Site icon Vistara News

Durga Idol | ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹ ಒಡೆದ ಬುರ್ಖಾಧಾರಿ ಮಹಿಳೆಯರು

Durg

ಹೈದರಾಬಾದ್‌: ನವರಾತ್ರಿ ಹಿನ್ನೆಲೆಯಲ್ಲಿ ದೇಶಾದ್ಯಂತ ದುರ್ಗಾಮಾತೆಯ ಆರಾಧನೆ ಮಾಡಲಾಗುತ್ತಿದೆ. ಹಳ್ಳಿ, ಪಟ್ಟಣ, ನಗರಗಳು ಎನ್ನದೆ ಪೆಂಡಾಲ್‌ ಹಾಕಿ, ದುರ್ಗಾದೇವಿಯ ಮೂರ್ತಿಗಳನ್ನು (Durga Idol) ಪ್ರತಿಷ್ಠಾಪಿಸಲಾಗಿದೆ. ಆದರೆ, ಹೈದರಾಬಾದ್‌ನಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ದುರ್ಗಾ ಮಾತೆ ಇರುವ ಪೆಂಡಾಲಿಗೆ ನುಗ್ಗಿ, ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ.

ಖೈರಾತಬಾದ್‌ ಪ್ರದೇಶದಲ್ಲಿ ಈ ಇಬ್ಬರು ಮಹಿಳೆಯರು ದುರ್ಗಾಮಾತೆಯ ಪೆಂಡಾಲ್‌ ಪ್ರವೇಶಿಸಿ, ಏಕಾಏಕಿ ದುರ್ಗಾಮಾತೆಯ ಮೂರ್ತಿ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಮೂರ್ತಿಯ ಹಲವು ಭಾಗಗಳು ವಿರೂಪಗೊಂಡಿವೆ. ಮಹಿಳೆಯರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯರು ಪೆಂಡಾಲ್‌ ಪ್ರವೇಶಿಸಿದ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ.

ಇದನ್ನೂ ಓದಿ | ಪಂಜಾಬ್​ ಭಟಿಂಡಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು

Exit mobile version