Site icon Vistara News

ಬ್ರಿಟಿಷ್​ ಆಳ್ವಿಕೆಗೂ ಪೂರ್ವ ಭಾರತದಲ್ಲಿ ವಿದ್ಯಾವಂತರ ಪ್ರಮಾಣ ಶೇ.70ರಷ್ಟಿತ್ತು, ಇಂಗ್ಲಿಷರಿಂದಲೇ ವ್ಯವಸ್ಥೆ ಹಾಳಾಯ್ತು: ಮೋಹನ್ ಭಾಗವತ್​

Misconceptions being spread about India to slow down its progress towards becoming vishwaguru: Mohan Bhagwat

Misconceptions being spread about India to slow down its progress towards becoming vishwaguru: Mohan Bhagwat

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಶುರುವಾಗುವುದಕ್ಕೂ ಮೊದಲಿನ ಕಾಲದಲ್ಲಿ ಇಲ್ಲಿನ ಶೇ.70ರಷ್ಟು ಜನರು ಸುಶಿಕ್ಷಿತ (ವಿದ್ಯಾವಂತ)ರಾಗಿದ್ದರು. ಅದೇ ಸಮಯದಲ್ಲಿ ಇಂಗ್ಲೆಂಡ್​​ನಲ್ಲಿ ಶೇ.17ರಷ್ಟು ಜನರು ಮಾತ್ರ ವಿದ್ಯಾವಂತರಾಗಿದ್ದರು. ಆಗ ಭಾರತದಲ್ಲಿ ನಿರುದ್ಯೋಗ ಸಮಸ್ಯೆಯೇ ಇರಲಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಹೇಳಿದರು. ‘ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದೇ ಬ್ರಿಟಿಷರು’ ಎಂದೂ ಅವರು ಪ್ರತಿಪಾದಿಸಿದರು.

ಹರ್ಯಾಣದ ಇಂಡ್ರಿ-ಕರ್ನಾಲ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಮೋಹನ್ ಭಾಗವತ್​, ಬಳಿಕ ಮಾತನಾಡಿ, ‘ಬ್ರಿಟಿಷರು ಇಲ್ಲಿಗೆ ಬರುವುದಕ್ಕೂ ಮೊದಲು ನಮ್ಮ ದೇಶದಲ್ಲಿ ಶೇ.70ರಷ್ಟು ಮಂದಿ ಸುಶಿಕ್ಷಿತರು ಇದ್ದರು. ಇಂಗ್ಲೆಂಡ್​​ನಲ್ಲಿ ಶಿಕ್ಷಣ ಪಡೆಯುವಿಕೆ ಪ್ರಮಾಣ ಶೇ.17ರಷ್ಟು ಇತ್ತು. ಇಲ್ಲಿಗೆ ಬಂದ ಬ್ರಿಟಿಷರು ನಮ್ಮಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ತಮ್ಮ ದೇಶದಲ್ಲಿ ಅನುಷ್ಠಾನಕ್ಕೆ ತಂದರು. ಹಾಗೇ, ಅವರ ದೇಶದ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ದೇಶದಲ್ಲಿ ಜಾರಿಗೊಳಿಸಿದರು. ಅದೇ ಕಾರಣಕ್ಕೆ ಭಾರತದ ಶಿಕ್ಷಣ ವ್ಯವಸ್ಥೆ ಹಾಳಾಯಿತು. ನಮ್ಮಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಾಗಿ, ಅವರ ದೇಶದಲ್ಲಿ ಸುಶಿಕ್ಷಿತರ ಪ್ರಮಾಣ ಜಾಸ್ತಿಯಾಯಿತು’ ಎಂದು ಮೋಹನ್​ ಭಾಗವತ್​ ಹೇಳಿದರು.

ಇದನ್ನೂ ಓದಿ: ಮಾಂಸಾಹಾರ ಸೇವನೆ ಮಾಡುವವರಿಗೆ ಸಲಹೆಯೊಂದನ್ನು ಕೊಟ್ಟ ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​

ಬ್ರಿಟಿಷ್​ ಆಳ್ವಿಕೆಗೂ ಪೂರ್ವ ನಮ್ಮ ದೇಶದಲ್ಲಿದ್ದ ಶಿಕ್ಷಣ ವ್ಯವಸ್ಥೆ ಕೇವಲ ಉದ್ಯೋಗಕ್ಕಾಗಿ ಇರಲಿಲ್ಲ. ಅಪಾರ ಜ್ಞಾನ ನೀಡುತ್ತಿತ್ತು. ದುಬಾರಿಯಾಗಿರಲಿಲ್ಲ, ಕೈಗೆಟಕುವ ಬೆಲೆಯಿತ್ತು. ಹೀಗಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬಹುದಿತ್ತು. ಅಂದಿನ ಶಿಕ್ಷಣ ಪಡೆದು ವಿದ್ವಾಂಸರಾದವರು, ಕಲಾವಿದರೆಲ್ಲ ಜಗತ್ತಿನಾದ್ಯಂತ ಗುರುತಿಸಲ್ಪಟ್ಟಿದ್ದಾರೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ನಮ್ಮ ದೇಶದ ಎರಡು ಅತ್ಯಗತ್ಯಗಳು. ಔಷಧಗಳು ಮತ್ತು ಶಿಕ್ಷಣ ಎರಡೂ ನಮ್ಮ ದೇಶದಲ್ಲಿ ದುಬಾರಿಯಾಗುತ್ತಿವೆ. ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆಗಳು ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು. ಭಾರತೀಯರು ಯಾವತ್ತೂ ಕೇವಲ ಅವರಿಗಾಗಿಯಷ್ಟೇ ಬದುಕುವವರು ಅಲ್ಲ. ಎಲ್ಲರ ಕಲ್ಯಾಣ ಮತ್ತು ಎಲ್ಲರಿಗೂ ಸಂತೋಷ ಎಂಬುದು ನಮ್ಮ ಸಂಸ್ಕೃತಿ. ಸಮಾಜವನ್ನು ಸದೃಢಗೊಳಿಸಿದಾಗಷ್ಟೇ ದೇಶವೂ ಬಲಗೊಳ್ಳುತ್ತ ಹೋಗುತ್ತದೆ’ ಎಂದು ಹೇಳಿದರು.

Exit mobile version