Site icon Vistara News

ಹಾಸಿಗೆ ಹಿಡಿದಿದ್ದ 7ವರ್ಷದ ಬಾಲಕಿ ಮೇಲೆ ಮನೆಯಲ್ಲೇ ರೇಪ್​; ಒಳ ಉಡುಪಲ್ಲಿ ಮಲಗಿದ್ದವಳ ನೋಡಿ ಅಮ್ಮಂಗೆ ಆಘಾತ

Stop Rape

#image_title

ಸಿಕಂದರಾಬಾದ್: ನಿತ್ಯ ಬೆಳಗಾದರೆ ಒಂದಲ್ಲ, ಒಂದು ಕಡೆಯಿಂದ ಅತ್ಯಾಚಾರದ ಸುದ್ದಿಗಳು ವರದಿಯಾಗುತ್ತಿರುತ್ತವೆ. ಪುಟ್ಟ ಮಗುವಿನಿಂದ ಹಿಡಿದು, ವೃದ್ಧೆಯರವರೆಗೆ, ಕೊನೆಗೆ ಪ್ರಾಣಿಗಳನ್ನೂ, ಶವಗಳನ್ನೂ ಬಿಡುತ್ತಿಲ್ಲ ಕಾಮುಕರು. ಈ ಕಾಮಪಿಶಾಚಿಗಳಿಂದ ಹೆಣ್ಣುಮಕ್ಕಳಿಗೆ ತಮ್ಮ ಮನೆಯೂ ಸುರಕ್ಷಿತವಲ್ಲದಂತೆ ಆಗಿದ್ದು ದುರಂತ. ಹೈದರಾಬಾದ್​ನಲ್ಲಿ ಏಳು ವರ್ಷದ ಅಂಗವಿಕಲ ಬಾಲಕಿ ಮೇಲೆ, ಅಪರಿಚಿತನೊಬ್ಬ, ಆಕೆಯ ಮನೆಯಲ್ಲೇ ರೇಪ್​ ಮಾಡಿದ್ದಾನೆ (Hyderabad News). ಪುಟ್ಟ ಹುಡುಗಿಯ ಅಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.

ಸಿಕಂದರಾಬಾದ್​ನ ಮನೆಯೊಂದರಲ್ಲಿ ಅಮ್ಮ-ಮಗಳು ವಾಸವಾಗಿದ್ದು, ಬಾಲಕಿಗೆ ಇನ್ನೂ 7ವರ್ಷ. ಅಂಗವಿಕಲೆಯಾಗಿದ್ದು, ತನ್ನಷ್ಟಕ್ಕೇ ತಾನು ಎದ್ದು ಓಡಾಡಲಾರಳು. ಎಲ್ಲದಕ್ಕೂ ಅಮ್ಮ ಬೇಕು. ಹಾಸಿಗೆ ಹಿಡಿದಿದ್ದಳು..ಮಲಗಿದಲ್ಲಿಯೇ ಇರುತ್ತಿದ್ದಳು. ಸಾಮಾನ್ಯವಾಗಿ ಅಮ್ಮ, ಇವಳನ್ನು ಒಬ್ಬಳನ್ನೇ ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ. ಆದರೆ ಭಾನುವಾರ ತುರ್ತಾಗಿ ಕಿರಾಣಿ ಸಾಮಗ್ರಿಗಳನ್ನು ತರಬೇಕಾದ ಅಗತ್ಯ ಇದ್ದುದರಿಂದ, ಅವರು ಕೆಲವೇ ಹೊತ್ತು ಹೊರಗೆ ಹೋಗಿದ್ದರು. ಅದೂ ಸಮೀಪದ ಅಂಗಡಿಗೇ ಹೋಗಿದ್ದರು. ಬರುವಷ್ಟರಲ್ಲಿ ಅದ್ಯಾರೋ ದುಷ್ಟ ಪುಟ್ಟ ಹುಡುಗಿ ಮೇಲೆ ರೇಪ್ ಮಾಡಿದ್ದ.

ಇದನ್ನೂ ಓದಿ: Karnataka High court: ಡಿಎನ್‌ಎ ವರದಿ ಇಲ್ಲದ ಕಾರಣಕ್ಕೆ ಅತ್ಯಾಚಾರಿಯ ಖುಲಾಸೆ; ಆದೇಶ ರದ್ದುಪಡಿಸಿದ ಹೈಕೋರ್ಟ್‌

ಅಂಗಡಿಯಿಂದ ಬಂದ ತಾಯಿಗೆ ಮಗಳ ಸ್ಥಿತಿ ನೋಡಿ ಆಘಾತವಾಗಿತ್ತು. ಆ ಬಾಲಕಿ ಮೈಮೇಲೆ ಒಳ ಉಡುಪು ಮಾತ್ರವಿತ್ತು. ಮಲಗಿದ್ದ ಬೆಡ್​ ರಕ್ತಸಿಕ್ತವಾಗಿತ್ತು. ರೇಪ್​ ಆಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು. ಸದ್ಯ ಬಾಲಕಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿಯ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆಯ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಫಿಂಗರ್​ಪ್ರಿಂಟ್​ ಚೆಕ್​ ಮಾಡಿದ್ದಾರೆ.

ಇತ್ತೀಚೆಗೆ ಹೈದರಾಬಾದ್​​ನಲ್ಲಿ 15ವರ್ಷದ ಬಾಲಕಿಯೊಬ್ಬಳ ಮೇಲೆ ಗ್ಯಾಂಗ್​ರೇಪ್ ಆಗಿತ್ತು. ಬರ್ತ್​ ಡೇ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಅವಳಿಗೆ, ಜ್ಯೂಸ್​ನಲ್ಲಿ ಅಲ್ಕೋಹಾಲ್​ ಮಿಶ್ರಣ ಮಾಡಿ ಕೊಟ್ಟು ಎಚ್ಚರ ತಪ್ಪಿಸಿ, ಐದು ಜನ ಸೇರಿ ರೇಪ್ ಮಾಡಿದ್ದರು. ಆರೋಪಿಗಳೆಲ್ಲ 18-21 ವರ್ಷದವರೇ ಆಗಿದ್ದರು. ಆ ಹುಡುಗಿಯ ಬಾಯ್​ಫ್ರೆಂಡ್ ಕೂಡ ಅದೇ ಪಾರ್ಟಿಯಲ್ಲಿ ಇದ್ದ. ಅತ್ಯಾಚಾರವಾಗುತ್ತಿದ್ದರೂ ಆತ ಸುಮ್ಮನೇ ಇದ್ದ. ಬಾಲಕಿಯ ಬಾಯ್​ಫ್ರೆಂಡ್ ಮತ್ತು ಆರೋಪಿಗಳೆಲ್ಲರನ್ನೂ ಪೊಲೀಸರು ಬಂಧಿಸಿದ್ದರು.

Exit mobile version