Site icon Vistara News

Chinese Nationals | ಉತ್ತರ ಪ್ರದೇಶದಲ್ಲಿ ಚೀನಾದ 15 ನಾಗರಿಕರ ಬಂಧನ, ಕಾರಣ ಏನು?

China

ಲಖನೌ: ಉತ್ತರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಆನ್‌ಲೈನ್‌ ಮೂಲಕ ಸುಮಾರು ೫೦೦ ಕೋಟಿ ರೂ. ವಂಚಿಸಿದ ಗ್ಯಾಂಗ್‌ ಹಿಂದೆ ಚೀನಾದವರ ಕೈವಾಡ ಇರುವುದು ಪತ್ತೆಯಾದ ಬೆನ್ನಲ್ಲೇ ಲಖನೌನಲ್ಲಿ ಚೀನಾದ ೧೫ ಮಂದಿಯನ್ನು (Chinese Nationals) ಬಂಧಿಸಲಾಗಿದೆ. ಸಮರ್ಪಕವಾದ ವೀಸಾ ಹೊಂದಿರದ ಕಾರಣ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಇವರನ್ನು ಬಂಧಿಸಲಾಗಿದೆ.

“ಪರಿಶೀಲನೆ ಅಭಿಯಾನದ ಭಾಗವಾಗಿ ತಪಾಸಣೆ ನಡೆಸಿದಾಗ ಚೀನಾದ ೧೫ ನಾಗರಿಕರು ಗೌತಮ ಬುದ್ಧ ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಗೊತ್ತಾಗಿದೆ. ಸ್ಥಳೀಯ ಗುಪ್ತಚರ ವಿಭಾಗದ ಅಧಿಕಾರಿಗಳು ಚೀನಾದ ನಾಗರಿಕರನ್ನು ಬಂಧಿಸಲಾಗಿದ್ದು, ಅವರನ್ನು ದಿಲ್ಲಿಯಲ್ಲಿರುವ ದಿಗ್ಬಂಧನ ಕೇಂದ್ರಕ್ಕೆ (Detention Centre) ಕಳುಹಿಸಲಾಗಿದೆ. ಇದಾದ ಬಳಿಕ ಚೀನಿಯರನ್ನು ಅವರ ದೇಶಕ್ಕೆ ಕಳುಹಿಸಲಾಗುತ್ತದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ಜೂನ್‌ನಲ್ಲಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಅಕ್ರಮವಾಗಿ ನೆಲೆಸಿರುವ ಇಬ್ಬರು ಚೀನಿಯರನ್ನು ಬಂಧಿಸಲಾಗಿತ್ತು. ಇದಾದ ನಂತರ ಅಕ್ರಮವಾಗಿ ನೆಲೆಸಿರುವವರ ಪತ್ತೆಗೆ ಅಭಿಯಾನ ಕೈಗೊಳ್ಳಲಾಗಿದೆ. ಜೂನ್‌ನಿಂದ ಇದುವರೆಗೆ ಚೀನಾದ ೪೫ ನಾಗರಿಕರನ್ನು ಬಂಧಿಸಲಾಗಿದೆ. ವೀಸಾ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ೨೦೧೯ರಿಂದ ೨೦೨೧ರ ಅವಧಿಯಲ್ಲಿ ಕಮ್ಯುನಿಸ್ಟ್‌ ರಾಷ್ಟ್ರದ ೧೧೭ ಜನರನ್ನು ಅವರ ದೇಶಕ್ಕೆ ಕಳುಹಿಸಲಾಗಿದೆ ಎಂದು ಇತ್ತೀಚೆಗೆ ಕೇಂದ್ರ ಸರಕಾರವು ಸಂಸತ್ತಿಗೆ ತಿಳಿಸಿದೆ.

ಇದನ್ನೂ ಓದಿ | Loan App Fraud | 100 ಲೋನ್‌ ಅಪ್ಲಿಕೇಷನ್‌ ಬಳಸಿ 500 ಕೋಟಿ ರೂ. ವಂಚನೆ, ಕರ್ನಾಟಕದಲ್ಲೂ ಇತ್ತು ಈ ಜಾಲ!

Exit mobile version