ಹೈದರಾಬಾದ್: ಇತ್ತೀಚೆಗೆ ಹೈದರಾಬಾದ್‌ನಲ್ಲಿ 17 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪೂರ್ವ ನಿಯೋಜಿತ ಕೃತ್ಯ ಎಂಬುದು ಹೈದರಾಬಾದ್ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ 17 ವರ್ಷದ ಬಾಲಕಿ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸ್ನೇಹಿತನ ಜತೆ ಹೊರಗೆ ಹೋಗಿದ್ದ ಬಾಲಕಿ ವಾಪಾಸ್ ಮನೆಗೆ ತೆರಳಬೇಕಾದರೆ ಪರಿಚಿತ ಯುವಕರ ಬಳಿ ಮನೆವರೆಗೂ ಬಿಡುವಂತೆ ಕೇಳಿಕೊಂಡಿದ್ದಳು. ಈ ವೇಳೆ ಯುವಕರು ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ. ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಚಾರ ಮಾಡಿದ್ದರು. ಈ ಪ್ರಕರಣ ಹೈದರಾಬಾದ್‌ನಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಪೊಲೀಸರು ಕೂಡ ಪ್ರಕರಣವನ್ನು ದಾಖಲಿಸಿಕೊಂಡು ಈಗಾಗಲೇ ಬಾಲ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನು ಓದಿ | ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹುಡುಗಿ ಚಿತ್ರ, ವಿಡಿಯೊ ವೈರಲ್ ಮಾಡಿದ ಬಿಜೆಪಿ ಶಾಸಕನ ಮೇಲೆ ಕೇಸ್
ತನಿಖೆಯ ವೇಳೆಯಲ್ಲಿ ಈ ಅತ್ಯಾಚಾರ ಪೂರ್ವ ನಿಯೋಜಿತ ಎಂದು ಗೊತ್ತಾಗಿದೆ. ಅಲ್ಲದೆ ಅತ್ಯಾಚಾರ ಮಾಡಿದವರಲ್ಲಿ ನಾಲ್ವರು ಅಪ್ರಾಪ್ತ ವಯಸ್ಸಿನವರು ಮತ್ತು ಒಬ್ಬ ವಯಸ್ಕ ಸೇರಿದಂತೆ ಐವರು ಆರೋಪಿಗಳಿದ್ದು, ಇವರೆಲ್ಲರೂ ಕಾಂಡೋಮ್ ಬಳಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಬಂಧಿತ ಐವರನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.