Site icon Vistara News

ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳಲು ’ಫ್ರೀ’ ದಾರಿ ಹಿಡಿದ ಸಿಎಂ ಗೆಹ್ಲೋಟ್​; ಸ್ವಲ್ಪ ಮಟ್ಟಿಗೆ ನಿರಾಳರಾದ ಜನ

Ashok Gehlot

Law for OPS, cow dung at ₹2/kg among Ashok Gehlot's 5 guarantees In Rajasthan

ಕರ್ನಾಟಕದಲ್ಲೂ ನೆಲಕಚ್ಚಿದ್ದ ಕಾಂಗ್ರೆಸ್​​ನ್ನು ಈ ಸಲ ಅಭೂತಪೂರ್ವವಾಗಿ ಗೆಲ್ಲಿಸಿಕೊಡುವಲ್ಲಿ ದೊಡ್ಡ ಪಾತ್ರ ವಹಿಸಿದ್ದು ಅದರ ಐದು ಗ್ಯಾರಂಟಿಗಳು, ’ಉಚಿತ’ ಭರವಸೆಗಳು (Congress Guarantee) ಎಂದೇ ಹೇಳಲಾಗುತ್ತಿದೆ. ಹೀಗೆ ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷ ಉಚಿತ ವಿದ್ಯುತ್​, ಮನೆಯೊಡತಿಗೆ 2000 ರೂ., 10 ಕೆಜಿ ಉಚಿತ ಅಕ್ಕಿ ಮತ್ತಿತರ ಭರವಸೆಗಳನ್ನು ಕೊಟ್ಟು ಗೆದ್ದ ಬೆನ್ನಲ್ಲೇ, ಅತ್ತ ರಾಜಸ್ಥಾನದಲ್ಲೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಇಂಥದ್ದೇ ಪ್ರಯೋಗಕ್ಕೆ ಮುಂದಾದಂತೆ ತೋರುತ್ತಿದೆ.

ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​, ರಾಜಸ್ಥಾನದಲ್ಲಿ 100ಯುನಿಟ್​ ವಿದ್ಯುತ್​ ಉಚಿತ ಎಂದು ಘೋಷಿಸಿದ್ದಾರೆ. ಇದೇ ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಸಿದ್ಧತೆಯನ್ನು ಅವರು ಈಗಿನಿಂದಲೇ ಪ್ರಾರಂಭ ಮಾಡಿದ್ದಾರೆ. ‘ರಾಜಸ್ಥಾನಗಳಲ್ಲಿ ಆಯೋಜಿಸಲಾಗಿದ್ದ ಹಣದುಬ್ಬರ ಪರಿಹಾರ ಶಿಬಿರಗಳಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಅಭಿಪ್ರಾಯಗಳು, ಶಿಬಿರಗಳಿಂದ ಬಂದ ವರದಿಗಳನ್ನು ಪರಿಶೀಲಿಸಿದ್ದೇವೆ. ವಿದ್ಯುತ್ ಬಿಲ್​​ನಲ್ಲಿ ಸ್ಲ್ಯಾಬ್​ ಆಧಾರಿತ ಕಡಿತವಾಗಬೇಕು ಎಂಬ ಫೀಡ್​ಬ್ಯಾಕ್​ ಬಂದಿದೆ. ಅದರೊಂದಿಗೆ ಮೇ ತಿಂಗಳ ವಿದ್ಯುತ್​ ಬಿಲ್​ಗೆ ಸಂಬಂಧಪಟ್ಟು ಇಂಧನ ಹೆಚ್ಚುವರಿ ಶುಲ್ಕದ ಬಗ್ಗೆಯೂ ಸಾರ್ವಜನಿಕರಿಂದ ಅಭಿಪ್ರಾಯ ಕೇಳಲಾಗಿತ್ತು. ಅವರು ನೀಡಿದ ಅಭಿಪ್ರಾಯಗಳನ್ನಾಧರಿಸಿ ಇಂಥ ದೊಡ್ಡ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರಚಾರ ನಿಷೇಧಿಸಿ; ಚುನಾವಣಾ ಆಯೋಗಕ್ಕೆ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ಆಗ್ರಹ

‘ಇನ್ನು ಮುಂದೆ ರಾಜಸ್ಥಾನದಲ್ಲಿ 100 ಯೂನಿಟ್ ವಿದ್ಯುತ್​ ಉಚಿತವಾಗಿರುತ್ತದೆ. ತಿಂಗಳಿಗೆ ಕೇವಲ 100 ಯೂನಿಟ್​ ಮಾತ್ರ ವಿದ್ಯುತ್​ ಬಳಕೆ ಮಾಡುವವರು ಬಿಲ್ ತುಂಬಬೇಕಿಲ್ಲ. ಅದಕ್ಕಿಂತ ಹೆಚ್ಚಾದವರಿಗೂ ಕೂಡ 100 ಯೂನಿಟ್​ವರೆಗೆ ಶುಲ್ಕವಿರುವುದಿಲ್ಲ. ಅದರಾಚೆ ಎಷ್ಟು ಯೂನಿಟ್ ಬಳಕೆ ಮಾಡುತ್ತಾರೋ, ಅಷ್ಟಕ್ಕೇ ಬಿಲ್ ಪಾವತಿಸಿದರೆ ಸಾಕು’ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಹಾಗೇ, ರಾಜಸ್ಥಾನದಲ್ಲಿ 200ಯೂನಿಟ್​ವರೆಗಿನ ವಿದ್ಯುತ್ ಬಿಲ್​ಗಳ ಮೇಲಿನ ಇಂಧನ ಹೆಚ್ಚುವರಿ ಶುಲ್ಕ ಮತ್ತು ಶಾಶ್ವತ ಶುಲ್ಕಗಳನ್ನು ಸಂಪೂರ್ಣ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

Exit mobile version