ಶ್ರೀನಗರ: ಪೂಂಚ್ನಲ್ಲಿ ಇಂದು ನಾಲ್ವರು ಭಯೋತ್ಪಾದಕರನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ (Terrorists Killed). ಸೋಮವಾರ ಮಧ್ಯರಾತ್ರಿಯಿಂದಲೂ ಪೂಂಚ್ನ ಸುರಾ್ಕೋಟೆ ಬೆಲ್ಟ್ನಲ್ಲಿರುವ ಸಿಂಧಾರಾ ಗುಡ್ಡ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು (Terrorists Killed In Poonch). ಮಂಗಳವಾರ ಮುಂಜಾನೆ 5ಗಂಟೆ ಹೊತ್ತಿಗೆ ನಾಲ್ವರು ಉಗ್ರರ ಹತ್ಯೆಯಾಗಿದೆ.
ಸೋಮವಾರ ರಾತ್ರಿ 11.30ರಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ಶುರುವಾಯಿತು. ಆ ಪ್ರದೇಶದಲ್ಲಿ ಅಳವಡಿಸಿದ್ದ ಕಣ್ಗಾವಲು ಡ್ರೋನ್ ಮತ್ತು ಇತರ ಉಪಕರಣಗಳಿಂದ ಉಗ್ರರ ಚಲನವಲನ ಗೊತ್ತಾಯಿತು. ಕೂಡಲೇ ರಕ್ಷಣಾ ಸಿಬ್ಬಂದಿ ಕಾರ್ಯಪ್ರವೃತ್ತರಾದರು ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ‘ಕತ್ತಲಲ್ಲಿ ಉಗ್ರರು ವಿಪರೀತ ಗುಂಡು ಹಾರಿಸುತ್ತಿದ್ದರು. ಭಾರತೀಯ ಸೇನೆಯ ಸ್ಪೆಶಲ್ ಫೋರ್ಸ್, ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದೂ ಸೇನೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Terrorists Killed: ಬಾರಾಮುಲ್ಲಾದಲ್ಲಿ ಇಬ್ಬರು ಲಷ್ಕರೆ ತೊಯ್ಬಾ ಉಗ್ರರ ಹತ್ಯೆ; ಶಸ್ತ್ರಾಸ್ತ್ರ ವಶ
ಪೂಂಚ್ನಲ್ಲಿ ನಿನ್ನೆಯಷ್ಟೇ ಇಬ್ಬರು ಉಗ್ರರ ಹತ್ಯೆಯಾಗಿತ್ತು. ಇಲ್ಲಿನ ಎಲ್ಒಸಿ (ಗಡಿ ನಿಯಂತ್ರಣ ರೇಖೆ)ಬಳಿ ಒಳ ನುಸುಳುತ್ತಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಕೊಂದು ಹಾಕಿತ್ತು. ಉಗ್ರರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇನ್ನಷ್ಟು ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪುಂಚ್ನ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ಮುಂದುವರಿದಿತ್ತು. ಕಳೆದ ವಾರ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತಕ್ಕೆ ನುಸುಳುತ್ತಿದ್ದ ಉಗ್ರನೊಬ್ಬನ ಹತ್ಯೆ ಮಾಡಲಾಗಿತ್ತು.