Site icon Vistara News

Cheetah Dies: ದಕ್ಷಿಣ ಆಫ್ರಿಕಾದಿಂದ ಕುನೊಕ್ಕೆ ತಂದಿದ್ದ ಚೀತಾಗಳ ಮಧ್ಯೆ ಕಾಳಗ; ಹೆಣ್ಣು ಚೀತಾ ದಕ್ಷಾ ಸಾವು

Fourth big cat brought from Namibia dies in Madhya Pradesh's Kuno National Park

Fourth big cat brought from Namibia dies in Madhya Pradesh's Kuno National Park

ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದ್ದ ಇನ್ನೊಂದು ಚೀತಾ ಮರಣಹೊಂದಿದೆ (Cheetah Dies). ಕಳೆದ ಮೂರು ತಿಂಗಳಲ್ಲಿ ಮೃತಪಟ್ಟ ಮೂರನೇ ಚೀತಾ ಇದಾಗಿದೆ. ಮಾರ್ಚ್​ ತಿಂಗಳಲ್ಲಿ ಸಾಶಾ ಎಂಬ ಚೀತಾ ಕಿಡ್ನಿ ಸೋಂಕಿನಿಂದ ಮೃತಪಟ್ಟಿತ್ತು. ಅದಾದ ಮೇಲೆ ಏಪ್ರಿಲ್​ನಲ್ಲಿ ಉದಯ್​ ಎಂಬ ಚೀತಾ ಮರಣಹೊಂದಿತ್ತು. ಇದೀಗ ಇನ್ನೊಂದು ಚೀತಾ ಮೃತಪಟ್ಟಿದೆ.

ಇದೀಗ ಮೃತಪಟ್ಟಿದ್ದು ದಕ್ಷಾ ಎಂಬ ಹೆಣ್ಣು ಚೀತಾ. ಇದು ಯಾವುದೇ ಅನಾರೋಗ್ಯದಿಂದಾಗಲೀ, ವಾತಾವರಣದ ಕಾರಣಕ್ಕಾಗಲೀ ಮೃತಪಟ್ಟಿದ್ದಲ್ಲ. ದಕ್ಷಾ ಚೀತಾ ಮತ್ತು ಇನ್ನಿತರ ಗಂಡು ಚೀತಾಗಳ ನಡುವೆ ಕಾದಾಟವಾಗಿತ್ತು. ಈ ದಕ್ಷಾ ಒಬ್ಬಳೇ ಹೋಗಿ ಗಂಡು ಚೀತಾಳೊಂದಿಗೆ ಜಗಳವಾಡಿದ್ದಳು. ಚೀತಾಗಳ ಮಧ್ಯದ ಜಗಳ ಎಷ್ಟು ಹಿಂಸಾತ್ಮಕವಾಗಿತ್ತು ಎಂದರೆ ಈ ಕಾಳಗದಲ್ಲಿ ದಕ್ಷಾ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದೆ.

ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ. ಭಾರತದಲ್ಲಿ ಹೋಗಿರುವ ಚೀತಾ ಸಂತತಿಯನ್ನು ಪುನರುಜ್ಜೀವನ ಗೊಳಿಸುವ ಸಲುವಾಗಿ ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕರೆತರಲಾಗುತ್ತಿದೆ. ಮೊದಲ ಹಂತದಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿತ್ತು. ಎರಡನೇ ಹಂತದಲ್ಲಿ 12 ತರಲಾಗಿತ್ತು. ಈ ಚೀತಾಗಳನ್ನು ಹಂತಹಂತವಾಗಿ ವಿಶಾಲವಾದ ಕಾಡಿಗೆ ಬಿಡಲಾಗುತ್ತಿದೆ. ಅಂದರೆ ರಾಷ್ಟ್ರೀಯ ಉದ್ಯಾನವನದಲ್ಲಿ, ಸುತ್ತಲೂ ಬೇಲಿಯಿದ್ದ ಜಾಗದಲ್ಲಿ ಸದ್ಯ ಅವುಗಳನ್ನು ಇರಿಸಲಾಗಿತ್ತು, ನಂತರ ಬೇಲಿಯಾಚೆಗಿನ ವಿಶಾಲ ಕಾಡಿಗೆ ಬಿಡಲಾಗುತ್ತದೆ. ಈಗಾಗಲೇ ನಾಲ್ಕು ಚೀತಾಗಳನ್ನು ಹಾಗೆ ಕಾಡಿಗೆ ಬಿಡಲಾಗಿದ್ದು, ಮಾನ್ಸೂನ್​ ಒಳಗೆ ಇನ್ನೂ ಐದು ಚೀತಾಗಳನ್ನು ಬಿಡುವುದಾಗಿ ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: Cheetah Dies: ದಕ್ಷಿಣ ಆಫ್ರಿಕಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತಂದಿದ್ದ ಮತ್ತೊಂದು ಚೀತಾ ಸಾವು

ಮುಂಬರುವ ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನಷ್ಟು ಚೀತಾಗಳನ್ನು ಮಧ್ಯಪ್ರದೇಶಕ್ಕೆ ತರುವ ಯೋಜನೆ ಇದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಆದರೂ ಇಲ್ಲಿಗೆ ಬಂದ ಚೀತಾಗಳು ಸಾವನ್ನಪ್ಪುವುದು ಆತಂಕ ತಂದೊಡ್ಡಿದೆ. ಮಾರ್ಚ್​ ತಿಂಗಳಲ್ಲಿ ಸಾಶಾ ಕಿಡ್ನಿ ಸೋಂಕಿಗೆ ಒಳಗಾಗಿ, ಅದರಿಂದಲೇ ಮೃತಪಟ್ಟಿತ್ತು. ಜನವರಿಯಿಂದಲೇ ಅದಕ್ಕೆ ಅನಾರೋಗ್ಯ ಕಾಡುತ್ತಿತ್ತು. ಅದಾದ ಮೇಲೆ ಏಪ್ರಿಲ್​ನಲ್ಲಿ ಉದಯ್ ಚೀತಾ ಕೂಡ ಅಸ್ವಸ್ಥಗೊಂಡಿತ್ತು. ಎಷ್ಟೇ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿರಲಿಲ್ಲ.

Exit mobile version