ನವ ದೆಹಲಿ: ಭಾರತದ ಏಳು ಮತ್ತು ಪಾಕಿಸ್ತಾನ ಮೂಲದ ಒಂದು ಸೇರಿ ಒಟ್ಟು 8 ಯೂಟ್ಯೂಬ್ ನ್ಯೂಸ್ ಚಾನೆಲ್ಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ (8 YouTube news channels Blocked). 2021ರ ಐಟಿ ನಿಯಮ (ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ)ದಡಿ ಇವುಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಎಂಟೂ ಯೂಟ್ಯೂಬ್ ಚಾನೆಲ್ಗಳೂ ಸೇರಿ ಒಟ್ಟಾರೆ 114 ಕೋಟಿಗೂ ಹೆಚ್ಚು ವೀಕ್ಷಕರು, 85 ಲಕ್ಷದ 73 ಸಾವಿರ ಸಬ್ಸ್ಕ್ರೈಬರ್ಗಳು ಇದ್ದಾರೆ. ಈ ಚಾನಲ್ಗಳು ಭಾರತ ವಿರೋಧಿ ವಿಷಯಗಳನ್ನು ಬಿತ್ತರಿಸುತ್ತಿದ್ದವು. ದೇಶದ ಭದ್ರತೆ, ವಿದೇಶಾಂಗ ವ್ಯವಹಾರಗಳು, ಸಾರ್ವಜನಿಕ ಸುವ್ಯವಸ್ಥೆ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದವು. ಹಾಗಾಗಿಯೇ ನಿಷೇಧಿಸಲಾಗಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಹಾಗೇ, ಒಂದು ಫೇಸ್ಬುಕ್ ಅಕೌಂಟ್ ಕೂಡ ನಿಷೇಧಿಸಲಾಗಿದೆ.
ಈ ಯೂಟ್ಯೂಬ್ ನ್ಯೂಸ್ ಚಾನೆಲ್ಗಳು ಗಿಮಿಕ್ ಮಾಡುತ್ತಿದ್ದವು. ನಕಲಿ ಮತ್ತು ಸೆನ್ಸೇಶನಲ್ ಆಗಿರುವ ಥಂಬ್ನೇಲ್ಗಳನ್ನು ಹಾಕಿ ವಿಡಿಯೋ ಪೋಸ್ಟ್ ಮಾಡುತ್ತಿದ್ದವು. ಆ್ಯಂಕರ್ಗಳ, ಆ ನ್ಯೂಸ್ ಚಾನೆಲ್ಗಳ ಲೋಗೋಗಳನ್ನು ಹಾಕಿ, ನಾವು ಸತ್ಯವನ್ನೇ ಹೇಳುತ್ತಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದವು. ಆದರೆ ಆ ವಿಡಿಯೋ ಪೂರ್ತಿಯಾಗಿ ದೇಶ ವಿರೋಧಿ ವಿಷಯಗಳನ್ನೇ ತುಂಬಿಕೊಂಡಿರುತ್ತಿತ್ತು. ಭಾರತದಲ್ಲಿ ಕೋಮು ಸೌಹಾರ್ದತೆ ಕದಡುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಚಾರಗಳನ್ನೇ ಬಿತ್ತರಿಸುತ್ತಿದ್ದವು. ಅಷ್ಟೇ ಅಲ್ಲ ಭಾರತದ ಸೈನ್ಯ, ಜಮ್ಮು-ಕಾಶ್ಮೀರದ ಬಗ್ಗೆಯೂ ಅನೇಕ ನಕಲಿ-ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದವು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಇಲ್ಲಿದೆ ನೋಡಿ ನಿರ್ಬಂಧಿತ ಯೂಟ್ಯೂಬ್ ಚಾನೆಲ್ಗಳು ಮತ್ತು ಅವು ಹೊಂದಿದ್ದ ಸಬ್ಸ್ಕ್ರೈಬರ್ಗಳ ವಿವರದ ಪಟ್ಟಿ..
1. ಲೋಕತಂತ್ರ ಟಿವಿ (Loktantra Tv) – 23,72,27,331 ವೀಕ್ಷಣೆಗಳು ಮತ್ತು 12.90 ಲಕ್ಷ ಸಬ್ಸ್ಕ್ರೈಬರ್ಸ್
2. ಯು & ವಿ ಟಿವಿ ( U&V TV) – 14,40,03,291 ವೀವರ್ಸ್ ಮತ್ತು 10.20 ಲಕ್ಷ ಸಬ್ಸ್ಕ್ರೈಬರ್ಸ್
3. ಎಎಂ ರಜ್ವಿ (AM Razvi) – ವೀಕ್ಷಣೆಗಳು-1,22,78,194, ಚಂದಾದಾರರು-95, 900
4. ಗೌರವಶಾಲಿ ಪವನ್ ಮಿಥಿಲಾಂಚಲ್ (Gouravshali Pawan Mithilanchal)- ವೀಕ್ಷಣೆಗಳು- 15,99,32,594 , ಸಬ್ಸಕ್ರೈಬರ್ಗಳು -7 ಲಕ್ಷ.
5. ಸೀ ಟಾಪ್ 5TH (SeeTop5TH) – 24,83,64,997 ವೀವ್ಸ್, 33.50 ಲಕ್ಷ ಸಬ್ಸ್ಕ್ರೈಬರ್ಸ್
6. ಸರ್ಕಾರಿ ಅಪ್ಡೇಟ್ (Sarkari Update) -70,41,723 ವೀವ್ಸ್ ಮತ್ತು 80,900 ಸಬ್ಸ್ಕ್ರೈಬರ್ಸ್.
7. ಸಬ್ ಕುಚ್ ದೇಖೋ (Sab Kuch Dekho) -32,86,03,227 ವೀವ್ಸ್ ಮತ್ತು 19.40 ಲಕ್ಷ ಸಬ್ಸ್ಕ್ರೈಬರ್ಸ್
8. ನ್ಯೂಸ್ ಕೀ ದುನಿಯಾ (News ki Dunya) ಇದು ಪಾಕಿಸ್ತಾನ ಮೂಲದ ಯೂಟ್ಯೂಬ್ ಆಗಿದ್ದು, 61,69,439 ವೀಕ್ಷಣೆಗಳು ಮತ್ತು 97,000 ಸಾವಿರ ಚಂದಾದಾರರನ್ನು ಹೊಂದಿತ್ತು.
ಈ ಎಲ್ಲ ಯೂಟ್ಯೂಬ್ ಚಾನಲ್ಗಳೊಟ್ಟಿಗೆ ಲೋಕತಂತ್ರ ಟಿವಿಯ ಫೇಸ್ಬುಕ್ ಅಕೌಂಟ್ ಕೂಡ ನಿರ್ಬಂಧಗೊಂಡಿದೆ.
ಇದನ್ನೂ ಓದಿ: ಯೂಟ್ಯೂಬ್ನಲ್ಲಿ ಟ್ರೆಂಡ್ ಆದ ಪೊನ್ನಿಯನ್ ಸೆಲ್ವನ್ ಟೀಸರ್, ನಟಿ ಐಶ್ವರ್ಯಾ ರೈ ಲುಕ್‌ಗೆ ಜನ ಫಿದಾ