆಲ್ಲ ಅಲ್ಲಿಂದ ಆಂಬುಲೆನ್ಸ್‌ನಲ್ಲಿ ವಾಪಸ್ ಬರುತ್ತಿದ್ದರು. ಆಂಬುಲೆನ್ಸ್ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅದಾದ ಬಳಿಕ ಕ್ಯಾಂಟರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಆಂಬುಲೆನ್ಸ್ ಚಾಲಕ ಸೇರಿ ಎಲ್ಲ ಏಳೂ ಜನರು ಸಾವನ್ನಪ್ಪಿದ್ದಾರೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ದುಃಖ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಕಾರ್ಯಾಲಯದ ಟ್ವಿಟರ್ ಅಕೌಂಟ್‌ನಿಂದ ಟ್ವೀಟ್ ಮಾಡಲಾಗಿದ್ದು, ಆಂಬುಲೆನ್ಸ್ ಮತ್ತು ಕ್ಯಾಂಟರ್ ಡಿಕ್ಕಿಯಲ್ಲಿ ಏಳು ಮಂದಿ ಮೃತಪಟ್ಟಿದ್ದಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ರಾಯ್‌ಬರೇಲಿಯಲ್ಲಿ ದಲಿತ ಹುಡುಗನ ಮೇಲೆ ದೌರ್ಜನ್ಯ!