ಪೂಂಚ್: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಆಕಸ್ಮಿಕವಾಗಿ ಜುಲೈ 17ರಂದು ಗ್ರೆನೇಡ್ ಸ್ಫೋಟವಾಗಿ (Accidental Grenade Blast), ಇಬ್ಬರು ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ. ಅದರಲ್ಲಿ ಒಬ್ಬರು ಭಾರತೀಯ ಸೇನೆ ಕ್ಯಾಪ್ಟನ್ ಮತ್ತು ಇನ್ನೊಬ್ಬರು ಜ್ಯೂನಿಯರ್ ಕಮಿಷನ್ಡ್ ಆಫಿಸರ್ (JCO-ಕಿರಿಯ ನಿಯೋಜಿತ ಅಧಿಕಾರಿ) ಎಂದು ಹೇಳಲಾಗಿದೆ. ಮೃತರ ಹೆಸರು ಆನಂದ್ ಮತ್ತು ನಾಯಬ್ ಸುಬೇದಾರ್ ಭಗವಾನ್ ಸಿಂಗ್. ಇವರಲ್ಲಿ ಆನಂದ್ ಸೇನಾ ಕ್ಯಾಪ್ಟನ್ ಆಗಿದ್ದರೆ, ಭಗವಾನ್ ಸಿಂಗ್ ಕಿರಿಯ ನಿಯೋಜಿತ ಅಧಿಕಾರಿ. ಇವರಿಬ್ಬರೂ ಪೂಂಚ್‌ನ ಮೇಂಧಾರ್ ವಲಯದಲ್ಲಿ ಗಸ್ತುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇವರು ಯಾವುದೇ ಉಗ್ರ ದಾಳಿಯಲ್ಲಿ ಮೃತಪಟ್ಟಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಜುಲೈ 17ರಂದು ರಾತ್ರಿ ಮೇಂಧಾರ್ ವಲಯದಲ್ಲಿ ಕ್ಯಾಪ್ಟನ್ ಆನಂದ್ ಮತ್ತು ಜೆಸಿಒ ಭಗವಾನ್ ಸಿಂಗ್ ಕರ್ತವ್ಯದಲ್ಲಿದ್ದರು. ಅಲ್ಲಿಯೇ ಇದ್ದ ಗಣಿಯೊಂದರಲ್ಲಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಹೆಲಿಕಾಪ್ಟರ್ ಮೂಲಕ ಉಧಾಂಪುರಕ್ಕೆ ಕರೆದೊಯ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ. ಹಾಗೇ, ಮೃತಪಟ್ಟ ಇಬ್ಬರಿಗೂ ಸಂತಾಪ ಸೂಚಿಸಿದೆ.
ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ 21 ವರ್ಷ ಸೇವೆ ಸಲ್ಲಿಸಿ ವಾಪಸಾದ ಯೋಧನಿಗೆ ಅದ್ಧೂರಿ ಸ್ವಾಗತ