ಅಸ್ಸಾಂನಲ್ಲಿ ಕ್ರೈಸ್ತ ಮತಕ್ಕೆ ಮತಾಂತರವಾಗಿದ್ದು ಹಿಂದುಗಳು ಮತ್ತೆ ತಮ್ಮ ಮಾತೃಧರ್ಮಕ್ಕೆ ವಾಪಸಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಸುಮಾರು 250 ಮಂದಿ, ಕ್ರೈಸ್ತ ಮತದಿಂದ ಹಿಂದು ಧರ್ಮಕ್ಕೆ ವಾಪಸ್ ಬಂದಿದ್ದರು. ಈಗ ಮತ್ತೆ 43 ಜನರು ತಾವು ಸೇರಿದ್ದ ಕ್ರಿಶ್ಚಿಯನ್ ಧರ್ಮ ತೊರೆದು, ತಮ್ಮ ಮೂಲ ಧರ್ಮಕ್ಕೆ ಆಗಮಿಸಿದ್ದಾರೆ. ತಿವಾ ಬುಡಕಟ್ಟು ಜನಾಂಗದ 11 ಕುಟುಂಬಗಳ 43 ಮಂದಿ ವಾಪಸ್ ಹಿಂದು ಧರ್ಮಕ್ಕೆ ಬಂದಿದ್ದು, ಅವರ ಘರ್ ವಾಪ್ಸಿ
ಕಾರ್ಯಕ್ರಮವನ್ನು ಗೋಬಾ ದೇವರಾಜ ರಾಜ್ ಪರಿಷತ್ನಿಂದ ಜಾಗಿರೋಡ್ ಎಂಬಲ್ಲಿ ಆಯೋಜಿಸಲಾಗಿತ್ತು.
ತಿವಾ ಜನಾಂಗದವರು ಕ್ರೈಸ್ತ ಧರ್ಮದಿಂದ, ಹಿಂದು ಧರ್ಮ ಸೇರ್ಪಡೆಗೊಳ್ಳುವ ಕಾರ್ಯಕ್ರಮ ಆಯೋಜಿಸಿದ್ದ ಗೋಬಾ ದೇವರಾಜ ರಾಜ್ ಪರಿಷತ್ ಸದಸ್ಯ ಜರ್ಸಿಂಗ್ ಬೊರ್ಡೊಲೊಯ್, ‘ಅಸ್ಸಾಂನಲ್ಲಿ ಹಿಂದು ಧರ್ಮ ತೊರೆದು, ಕ್ರೈಸ್ತ ಧರ್ಮಕ್ಕೆ ಸೇರಿದ್ದವರನ್ನು ವಾಪಸ್ ಮೂಲ ಧರ್ಮಕ್ಕೆ ಕರೆತರುವ ಅಭಿಯಾನವನ್ನು ನಾವು ಈಗಾಗಲೇ ಶುರು ಮಾಡಿದ್ದೇವೆ. ಕಾಮ್ರುಪ್ನಲ್ಲಿರುವ ಎರಡು ಹಳ್ಳಿಗಳ ನಿವಾಸಿಗಳು ಸಂಪೂರ್ಣವಾಗಿ ವಾಪಸ್ ಹಿಂದು ಧರ್ಮಕ್ಕೆ ಬಂದಿದ್ದಾರೆ. ಇಂದು ತಿವಾ ಭಾಷಾ ಸಂಸ್ಕೃತಿ ಅರು ಉದ್ಯೋಗ ಪರ್ವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಇದನ್ನೂ ಓದಿ: Ghar Wapsi : ಅಸ್ಸಾಂನಲ್ಲಿ 35 ಕುಟುಂಬಗಳ 250 ಮಂದಿ ಘರ್ ವಾಪ್ಸಿ, ಕ್ರೈಸ್ತ ಧರ್ಮದಿಂದ ಸನಾತನ ಧರ್ಮಕ್ಕೆ
ತಿವಾ ಜನಾಂಗದ 11 ಕುಟುಂಬಗಳ 43 ದಿನ ಇತ್ತೀಚೆಗಷ್ಟೇ ಹಿಂದು ಧರ್ಮ ತೊರೆದು, ಕ್ರೈಸ್ತ ಧರ್ಮಕ್ಕೆ ಸೇರಿದ್ದರು. ಅವರಿಂದ ವಾಪಸ್ ಬರುವ ವೇಳೆ ಮೊದಲು ಅವರನ್ನು ಪವಿತ್ರಗೊಳಿಸುವ ಪ್ರಕ್ರಿಯೆ ನಡೆಯಿತು. ಬಳಿಕ ಅವರೆಲ್ಲ ಹಿಂದು ದೇವರ ಪೂಜೆ ನೆರವೇರಿಸಿದರು.