Site icon Vistara News

Tripura Rath Yatra: ಜಗನ್ನಾಥ ರಥಯಾತ್ರೆ ದುರಂತ; ಪ್ರಧಾನಿ ಮೋದಿಯಿಂದ 2 ಲಕ್ಷ ರೂ.ಪರಿಹಾರ

Tripura Ulta Rath Yatra

ತ್ರಿಪುರಾದ ಕುಮಾರಘಾಟ್​​ನಲ್ಲಿ ಜಗನ್ನಾಥ ರಥಯಾತ್ರೆ (Tripura Rath Yatra tragedy) ವೇಳೆ ಬೆಂಕಿ ಬಿದ್ದು ಮೃತಪಟ್ಟ ಏಳು ಮಂದಿಯ ಕುಟುಂಬಕ್ಕೆ ಪ್ರಧಾನಿ ಮೋದಿಯವರು ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹಾಗೇ ಗಾಯಗೊಂಡ 16 ಜನರ ಚಿಕಿತ್ಸೆಗಾಗಿ ತಲಾ 50 ಸಾವಿರ ರೂ. ನೆರವು ನೀಡುವುದಾಗಿ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ (PM Modi) ‘ಕುಮಾರ್​​​ಘಾಟ್​​ ರಥ ಯಾತ್ರೆ (Tripura Ulta Rath Yatra)ಯಲ್ಲಿ ನಡೆದ ದುರಂತದಿಂದ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಗೊಂಡವರು ಬೇಗ ಗುಣಮುಖರಾಗಲಿ. ಗಾಯಾಳುಗಳಿಗೆ ಎಲ್ಲ ರೀತಿಯ ನೆರವು ನೀಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ’ ಎಂದಿದ್ದಾರೆ.

ಒಡಿಶಾದ ಪುರಿಯಲ್ಲಿ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ಈ ಬಾರಿ ಜೂ.20ರಂದು ಪ್ರಾರಂಭವಾಗಿ ಜೂ.28ರಂದು ಮುಕ್ತಾಯಗೊಂಡಿದೆ. ಒಡಿಶಾದಲ್ಲಿ ಜಗನ್ನಾಥ ರಥಯಾತ್ರೆ ಉತ್ಸವ ಶುರುವಾದ ದಿನವೇ ಕೋಲ್ಕತ್ತ, ಅಹ್ಮದಾಬಾದ್​, ಕುಮಾರ್​ಘಾಟ್​ ಸೇರಿ ದೇಶದಲ್ಲಿ ಜಗನ್ನಾಥ ದೇಗುಲ ಇರುವ ಕಡೆಗಳಲ್ಲೆಲ್ಲ ರಥಯಾತ್ರೆ ಪ್ರಾರಂಭವಾಗಿತ್ತು. ಹಾಗೇ, ಅಲ್ಲೆಲ್ಲ ಕಡೆಯೂ ನಿನ್ನೆ (ಜೂ.28) ಮುಕ್ತಾಯದ ದಿನವಾಗಿದ್ದು, ದೇವತೆಗಳೆಲ್ಲ ವಾಪಸ್​ ಮನೆಗೆ ಹೋಗುವ ಅದ್ಧೂರಿ ರಥಯಾತ್ರೆ ನಡೆದಿದೆ. ಆದರೆ ತ್ರಿಪುರಾದ ಕುಮಾರ್​ಘಾಟ್​​ನಲ್ಲಿ ಈ ದುರಂತ ನಡೆದಿದೆ.

ಇದನ್ನೂ ಓದಿ: Jagannath Rath Yatra: ಜಗನ್ನಾಥ ರಥಯಾತ್ರೆಯಲ್ಲಿ ಬೆಂಕಿ; 7 ಮಂದಿ ದುರ್ಮರಣ

ಕಬ್ಬಿಣದ ರಥಕ್ಕೆ ಸರ್ವಾಲಂಕಾರ ಮಾಡಲಾಗಿತ್ತು. ದೇವತೆಗಳ ಉತ್ಸವ ಮೂರ್ತಿ ಅದರ ಮೇಲಿತ್ತು. ಆದರೆ ರಥದ ಮೇಲ್ಭಾಗ ವಿದ್ಯುತ್​ ಹೈಟೆನ್ಷನ್​ ತಂತಿಗೆ ತಗುಲಿದ ಪರಿಣಾಮ ರಥಕ್ಕೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಇಬ್ಬರು ಮಕ್ಕಳು ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದಂತೆ 16 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಬಹುತೇಕ ಎಲ್ಲರ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ. ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version