Site icon Vistara News

Meghalaya Nagaland Election: ಮೇಘಾಲಯದಲ್ಲಿ 74%, ನಾಗಾಲ್ಯಾಂಡ್‌ನಲ್ಲಿ 82ರಷ್ಟು ಮತದಾನ

Meghalaya

ಮೇಘಾಲಯ ಚುನಾವಣೆ

ಶಿಲ್ಲಾಂಗ್‌\ಕೊಹಿಮಾ: ಈಶಾನ್ಯ ರಾಜ್ಯಗಳಾದ ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ (Meghalaya Nagaland Election) ಸೋಮವಾರ ಶಾಂತಿಯುತವಾಗಿ ಮತದಾನ ನಡೆದಿದೆ. ಮೇಘಾಲಯದಲ್ಲಿ ಶೇ.೭೪ರಷ್ಟು ಮತದಾನ ದಾಖಲಾದರೆ, ನಾಗಾಲ್ಯಾಂಡ್‌ನಲ್ಲಿ ಶೇ.೮೧.೯೪ರಷ್ಟು ಮತದಾನ ದಾಖಲಾಗಿದೆ.

ಬೆಳಗ್ಗೆ ಏಳುಗಂಟೆಯಿಂದಲೇ ಮತಗಟ್ಟೆಗಳತ್ತ ಜನ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಮಧ್ಯಾಹ್ನ ಮತದಾನ ಪ್ರಮಾಣ ತುಸು ಕಡಿಮೆ ಎನಿಸಿದರೂ, ಸಂಜೆಯಾಗುತ್ತಲೇ ಜನ ಉತ್ಸಾಹದಿಂದ ಮತ ಚಲಾವಣೆ ಮಾಡಿದರು. ಎರಡೂ ರಾಜ್ಯಗಳ ಬಹುತೇಕ ಕಡೆ ಶಾಂತಿಯುತವಾಗಿಯೇ ಮತದಾನ ನಡೆದಿದೆ.

ಮೇಘಾಲಯದ ಒಟ್ಟು ೬೦ ಕ್ಷೇತ್ರಗಳ ಪೈಕಿ ೫೯ ಹಾಗೂ ನಾಗಾಲ್ಯಾಂಡ್‌ನ ಒಟ್ಟು ೬೦ ಕ್ಷೇತ್ರಗಳ ಪೈಕಿ ೫೯ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ ಚುನಾವಣೆಗಳ ಫಲಿತಾಂಶ ಮಾರ್ಚ್‌ ೨ರಂದು ಪ್ರಕಟವಾಗಲಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ಎಲ್ಲ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಪ್ರಾಮುಖ್ಯತೆ ಪಡೆದಿವೆ.

ಇದನ್ನೂ ಓದಿ: Meghalaya Election 2023: ಮೇಘಾಲಯ ಮತದಾರರ ಪಟ್ಟಿಯಲ್ಲಿವೆ ರೊನಾಲ್ಡೊ, ಪೀಲೆ, ಮರಡೋನಾ ಹೆಸರುಗಳು!

Exit mobile version