Site icon Vistara News

ಅಪ್ಪ ಬೈದಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ಮಗಳು; ಆಕೆ ಟೆರೇಸ್​ ಮೇಲಿಂದ ಬಿದ್ದಿದ್ದು ಗೊತ್ತಾಗಿದ್ದೇ ಮರುದಿನ!

19 Year old Girl Suicide

#image_title

ಪುಣೆ: ‘ಓದೋದನ್ನು ಬಿಟ್ಟು, ಸದಾ ಫೋನ್​​ನಲ್ಲಿಯೇ ಇರುತ್ತೀಯಾ’ ಎಂದು ಅಪ್ಪ ಬೈದಿದ್ದಕ್ಕೆ ಮನನೊಂದ 19 ವರ್ಷದ ಯುವತಿ ತನ್ನ ಮನೆಯ ಟೆರೇಸ್​ನಿಂದ ಕೆಳಗೆ ಹಾರಿ ಮೃತಪಟ್ಟ ಘಟನೆ ಮುಂಬಯಿಯ ಪುಣೆಯಲ್ಲಿ ನಡೆದಿದೆ. ಅಪ್ಪನ ನಿಂದನೆಯ ಮಾತುಗಳನ್ನು ಕೇಳಿ ನೊಂದಿದ್ದ ಯುವತಿ ತಡರಾತ್ರಿ ಮನೆ ಟೆರೇಸ್​ನಿಂದ ಹಾರಿದ್ದಾಳೆ. ಆದರೆ ಮುಂಜಾನೆ ಆಕೆ ಕಾಣಿಸಿದ್ದಾಳೆ. ರಕ್ತದ ಮಡುವಲ್ಲಿ ಇದ್ದವಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಾಗಲೇ ಅವಳ ಜೀವ ಹೋಗಿತ್ತು.

ಘೋಡೆಗಾಂವ್ ಪೊಲೀಸರು ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸದ್ಯ ಅವಳ ದೇಹವನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿದೆ. ಅಂದಹಾಗೇ, ಯುವತಿ 12ನೇ ತರಗತಿಯಲ್ಲಿ ಓದುತ್ತಿದ್ದಳು. ಅಪ್ಪ ಉದ್ಯಮಿ ಮತ್ತು ಆಕೆಯ ತಾಯಿ ಗೃಹಿಣಿ. ಇವಳೊಬ್ಬಳೇ ಮಗಳಾಗಿದ್ದಳು. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Motivational story : ಮುಂಬಯಿಯಲ್ಲಿದ್ದ ಮಗ ಅಪ್ಪನ ಬಳಿ ಆಸರೆ ಕೇಳಿದ್ದು ಯಾರಿಗಾಗಿ?

ಕೆಲ ದಿನಗಳ ಹಿಂದೆ ಮುಂಬಯಿಯ ಮಲಾಡ್​​​ನಲ್ಲಿರುವ ಮಾಲ್ವಾನಿ ಏರಿಯಾದಲ್ಲಿ ಹುಡುಗಿಯೊಬ್ಬಳು ತಾನು ವಾಸವಿರುವ ಕಟ್ಟಡದ ಏಳನೇ ಅಂತಸ್ತಿಗೆ ಹೋಗಿ ಅಲ್ಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆ ಮುನ್ನಾದಿನವಷ್ಟೇ ಮೊಬೈಲ್ ನೋಡುತ್ತಿದ್ದಾಗ ಅಪ್ಪ-ಅಮ್ಮ ಬೈದಿದ್ದರು. ಆಕೆಯ ಕೈಯಿಂದ ಮೊಬೈಲ್​​ನ್ನು ಕಿತ್ತುಕೊಂಡಿದ್ದರು. ಅದರಿಂದ ಹುಡುಗಿ ತೀವ್ರವಾಗಿ ನೊಂದಿದ್ದಳು ಎಂದು ಹೇಳಿದ್ದರು.

Exit mobile version