Site icon Vistara News

ರಾಜೌರಿ, ಬಾರಾಮುಲ್ಲಾದಲ್ಲಿ ಎನ್​ಕೌಂಟರ್​, ಇಬ್ಬರು ಉಗ್ರರ ಹತ್ಯೆ; ಜಮ್ಮುವಿಗೆ ಇಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಭೇಟಿ

1 terrorist Killed in Rajouri Encounter

#image_title

ರಾಜೌರಿಯಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆ(Rajouri Encounter) ಮುಂದುವರಿದಿದ್ದು, ಒಬ್ಬ ಉಗ್ರ ಹತ್ಯೆಗೀಡಾಗಿದ್ದಾನೆ. ಇನ್ನೊಬ್ಬಾತ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ. ರಾಜೌರಿಯ ಕಂಡಿ ಅರಣ್ಯ ಪ್ರದೇಶದಲ್ಲಿ ಅಡಗಿರುವ ಉಗ್ರರರನ್ನು ಸೆರೆ ಹಿಡಿಯಲು, ಕಳೆದ ಮೂರು ದಿನಗಳಿಂದ ಅಲ್ಲಿ ಭಾರತೀಯ ಸೇನೆ ಮತ್ತು ಸಿಆರ್​ಪಿಎಫ್​ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮೇ 5ರಂದು ಅಲ್ಲಿ ಉಗ್ರರ ದಾಳಿಗೆ ಐವರು ಯೋಧರು ಹತರಾಗಿದ್ದರು. ಕಂಡಿ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಸ್ಥಳವನ್ನು ಭದ್ರತಾ ಪಡೆಗಳು ಸಂಪೂರ್ಣವಾಗಿ ಸುತ್ತುವರಿದಿದ್ದರು. ಶುಕ್ರವಾರ ತಡರಾತ್ರಿ 1.15ರ ಹೊತ್ತಿಗೆ ಭಯೋತ್ಪಾದಕರು ಆ ಪ್ರದೇಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಭದ್ರತಾ ಪಡೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಆಗ ಒಬ್ಬ ಉಗ್ರ ಹತ್ಯೆಯಾಗಿದ್ದಾನೆ ಎನ್ನಲಾಗಿದೆ. ಸದ್ಯ ರಾಜೌರಿಯಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಹಾಗೇ, ಬಾರಾಮುಲ್ಲಾದಲ್ಲಿ ಕೂಡ ಉಗ್ರರ ವಿರುದ್ಧ ಎನ್​ಕೌಂಟರ್ ನಡೆಯುತ್ತಿದ್ದು, ಅದರಲ್ಲಿಯೂ ಒಬ್ಬ ಉಗ್ರನನ್ನು ಕೊಲ್ಲಲಾಗಿದೆ.

ಎನ್​ಕೌಂಟರ್​ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ವಕ್ತಾರ ಲೆಫ್ಟಿನೆಂಟ್​ ದೇವೇಂದರ್​ ಆನಂದ್​​, ‘ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಇನ್ನೊಬ್ಬ ಉಗ್ರ ಗಾಯಗೊಂಡಿದ್ದಾನೆ’ ಎಂದು ಹೇಳಿದ್ದಾರೆ. ರಾಜೌರಿಯಲ್ಲಿ ಹೀಗೆ ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ ಉಗ್ರರ ವಿರುದ್ಧ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಉದ್ವಿಗ್ನ ಸ್ಥಿತಿ ಎದುರಾಗಿದೆ. ಇಂದು ಅಲ್ಲಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲನೆ ಮಾಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Rajouri Encounter: ರಾಜೌರಿಯಲ್ಲಿ ಉಗ್ರರ ದಾಳಿಗೆ ಮೃತಪಟ್ಟ ಯೋಧರ ಸಂಖ್ಯೆ 5ಕ್ಕೆ ಏರಿಕೆ

Exit mobile version