ಔರಂಗಾಬಾದ್: ಸಿಲಿಂಡರ್ ಸ್ಫೋಟದಿಂದ ಎರಡು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು ಏಳು ಪೊಲೀಸರೂ ಸೇರಿ, 30 ಮಂದಿ ಗಾಯಗೊಂಡ ಘಟನೆ ಬಿಹಾರದ ಔರಂಗಾಬಾದ್ನಲ್ಲಿ ನಡೆದಿದೆ. ಅದರಲ್ಲೂ ಹತ್ತು ಮಂದಿಯ ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ಛಾತ್ ಪೂಜೆ ಸಂಭ್ರಮ ಅತಿದೊಡ್ಡ ದುರಂತದಲ್ಲಿ ಕೊನೆಗೊಂಡಿದೆ.
ಈ ಕಟ್ಟಡ ಬಿಹಾರದ ಔರಂಗಾಬಾದ್ನ ಅತ್ಯಂತ ಕಿರಿದಾದ ಬೀದಿಗಳಲ್ಲಿ ಒಂದಾದ ಓಡಿಯಾ ಗಾಲಿಯಲ್ಲಿ ಇದೆ. ಈ ಮನೆಯಲ್ಲಿ ಮಹಿಳೆಯರು ಛಾತ್ ಪೂಜೆ ನಿಮಿತ್ತ ಮುಂಜಾನೆಯೇ ಎದ್ದು, ವಿವಿಧ ಕಜ್ಜಾಯ, ತಿನಿಸುಗಳು, ಪ್ರಸಾದ, ಅಡುಗೆ ತಯಾರಿಯಲ್ಲಿ ತೊಡಗಿದ್ದರು. ಅದೇ ವೇಳೆ ಮನೆಯ ಸಿಲಿಂಡರ್ ಪೈಪ್ ಸ್ಫೋಟವಾಗಿದೆ. ಶಾರ್ಟ್ಸರ್ಕ್ಯೂಟ್ ಆಗಿದ್ದೇ ಈ ದುರಂತಕ್ಕೆ ಕಾರಣ. ಕಟ್ಟಡದ ಬೆಂಕಿಯ ಪರಿಣಾಮ ಅಕ್ಕಪಕ್ಕದ ಮನೆ, ಕಟ್ಟಗಳಿಗೂ ವ್ಯಾಪಿಸಿ ಅನೇಕರು ಗಾಯಗೊಂಡಿದ್ದಾರೆ. ಇಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಬಂದ ಪೊಲೀಸರೂ ಏಳು ಜನರಿಗೆ ಗಾಯವಾಗಿದೆ. ಅಗ್ನಿಶಾಮಕ ದಳದ ನೆರವನಿಂದ ಬೆಂಕಿ ನಂದಿಸಲಾಗಿದೆ. ಗಾಯಗೊಂಡ ಎಲ್ಲರಿಗೂ ಸ್ಥಳೀಯ ಸರ್ದಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ಬೆಂಕಿ, ನವ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ