ಭುವನೇಶ್ವರ: ಮಹಿಳಾ ಪೊಲೀಸ್ ಅಧಿಕಾರಿಗೇ ಕಿರುಕುಳ ನೀಡಿದ ಮೂವರು ಟ್ಯಾಕ್ಸಿ ಚಾಲಕರನ್ನು ಒಡಿಶಾದ (Odisha) ಭುವನೇಶ್ವರ ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಮಹಿಳಾ ಪೊಲೀಸ್ ಅಧಿಕಾರಿ ಕರ್ತವ್ಯ ಮುಗಿಸಿಕೊಂಡು, ರಾತ್ರಿ ತಮ್ಮ ಕಾರಿನಲ್ಲಿ ವಾಪಸ್ ಆಗುತ್ತಿದ್ದರು. ಆಗ ಆರೋಪಿತ ಚಾಲಕರು ಮಹಿಳಾ ಪೊಲೀಸ್ ಅಧಿಕಾರಿ ಬೆನ್ನಟ್ಟಿ, ಬೈದು ಕಿರುಕುಳ ನೀಡಿದ್ದಾರೆ. ಅಲ್ಲದೇ, ಖಡ್ಗ ರೀತಿಯ ಆಯುಧಗಳಿಂದ ಹೆದರಿಸಿದ್ದಾರೆ.
ಆರೋಪಿಗಳನ್ನು ಭುವನೇಶ್ವರ ನಗರದ ವಿವಿಧ ಸ್ಥಳಗಳಿಂದ ಅರೆಸ್ಟ್ ಮಾಡಲಾಗಿದೆ ಎಂದು ಭುವನೇಶ್ವರ ಡಿಸಿಪಿ ಪ್ರತೀಕ್ ಸಿಂಗ್ ಅವರು ಹೇಳಿದ್ದಾರೆ. ಸಬ್ ಇನ್ಸ್ಪೆಕ್ಟರ್ ಶುಭಶ್ರೀ ನಾಯಕ್ ಅವರು ಭುವನೇಶ್ವರದ ಮಹಿಳಾ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಎರಡು ದಿನದ ಹಿಂದೆ ಡ್ಯೂಟಿ ಮುಗಿಸಿಕೊಂಡು ಹೋಗುವಾಗ, ಅವರ ಕಾರನ್ನ ಬೆನ್ನಟ್ಟಿದ ಎಸ್ವಿಯಲ್ಲಿ ಆರೋಪಿಗಳು ಬೈದಿದ್ದಾರೆ. ಕಿರುಕುಳ ನೀಡಿದ್ದಾರೆ.
ಮಹಿಳಾ ಅಧಿಕಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದು, ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳು ಚಾಲಕ ವೃತ್ತಿಯಲ್ಲಿದ್ದಾರೆಂದು ಎಂದು ಗೊತ್ತಾಗಿದೆ.
ಇದನ್ನೂ ಓದಿ | ಅಂಗಡಿಗೆ ತೆರಳಿದ್ದ ಮಹಿಳೆಗೆ ಯುವಕನಿಂದ ಲೈಂಗಿಕ ಕಿರುಕುಳ: ಹಿಂದೂ ಮುಖಂಡರಿಂದ ರಕ್ತಪಾತದ ಎಚ್ಚರಿಕೆ