Site icon Vistara News

2020 Delhi riots: ಪೊಲೀಸ್‌ಗೆ ಗನ್ ತೋರಿಸಿದ್ದ ಆರೋಪಿ ಶಾರುಕ್ ಜಾಮೀನು ಅರ್ಜಿ ವಜಾ

2020 Delhi riots, Court rejects bail plea of Shahrukh Pathan

ನವದೆಹಲಿ: 2020ರ ದಿಲ್ಲಿ ದಂಗೆ ವೇಳೆ ದಿಲ್ಲಿ ಪೊಲೀಸ್‌ ತಲೆಗೆ ಗನ್ ಇಟ್ಟಿದ್ದ ಆರೋಪಿ ಶಾರುಕ್ ಪಠಾಣ್‌ನ ಜಾಮೀನು ಅರ್ಜಿಯನ್ನು ದಿಲ್ಲಿಯ ಹೆಚ್ಚುವರಿ ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ. ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಪಠಾಣ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದರು. ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿಗಳನ್ನು ಪರೀಕ್ಷಿಸಿದ ನಂತರ ಅರ್ಜಿಯನ್ನು ಪರಿಗಣಿಸದಿರಲು ನಿರ್ಧರಿಸಿದರು(2020 Delhi riots).

ಈ ನ್ಯಾಯಾಲಯವು ಅರ್ಜಿದಾರರಿಗೆ ಅಥವಾ ಆರೋಪಿಗೆ ಜಾಮೀನು ನೀಡಲು ಯಾವುದೇ ಕಾರಣವನ್ನು ಕಾಣುವುದಿಲ್ಲ. ಅದರಂತೆ, ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಆರೋಪಿ ಪಠಾಣ್ ಜಾಮೀನು ಅರ್ಜಿಯನ್ನು ಈ ಹಿಂದೆಯೂ ಪ್ರಸ್ತುತ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ಎರಡೂ ವಜಾಗೊಳಿಸಿದೆ. ನ್ಯಾಯಾಲಯವು ಆತನ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಗಲಭೆ ಮತ್ತು ಕೊಲೆ ಯತ್ನ ಸೇರಿದಂತೆ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿವೆ.

ಇದನ್ನೂ ಓದಿ: Delhi Riots | ಶಾರ್ಜೀಲ್ ಜಾಮೀನು ವಿಚಾರಣೆ ಮುಂದೂಡಿಕೆ, ಖಾಲಿದ್ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 2020ರಲ್ಲಿ ಸಿಎಎ ವಿರೋಧಿಸಿ ಭಾರೀ ಪ್ರತಿಭಟನೆಯನ್ನು ಕೈಗೊಳ್ಳಲಾಗಿತ್ತು. ಈ ವೇಳೆ, ಹಿಂಸಾಚಾರ ಸಂಭವಿಸಿ ಸಾಕಷ್ಟು ನಷ್ಟವಾಗಿತ್ತು. ಪ್ರತಿಭಟನೆಯು ಹಿಂದೂ ಮತ್ತು ಮುಸ್ಲಿಮ್ ನಡುವಿನ ಗಲಾಟೆಗೆ ಕಾರಣವಾಗಿತ್ತು. ಈ ವೇಳೆ ದಾಳಿಗೆ ಕಾರಣರಾದ ಅನೇಕರ ದಿಲ್ಲಿ ಪೊಲೀಸರು ಬಂಧಿಸಿದ್ದು, ಈಗಲೂ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

Exit mobile version