Site icon Vistara News

ಉಮೇಶ್ ಪಾಲ್​ ಹತ್ಯೆ ಆರೋಪಿ ಆತಿಕ್​ ಅಹ್ಮದ್ ಕುಟುಂಬದ ವಿರುದ್ಧ 160 ಎಫ್​ಐಆರ್​; ಸುಪ್ರೀಂಕೋರ್ಟ್ ಮೊರೆ ಹೋದ ಗ್ಯಾಂಗ್​ಸ್ಟರ್​

Atiq Ahmed Murder Case: Lawyer presents secret letter to SC written weeks before killing

Atiq Ahmed Murder Case: Lawyer presents secret letter to SC written weeks before killing

ಲಖನೌ: 2005ರಲ್ಲಿ ನಡೆದಿದ್ದ ಬಹುಜನ ಸಮಾಜ ಪಾರ್ಟಿ ಶಾಸಕ ರಾಜು ಪಾಲ್​ ಹತ್ಯೆ ಕೇಸ್​​ನ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್​ ಹತ್ಯೆಯ ಬೆನ್ನಲ್ಲೇ, ಗ್ಯಾಂಗ್​ಸ್ಟರ್​, ಮಾಜಿ ರಾಜಕಾರಣಿ ಅತೀಕ್ ಅಹ್ಮದ್​ ಮತ್ತು ಆತನ ಬೆಂಬಲಿಗರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ರಾಜುಪಾಲ್​ ಹತ್ಯೆ ಕೇಸ್​ನಲ್ಲೇ ಆತೀಕ್​ ಮತ್ತು ಆತನ ತಮ್ಮ ಅಶ್ರಾಫ್​ ಇಬ್ಬರೂ ಜೈಲುಪಾಲಾಗಿದ್ದಾರೆ. ಆದರೆ ಉಮೇಶ್ ಪಾಲ್​ ಪ್ರಮುಖ ಸಾಕ್ಷಿಯಾಗಿದ್ದರಿಂದ ಇವರ ಬೆಂಬಲಿಗರೇ ಹತ್ಯೆ ಮಾಡಿದ್ದಾರೆಂದು ಹೇಳಲಾಗಿದೆ.

ಉಮೇಶ್ ಪಾಲ್ ಹಂತಕ ಅರ್ಬಾಜ್​ ಖಾನ್​​ನನ್ನು ಈಗಾಗಲೇ ಯುಪಿ ಪೊಲೀಸರು ಎನ್​ಕೌಂಟರ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆತಿಕ್​ ಸಂಬಂಧಿಕರ ಮನೆಯನ್ನು ಜೆಸಿಬಿ ಮೂಲಕ ಧ್ವಂಸ ಮಾಡಲಾಗಿದೆ. ಅಷ್ಟೇ ಅಲ್ಲ ಆತಿಕ್​ ಅಹ್ಮದ್​ ಇಡೀ ಕುಟುಂಬದ ಮೇಲೆ ಪೊಲೀಸ್ ಕಣ್ಗಾವಲು ಇದೆ. ಆತನ ಪತ್ನಿ ಶೈಷ್ಟಾ, ಸೋದರ ಅಶ್ರಾಫ್​ (ಈಗಾಗಲೇ ಜೈಲಿನಲ್ಲಿದ್ದಾನೆ), ಅವರ ಪುತ್ರರು ಎಲ್ಲರ ಹೆಸರೂ ಎಫ್​ಐಆರ್​ನಲ್ಲಿದೆ. ಒಟ್ಟಾರೆ ಈ ಕುಟುಂಬದ ವಿರುದ್ಧ ಒಟ್ಟು 160 ಎಫ್​ಐಆರ್​ಗಳು ದಾಖಲಾಗಿದ್ದಾಗಿ ವರದಿಯಾಗಿದೆ.

ಇದನ್ನೂ ಓದಿ: Prayagraj Encounter: ಉತ್ತರ ಪ್ರದೇಶದಲ್ಲಿ ಉಮೇಶ್‌ ಪಾಲ್‌ ಹತ್ಯೆ ಆರೋಪಿ ಅರ್ಬಾಜ್‌ ಖಾನ್‌ ಎನ್‌ಕೌಂಟರ್‌

ಈಗಾಗಲೇ ಗುಜರಾತ್​​ನ ಸಬರಮತಿ ಜೈಲಿನಲ್ಲಿರುವ ಆತಿಕ್​ ವಿರುದ್ಧ 100 ಕೇಸ್​ಗಳು ದಾಖಲಾಗಿವೆ. ಆತನ ತಮ್ಮ ಅಶ್ರಾಫ್​ ವಿರುದ್ಧ 52 ಕೇಸ್​ಗಳು, ಆತಿಕ್ ಪತ್ನಿ ವಿರುದ್ಧ ಮೂರು, ಪುತ್ರರಾದ ಅಲಿ ವಿರುದ್ಧ ನಾಲ್ಕು ಮತ್ತು ಉಮರ್​ ಅಹ್ಮದ್​ ವಿರುದ್ಧ ಒಂದು ಕೇಸ್​ ದಾಖಲಾಗಿದೆ. ಈ ಮಧ್ಯೆ ಆತಿಕ್​ ಅಹ್ಮದ್​ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ. ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಸುಳ್ಳು ಕೇಸ್ ದಾಖಲಾಗಿದೆ. ಉತ್ತರ ಪ್ರದೇಶ ಪೊಲೀಸರು ನಮ್ಮನ್ನು ಎನ್​ಕೌಂಟರ್ ಮಾಡುವ ಸಾಧ್ಯತೆಯೂ ಇದ್ದು, ರಕ್ಷಣೆ ಬೇಕು ಎಂದು ಮನವಿ ಮಾಡಿದ್ದಾರೆ.

Exit mobile version