Site icon Vistara News

10 ನಕ್ಸಲರನ್ನು ಬಂಧಿಸಿ, ದೊಡ್ಡಮಟ್ಟದ ಸ್ಫೋಟ ತಪ್ಪಿಸಿದ ತೆಲಂಗಾಣ ಪೊಲೀಸ್​​

10 Naxals Arrested in Chhattisgarh Telangana border

#image_title

ನಕ್ಸಲರ ವಿರುದ್ಧ ತೀವ್ರಗತಿಯ ಕಾರ್ಯಾಚರಣೆ ಪ್ರಾರಂಭಿಸಿರುವ ಭದ್ರತಾ ಪಡೆಗಳು ಸೋಮವಾರ ಛತ್ತೀಸ್​ಗಢ-ತೆಲಂಗಾಣ ಗಡಿಯ ಬಳಿ 10 ಮಂದಿ ಮಾವೋವಾದಿಗಳನ್ನು ಬಂಧಿಸಿದ್ದಾರೆ (Naxalites Arrested). ಅವರಿಂದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಛತ್ತೀಸ್​ಗಢ್​​ನಲ್ಲಿ ನಡೆಯಬಹುದಾಗಿದ್ದ ಒಂದು ದೊಡ್ಡಮಟ್ಟದ ಸ್ಫೋಟವನ್ನು ಅವರು ತಪ್ಪಿಸಿದ್ದಾರೆ.

ತೆಲಂಗಾಣದ ಭದ್ರಾದ್ರಿ ಕೊಟ್ಟಗುಡಮ್​ ಪೊಲೀಸರು ಕಾರ್ಯಾಚರಣೆ ನಡೆಸಿ, 10 ಮಾವೋವಾದಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ 10 ಮಂದಿಯಲ್ಲಿ ಐವರು ಬಿಜಾಪುರ ಜಿಲ್ಲೆಯವರು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ಮಾವೋವಾದಿಗಳ ಬಳಿ ಒಂದು ಟ್ರಕ್​ಗಷ್ಟು ಕಾರ್ಡೆಕ್ಸ್ ವೈರ್​ಗಳು, 500ಡಿಟೋನೇಟರ್‌ಗಳು ಇದ್ದವು. ಅವುಗಳನ್ನೆಲ್ಲ ವಶಪಡಿಸಿಕೊಂಡಿದ್ದೇವೆ. ನಕ್ಸಲರು ಹಲವು ಕಡೆಗಳಲ್ಲಿ ಸ್ಫೋಟ ಮಾಡಲು ಯೋಜನೆ ರೂಪಿಸಿದ್ದರು. ಈ ಸ್ಪೋಟಕಗಳನ್ನು ಅಂಥ ಸ್ಥಳಗಳಿಗೆ ಕೊಂಡೊಯ್ಯಲು ಸಂಚು ಮಾಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಡಿ ಪ್ರದೇಶಗಳಲ್ಲಿ ನಕ್ಸಲರು ಇದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು, ಮುಲಕಲಪಲ್ಲಿ ಮತ್ತು ದುಮ್ಮುಗುಡೆಂ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು. ಕೊಟ್ಟಗುಡಂ ಮತ್ತು ದಮ್ಮುಗುಡೆಂ ಪೊಲೀಸರು ಜಂಟಿಯಾಗಿ ನಕ್ಸಲರ ಬಂಧನಕ್ಕೆ ತೆರಳಿದ್ದರು. ಅವರೊಂದಿಗೆ ಸಿಆರ್​ಪಿಎಫ್​ 141ರ ಸಿಬ್ಬಂದಿಯೂ ಇದ್ದರು. ಬಂಧಿತರಾದ ನಕ್ಸಲರನ್ನು ಸಮ್ಮಯ್ಯ (36), ಅರೆಪಲ್ಲಿ ಶ್ರೀಕಾಂತ್ (23), ಮೇಕಲ ರಾಜು (36), ರಮೇಶ್ ಕುಂ (28), ಸಲ್ಲಪಲ್ಲಿ (25), ಮುಚ್ಚಕಿ ರಮೇಶ್ (32), ಸುರೇಶ್ (25), ಲಾಲು (22), ಸೋಧಿ ಮಹೇಶ್ (20), ಮತ್ತು ಮಾವಡಿ ಚೈತು (21) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Video: ಛತ್ತೀಸ್​ಗಢ ನಕ್ಸಲ್​ ದಾಳಿ ಕ್ಷಣದ ವಿಡಿಯೊ ವೈರಲ್; ವಾಹನದ ಕೆಳಗೆ ಅಡಗಿದ್ದ ಪೊಲೀಸ್​​ ಸಿಬ್ಬಂದಿಯಿಂದ ಚಿತ್ರೀಕರಣ

ಇವರು ಎರಡನೇ ಹಂತದ ನಕ್ಸಲ್​ಗಳಾಗಿದ್ದು, ಇವರು ಕಟ್ಟಾ ಮಾವೋವಾದಿಗಳಿಗೆ ಸ್ಫೋಟಕ ಪೂರೈಸುವ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಅವರು ಪೊಲೀಸರ ಎದುರು ಹೇಳಿಕೊಂಡಿದ್ದಾರೆ. ವಿವಿಧ ಕಡೆಗಳಲ್ಲಿ ಸ್ಫೋಟ ಉಂಟು ಮಾಡಲು, ಗನ್​ಪೌಡರ್​ ಮತ್ತಿತರ ಉಪಕರಣಗಳನ್ನು ಒದಗಿಸುವಂತೆ ನಮ್ಮ ನಾಯಕರು ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಛತ್ತೀಸ್​ಗಢ್​​ನಲ್ಲಿ ಏಪ್ರಿಲ್​ 26ರಂದು ನಕ್ಸಲರು ದೊಡ್ಡಮಟ್ಟದ ದಾಳಿ ನಡೆಸಿದ್ದರು. ದಂತೇವಾಡದ ಅರನ್​ಪುರ ಎಂಬಲ್ಲಿ ಐಇಡಿ ಸ್ಫೋಟಿಸಿ, 11 ಸೈನಿಕರ ಪ್ರಾಣ ತೆಗೆದಿದ್ದರು. ಈ ದಾಳಿ ಬೆನ್ನಲ್ಲೇ ಅವರ ವಿರುದ್ಧ ಕಾರ್ಯಾಚರಣೆ ಚುರುಕುಗೊಂಡಿದೆ.

Exit mobile version