ನವದೆಹಲಿ: ಕೇಂದ್ರ ಸರ್ಕಾರವು ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲಿಟ್ಟಿದೆ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದರು.
ಸದನದಲ್ಲಿ ಪ್ರಶ್ನೋತ್ತರ ವೇಳೆ ಪ್ರಸ್ತಾಪಿಸಿದ ಸಚಿವರು, SIGHT ಯೋಜನೆಯಡಿಯಲ್ಲಿ ಹಸಿರು ಜಲಜನಕ ಮಿಷನ್‌ಗೆ ಉತ್ತೇಜನ ನೀಡಲಾಗಿದೆ ಎಂದ ಅವರು, ಭಾರತದಲ್ಲಿ ನಾವು ಹಸಿರು ಉದ್ಯೋಗ ವಲಯಕ್ಕಾಗಿ ಬೃಹತ್ ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ. ಹಸಿರು ಜಲಜನಕ, ಎಲೆಕ್ಟ್ರಿಕ್ ವಾಹನಗಳಂತಹ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Paris Olympics: ಕಂಚಿನ ಪದಕ ಗೆದ್ದ ರೈಲ್ವೆ ಟಿಕೆಟ್ ಕಲೆಕ್ಟರ್ ಸ್ವಪ್ನಿಲ್ ಕುಸಾಲೆ
ದೇಶದಲ್ಲಿ ಹಸಿರು ಜಲಜನಕದ ಉತ್ಪಾದನೆಗೆ ಪ್ರೋತ್ಸಾಹಿಸುವ ಜತೆಗೆ ರಫ್ತಿಗೂ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ನಿರ್ಮಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದ ಭಾರತದಲ್ಲಿ ತಂತ್ರಜ್ಞಾನದ ಅನುಷ್ಠಾನ ಪ್ರಪಂಚಕ್ಕೆ ಹೋಲಿಸಿದರೆ ಯಾವಾಗಲೂ ಬಹಳ ವಿಳಂಬವಾಗಿಯೇ ಇದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಸಿರು ಜಲಜನಕವನ್ನು ಬಳಸುವ ಮುನ್ನವೇ ಭಾರತದಲ್ಲಿ ಈಗ ಹಸಿರು ಜಲಜನಕದ ಬಳಕೆಗೆ ನಾಂದಿ ಹಾಡಲಾಗುತ್ತಿದೆ. ಇದರ ಶ್ರೇಯಸ್ಸು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.