Site icon Vistara News

Narendra Modi | ಮೋದಿ ಸ್ವೀಕರಿಸಿದ 1,200 ಉಡುಗೊರೆ ಸೆ.17ರಿಂದ ಹರಾಜು, ಹಣ ಯಾವುದಕ್ಕೆ ಬಳಕೆ?

PV Sindhu

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗಣ್ಯರಿಂದ ಸ್ವೀಕರಿಸಿದ ಸುಮಾರು ೧,೨೦೦ ಉಡುಗೊರೆಗಳನ್ನು ಅವರ ಜನ್ಮದಿನವಾದ ಸೆಪ್ಟೆಂಬರ್‌ ೧೭ರಿಂದ ಹರಾಜು ಹಾಕಲಾಗುತ್ತದೆ. ಅಕ್ಟೋಬರ್‌ ೨ರವರೆಗೆ ಹರಾಜು ನಡೆಯಲಿದ್ದು, ಇದರಿಂದ ಬರುವ ಹಣವನ್ನು “ನಮಾಮಿ ಗಂಗೆ” ಯೋಜನೆಗೆ ವಿನಿಯೋಗಿಸಲಾಗುತ್ತದೆ.

ದೆಹಲಿಯಲ್ಲಿರುವ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ನಲ್ಲಿ ಉಡುಗೊರೆಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ. ಹಾಗೆಯೇ, pmmementos.gov.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೂ ಹರಾಜಿನಲ್ಲಿ ಭಾಗವಹಿಸಿ, ಇಷ್ಟದ ವಸ್ತುಗಳನ್ನು ಖರೀದಿಸಬಹುದಾಗಿದೆ. ಒಂದು ಉತ್ಪನ್ನಕ್ಕೆ ಕನಿಷ್ಠ ೧೦೦ ರೂ.ನಿಂದ ಗರಿಷ್ಠ ೧೦ ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ನೀಡಿರುವ ರಾಣಿ ಕಮಲಾಪತಿ ಅವರ ಮೂರ್ತಿ, ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್‌ ನೀಡಿರುವ ಹನುಮಾನ್‌ ವಿಗ್ರಹ, ಪೇಂಟಿಂಗ್‌, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ನೀಡಿರುವ ಕೊಲ್ಹಾಪುರ ಮಹಾಲಕ್ಷ್ಮೀ ಪ್ರತಿಮೆ ಸೇರಿ ಹಲವು ವಸ್ತುಗಳು ಹರಾಜಿನಲ್ಲಿರಲಿವೆ. ಇದುವರೆಗೆ ನರೇಂದ್ರ ಮೋದಿ ಅವರು ಸ್ವೀಕರಿಸಿದ ಉಡುಗೊರೆಗಳ ಹರಾಜಿನಿಂದ ಸಂಗ್ರಹವಾದ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಲಾಗಿದೆ.

ಇದನ್ನೂ ಓದಿ | ನನ್ನ ಅಮ್ಮ ಎಷ್ಟು ಅಸಾಧಾರಣಳೋ, ಅಷ್ಟೇ ಸರಳ… ತಾಯಿಯ ನೂರನೇ ಜನ್ಮದಿನ ನೂರೆಂಟು ನೆನಪು ಹರವಿಟ್ಟ ಪ್ರಧಾನಿ ಮೋದಿ

Exit mobile version