Site icon Vistara News

ಕಾಶ್ಮೀರದಲ್ಲಿ ಭರ್ಜರಿ ಬೇಟೆ; ಒಳನುಸುಳುತ್ತಿದ್ದ ನಾಲ್ವರು ಭಯೋತ್ಪಾದಕರ ಹತ್ಯೆ

Security Force

#image_title

ಜಮ್ಮು-ಕಾಶ್ಮೀರ ಕುಪ್ವಾರಾ ಜಿಲ್ಲೆ (Kupwara Encounter)ಯಲ್ಲಿ ಭಾರತೀಯ ಸೇನೆ ಯೋಧರು ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ. ಪಾಕ್​ ಆಕ್ರಮಿತ ಕಾಶ್ಮೀರ (POK)ದಿಂದ ಭಾರತಕ್ಕೆ ನುಸುಳಲು ಪ್ರಯತ್ನ ಪಟ್ಟ ನಾಲ್ವರು ಭಯೋತ್ಪಾದಕರನ್ನು ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಹೊಡೆದುರುಳಿಸಿದ್ದಾರೆ (Terrorists Killed). ಈ ಮೂಲಕ ವಾರದಲ್ಲಿ ಎರಡನೇ ಬಾರಿ ಉಗ್ರರ ಒಳನುಸುಳುವಿಕೆಯನ್ನು ತಡೆದಿದ್ದಾರೆ. ಕುಪ್ವಾರಾದ ಮಚ್ಚಲ್ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತದ ಭಾಗಕ್ಕೆ ಬರಲು ಯತ್ನಿಸುತ್ತಿದ್ದರು. ಇದೇ ವೇಳೆ ಭಾರತೀಯ ರಕ್ಷಣಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.

ಕಳೆದ ವಾರವೂ ಕೂಡ ಕುಪ್ವಾರಾ ಜಿಲ್ಲೆಯಲ್ಲಿಯೇ ಎನ್​ಕೌಂಟರ್​ ನಡೆದಿತ್ತು. ಅಲ್ಲಿನ ಗಡಿ ನಿಯಂತ್ರಣ ರೇಖೆ ಬಳಿಯೇ ಇರುವ ಜುಮಗುಂಡ್ ಎಂಬಲ್ಲಿ ಐವರು ಭಯೋತ್ಪಾದಕರನ್ನು ಭದ್ರತಾ ಪಡೆ ಸಿಬ್ಬಂದಿ ಕೊಂದಿದ್ದರು. ಅದಕ್ಕೂ ಮುನ್ನ ದೋಬನಾರ್ ಮಚ್ಚಲ್ ಎಂಬ ಪ್ರದೇಶದಲ್ಲಿ, ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳಲು ಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ರಕ್ಷಣಾ ಸಿಬ್ಬಂದಿ ಕೊಂದು ಹಾಕಿದ್ದರು. ಮೃತ ಉಗ್ರರಿಂದ ಎಕೆ 47, 48 ಮದ್ದುಗುಂಡುಗಳು, 4 ಹ್ಯಾಂಡ್ ಗ್ರೆನೇಡ್​ಗಳು, 1 ಪೌಚ್​, ಸಿಗರೇಟ್​ ಪ್ಯಾಕೆಟ್​ಗಳು, ತಿಂಡಿಗಳನ್ನು ಅವರು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಇಬ್ಬರು ಲಷ್ಕರೆ ಉಗ್ರರ ಹತ್ಯೆ, ಮುಂದುವರಿದ ಎನ್‌ಕೌಂಟರ್

Exit mobile version