ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆ (kupwara in Jammu and kashmir)ಯಲ್ಲಿ ಇಂದು ಮುಂಜಾನೆಯಿಂದ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಇದುವೆಗೆ ಐವರು ಉಗ್ರರನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದಾರೆ (Terrorists Killed) ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ. ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿಯೇ ಇರುವ ಜುಮಗುಂಡ್ ಎಂಬಲ್ಲಿ ಈ ಎನ್ಕೌಂಟರ್ ನಡೆಯುತ್ತಿದೆ. ಸೇನಾ ಪಡೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದೂ ತಿಳಿಸಿದ್ದಾರೆ. ಹತ್ಯೆಗೀಡಾದ ಐವರೂ ಪಾಕಿಸ್ತಾನಿ ಉಗ್ರರು ಎಂದೂ ಪೊಲೀಸರು ಹೇಳಿದ್ದಾರೆ.
#KupwaraEncounterUpdate: Five (05) foreign #terrorists killed in #encounter. Search in the area is going on: ADGP Kashmir@JmuKmrPolice https://t.co/h6aOuTuSj0
— Kashmir Zone Police (@KashmirPolice) June 16, 2023
ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಭದ್ರಾ ಪಡೆಗಳು ಚುರುಕುಗೊಳಿಸಿವೆ. ಕುಪ್ವಾರಾ ಜಿಲ್ಲೆಯ ದೋಬನಾರ್ ಮಚ್ಚಲ್ ಎಂಬ ಪ್ರದೇಶದಲ್ಲಿ, ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳಲು ಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ರಕ್ಷಣಾ ಸಿಬ್ಬಂದಿ ಕೊಂದು ಹಾಕಿದ್ದರು. ಮೃತ ಉಗ್ರರಿಂದ ಎಕೆ 47, 48 ಮದ್ದುಗುಂಡುಗಳು, 4 ಹ್ಯಾಂಡ್ ಗ್ರೆನೇಡ್ಗಳು, 1 ಪೌಚ್, ಸಿಗರೇಟ್ ಪ್ಯಾಕೆಟ್ಗಳು, ತಿಂಡಿಗಳನ್ನು ಅವರು ವಶಪಡಿಸಿಕೊಂಡಿದ್ದರು.
ಹಾಗೇ, ಕಿಶ್ತ್ವಾರ್ ಜಿಲ್ಲೆಯಲ್ಲಿರುವ ಜಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಗೆ ಸೇರಿದ ಭಯೋತ್ಪಾದಕನೊಬ್ಬನ ಮನೆಯನ್ನು ಜಮ್ಮು-ಕಾಶ್ಮೀರ ಪೊಲೀಸ್ ವಿಶೇಷ ಕಾರ್ಯಾಚರಣೆ ತಂಡದ ಸಿಬ್ಬಂದಿ ಶೋಧ ಮಾಡಿದ್ದಾರೆ. ಆತನ ಹೆಸರು ಮುದಾಸಿರ್ ಅಹ್ಮದ್ ಎಂದಾಗಿದ್ದು, ಟಂಡರ್ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಾನೆ. ಕಳೆದ ವರ್ಷವೇ ಇವನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಇದೀಗ ಜಮ್ಮುವಿನಲ್ಲಿರುವ ವಿಶೇಷ ಎನ್ಐಎ ಕೋರ್ಟ್ನಿಂದ ಆರ್ಡರ್ ಪಡೆದು, ಉಗ್ರನಿಗೆ ಸೇರಿದ ಮನೆಯನ್ನು ಶೋಧಿಸಲಾಗಿದೆ ಎಂದು ಕಿಶ್ತ್ವಾರ ಎಸ್ಪಿ ಖಲಿ ಅಹ್ಮದ್ ಪೋಸ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: Terrorists Killed: ಬಾರಾಮುಲ್ಲಾದಲ್ಲಿ ಇಬ್ಬರು ಲಷ್ಕರೆ ತೊಯ್ಬಾ ಉಗ್ರರ ಹತ್ಯೆ; ಶಸ್ತ್ರಾಸ್ತ್ರ ವಶ